ಈತ ಬ್ಯಾಟಿಂಗ್ ನಡೆಸಿದ್ರೆ, ಸಿಡಿಲಬ್ಬರ. ರನ್ ಕೊಳ್ಳೆ ಹೊಡಿತಾನೆ. ಘಟಾನುಘಟಿ ಬೌಲರ್ ಆದ್ರೂ ದಂಡಂ ದಶಗುಣಂ ಮಂತ್ರಪಟಿಸ್ತಾರೆ. ಆದ್ರೆ ಇಂಥಹ ಬ್ಯಾಟ್ಸ್ಮನ್ಗೇ ಚಾನ್ಸ್ ಕೊಡದೇ ಬೆಂಚ್ ಬಿಸಿ ಮಾಡಲಾಗ್ತಿದೆ.
ಟೀಮ್ ಇಂಡಿಯಾಗೆ ಆಯ್ಕೆಯಾಗೋದು ಅಂದ್ರೆ ಸುಲಭದ ಮಾತಲ್ಲ. ಟೆಸ್ಟ್, ಒನ್ಡೇ, T20, ಮೂರು ಫಾರ್ಮೆಟ್ನಲ್ಲೂ ಸಿಕ್ಕಾಪಟ್ಟೆ ಕಾಂಪಿಟೇಷನ್ ಏರ್ಪಟ್ಟಿದೆ. ಒಂದ್ವೇಳೆ ತಂಡಕ್ಕೆ ಸೆಲೆಕ್ಟ್ ಆದ್ರು, ಪ್ಲೇಯಿಂಗ್ ಇಲೆವನ್ನಲ್ಲಿ ಚಾನ್ಸ್ ಸಿಗೋದು ಅನುಮಾನ. ಎಷ್ಟೇ ಟ್ಯಾಲೆಂಟ್ ಇದ್ರು, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಏನೇ ಸಾಧನೆ ಮಾಡಿದ್ರು ಬೆಂಚ್ ಕಾಯೋದು ತಪ್ಪಲ್ಲ. ಸದ್ಯ ಪೃಥ್ವಿ ಶಾ ಪರಿಸ್ಥಿತಿ ಇದೇ ಆಗಿದೆ.
1 ವರ್ಷ 6 ತಿಂಗಳ ಬಳಿಕ ಎಂಟ್ರಿಕೊಟ್ಟು ಬೆಂಚ್ ಕಾಯ್ತಿರುವ ಪೃಥ್ವಿ
1 ವರ್ಷ 6 ತಿಂಗಳ ಬಳಿಕ ರಿ ಎಂಟ್ರಿ. ಆದ್ರೆ ಪೃಥ್ವಿ ಶಾಗೆ ಮತ್ತೆ ಚಾನ್ಸ್ ಮಿಸ್ ಮಾಡಲಾಗ್ತಿದೆ. ಸ್ಫೋಟಕ ಆಟಗಾರನಿಗೆ ಮತ್ತೆ ಮತ್ತೆ ಆಟದಿಂದ ಹೊರಗಿಡಲಾಗ್ತಿದೆ. ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸುವ ಪೃಥ್ವಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡಲು ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಪವರ್ ಪ್ಲೇನಲ್ಲಿ ಸಿಡಿದೇಳುವ ಮತ್ತು ರನ್ ಶಿಖರ್ ಕಟ್ಟುವ ಯಂಗ್ಬ್ಯಾಟರ್ಗೆ ಕಿವೀಸ್ ಸಿರೀಸ್ನಲ್ಲಿ ಚಾನ್ಸ್ ಕೊಡದೇ ಬೆಂಚ್ ಬಿಸಿ ಮಾಡಲಾಗ್ತಿದೆ.
