ರಾಜಸ್ಥಾನ: ಮುಂಬರುವ ಐಪಿಎಲ್ ಸೀಜನ್ನಲ್ಲಿ ಜೋಧಪುರ್ನಲ್ಲಿನ ಬರ್ಕತುಲ್ಲಾ ಖಾನ್ ಕ್ರೀಡಾಂಗಣದಲ್ಲಿ ಬಿಸಿಸಿಐ ಕೆಲ ಪಂದ್ಯಗಳನ್ನ ಆಯೋಜನೆ ಮಾಡಬಹುದು ಎಂದು ರಾಜಸ್ಥಾನದ ಕ್ರಿಕೆಟ್ ಅಸೋಸಿಯೇಷನ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಈಗಾಗಲೇ ರಾಜಸ್ಥಾನ ರಾಯಲ್ಸ್ ಟೀಮ್ನ ಹೋಂ ಪಿಚ್ ಆಗಿದೆ. ಒಂದು ವೇಳೆ ಬಿಸಿಸಿಐ ಬರ್ಕತುಲ್ಲಾ ಖಾನ್ ಸ್ಟೇಡಿಯಂ ಅಲ್ಲಿ ಐಪಿಎಲ್ ಪಂದ್ಯಗಳನ್ನ ಆಡಿಸಿದರೆ, ಅದು ಕೂಡ ರಾಜಸ್ಥಾನ ಟೀಮ್ಗೆ ಅನುಕೂಲವಾಗಲಿದೆ. ತವರಿನಲ್ಲಿ 2 ಪಿಚ್ಗಳನ್ನ ಹೊಂದಿದಂತೆ ಆಗುತ್ತದೆ ಎಂದು ಹೇಳಿದರು.
ಬಿಸಿಸಿಐ ಪಿಚ್ ಪರಿಶೀಲನೆಗೆ ಅಧಿಕಾರಿಗಳ ತಂಡವೊಂದನ್ನ ಜೋಧಪುರಕ್ಕೆ ಕಳುಹಿಸಬೇಕಿದೆ. ಅವರು ಬಂದು ಮೂಲ ಸೌಕರ್ಯ, ಪಾರ್ಕಿಂಗ್ ಹಾಗೂ ಸಂಪೂರ್ಣ ಪಿಚ್ ಅನ್ನು ಪರಿಶೀಲನೆ ಮಾಡಿ ವರದಿ ಸಿದ್ಧ ಪಡಿಸುತ್ತಾರೆ. ಬಳಿಕ ಆ ವರದಿಯನ್ನ ಐಪಿಎಲ್ ಆಡಳಿತ ಮಂಡಳಿಗೆ ಕಳುಹಿಸಲಾಗುತ್ತದೆ. ಆ ಮಂಡಳಿಯು ಜೋಧಪುರದ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಬೇಕೋ, ಬೇಡವೇ ಎಂದು ರಾಜಸ್ತಾನ್ ಕ್ರಿಕೆಟ್ ಅಸೋಸಿಯೇಷನ್ಗೆ ತಿಳಿಸುತ್ತಾರೆ. ಅಲ್ಲಿವರೆಗೆ ಯಾವುದೇ ಪಂದ್ಯಗಳನ್ನ ಇಲ್ಲಿ ಆಯೋಜನೆ ಮಾಡುವುದಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post