ಟಿ20 ಕ್ರಿಕೆಟ್ನಲ್ಲಿ ನಡೀತಿಲ್ಲಾ ಶುಭ್ಮನ್ ದರ್ಬಾರ್
ನಿಜ, ಏಕದಿನ ಕ್ರಿಕೆಟ್ನಲ್ಲಿ ಭವಿಷ್ಯದ ಸೂಪರ್ ಸ್ಟಾರ್ ಶುಭ್ಮನ್ ಗಿಲ್ ಅತ್ಯದ್ಭುತ ಫಾರ್ಮ್ನಲ್ಲಿದ್ದಾರೆ. ದಾಖಲೆಗಳ ಬೇಟೆಯಾಡ್ತಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ. ಆದ್ರೆ, ಟಿ20 ಕ್ರಿಕೆಟ್ನಲ್ಲಿ ಅದು ನೆರವೇರ್ತಿಲ್ಲ. ಪದೇ ಪದೇ ಫ್ಲಾಪ್ ಆಗ್ತಿರುವ ಗಿಲ್, ಬಿಗ್ ಇನ್ನಿಂಗ್ಸ್ ಕಟ್ಟೋಕೆ ಪರದಾಡ್ತಿದ್ದಾರೆ. ಇದು ಟೀಮ್ ಇಂಡಿಯಾ ಹಿನ್ನಡೆಗೂ ಕಾರಣವಾಗ್ತಿದೆ. ಜೊತೆಗೆ ಓಪನಿಂಗ್ನಲ್ಲಿ ಇಂಪ್ಯಾಕ್ಟ್ ತೋರಿಸ್ತಿಲ್ಲ.
T20 ಕ್ರಿಕೆಟ್ನಲ್ಲಿ 5 ಪಂದ್ಯವಾಡಿದ್ರೂ ದೊಟ್ಟ ಇನ್ನಿಂಗ್ಸ್ ಕಟ್ಟದ ಗಿಲ್ಗೆ ಪದೆ, ಪದೇ ಅವಕಾಶ ನೀಡ್ತಾ ಇರೋದ್ಯಾಕೆ? ತಂಡಕ್ಕೆ ಆಯ್ಕೆ ಮಾಡಿ, ಪೃಥ್ವಿಯನ್ನ ಬೆಂಚ್ಗೆ ಸೀಮಿತ ಮಾಡಿರೋ ಟೀಮ್ ಮ್ಯಾನೇಜ್ಮೆಂಟ್ ನಡೆ ಎಷ್ಟು ಸರಿ? ದೇಶೀ T20 ಕ್ರಿಕೆಟ್ನಲ್ಲಿ ಅಬ್ಬರಿಸಿದ್ರೂ ಪೃಥ್ವಿಗೆ ಸಿಕ್ತಿರೋ ಗೌರವ. ಎರಡು ಪಂದ್ಯಗಳಿಂದ ಬೆಂಚ್ ಕಾಯಿಸೋ ಬದಲು ಅವಕಾಶ ನೀಡಬಹುದಿತ್ತಲ್ವಾ?.
ಶತಕಗಳ ಸರದಾರ ಎಂಬ ಕಾರಣಕ್ಕೆ ಗಿಲ್ಗೆ ಚಾನ್ಸ್ ನೀಡಲಾಗ್ತಿದ್ಯಾ
ಏಕದಿನದಲ್ಲಿ ಶತಕಗಳ ಮೇಲೆ ಶತಕ ಸಿಡಿಸ್ತಿದ್ದಾರೆ ಎಂಬ ಕಾರಣಕ್ಕೆ ಗಿಲ್ಗೆ ಚಾನ್ಸ್ ಮೇಲೆ ಚಾನ್ಸ್ ನೀಡಲಾಗ್ತಿದ್ಯಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಈ ಸಿಂಪಥಿ ಕಾರಣದಿಂದ ಮೋಸ ಮಾಡ್ತಿರೋದು ಎಷ್ಟು ಸರಿ?. ಪೃಥ್ವಿ ಆರಂಭಿಕನಾಗಿ ರನ್ ಕೊಳ್ಳೆ ಹೊಡೆಯುತ್ತಾನೆ. ಸ್ಟ್ರೈಕ್ರೇಟ್ ಅದ್ಭುತವಾಗಿದ್ದು, ಬೆಂಕಿ- ಬಿರುಗಾಳಿ ಆಟವಾಡ್ತಾರೆ. ಟಿ20 ಕ್ರಿಕೆಟ್ನಲ್ಲಿ ಗಿಲ್ಗೆ ಕಂಪೇರ್ ಮಾಡಿದ್ರೆ, ಪೃಥ್ವಿ ಎಲ್ಲದ್ರಲ್ಲೂ ಮುಂದಿದ್ದಾರೆ.
ಗಿಲ್ಗಿಂತ ಅದ್ಭುತವಾಗಿದೆ ಪೃಥ್ವಿ ಸ್ಟ್ರೈಕ್ರೇಟ್
ಶುಭ್ಮನ್ ಗಿಲ್ ಒಬ್ಬ ಅದ್ಭುತ ಬ್ಯಾಟರ್ ಅನ್ನೋದ್ರಲ್ಲಿ ಅನುಮಾನ ಇಲ್ಲ. ಆದ್ರೆ, T20 ಕ್ರಿಕೆಟ್ಗೆ ಸಂಬಂಧಿಸಿ ಕೆಲ ನ್ಯೂನತೆಗಳನ್ನ ಎದುರಿಸ್ತಿದ್ದಾರೆ. ಸ್ಪಿನ್ ಮತ್ತು ಬೌನ್ಸ್ನಲ್ಲಿ ಸರಿಯಾಗಿ ವರ್ಕೌಟ್ ಮಾಡಬೇಕಿದೆ. ಅದೇ ಪೃಥ್ವಿ ಶಾರನ್ನ ನೋಡಿ, ಎಂಥಹದ್ದೇ ಪಿಚ್ನಲ್ಲಾದ್ರೂ, ಅಗ್ರೆಸ್ಸಿವ್ ಆಟವಾಡ್ತಾರೆ. ಇನ್ನ ಟಿ20 ಕ್ರಿಕೆಟ್ನಲ್ಲಿ ಪೃಥ್ವಿ ಶಾ ಸ್ಟ್ರೈಕ್ರೇಟ್ ಮುಂದೆ ಗಿಲ್ ಏನೇನೂ ಇಲ್ಲ.
ಇದನ್ನು ಓದಿ: ವಾವ್.. ಐಪಿಎಲ್ಗೆಂದೇ ರೆಡಿಯಾಗಿದೆ ಈ ಸ್ಟೇಡಿಯಂ! ಪಿಚ್ ಪರಿಶೀಲನೆ ಬಾಕಿ ಇದೆ
T20 ಕ್ರಿಕೆಟ್ನಲ್ಲಿ ಪೃಥ್ವಿ ಶಾ ಆಕ್ರಮಣಕಾರಿ ಆಡ್ತಾರೆ ಅನ್ನೋದಕ್ಕೆ ಅವರ ಸ್ಟ್ರೈಕ್ರೇಟ್ಗಿಂತ ಬೆಸ್ಟ್ ಎಕ್ಸಾಂಪಲ್ ಬೇಕಾಗಿಲ್ಲ. 151.67ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸುವ ಈ ಮುಂಬೈಕರ್, ಕ್ಷಣಾರ್ಧದಲ್ಲಿ ಸ್ಕೋರ್ಕಾರ್ಡ್ನಲ್ಲಿ ರನ್ ಹೊಳೆಹರಿಸ್ತಾರೆ. ಆದ್ರೆ, ಕೂಲಾಗಿ ಬ್ಯಾಟ್ ಬೀಸುವ ಗಿಲ್ ಸ್ಟ್ರೈಕ್ರೇಟ್ ಜಸ್ಟ್ 128.72 ಇದೆ. ಇಷ್ಟೆಲ್ಲಾ ಇದ್ರೂ, ಯಂಗ್ ಟ್ಯಾಲೆಂಟೆಡ್ ಬ್ಯಾಟ್ಸ್ಮನ್ ಪೃಥ್ವಿ ಶಾರನ್ನ ಕಡೆಗಣನೆ ಮಾಡ್ತಿರೋದು ಎಷ್ಟು ಸರಿ? ಅಂತಿಮ T20 ಪಂದ್ಯದಲ್ಲಾದ್ರೂ ಪೃಥ್ವಿಗೆ ಚಾನ್ಸ್ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post