ಇನ್ಗ್ರಾಮ್ನಲ್ಲಿ 1 ಮಿಲಿಯನ್ ಫಾಲೋವರ್ಸ್. ಯ್ಯೂಟ್ಯೂಬ್ನಲ್ಲಿ 3 ಲಕ್ಷ ಸಬ್ಸ್ಕ್ರೈಬರ್ಸ್. ಈಕೆಯ ವಯಸ್ಸು ಕೇವಲ 10 ವರ್ಷ. ಈ ಹುಡುಗಿಯ ಡ್ಯಾನ್ಸ್ ಸಖತ್ ಬಿಂದಾಸ್. ಎಲ್ಲಾ ಆ್ಯಂಗಲ್ನಲ್ಲೂ ಈಕೆ ಟಾಲಿವುಡ್ನ ಫ್ಯೂಚರ್ ಹೀರೋಯಿನ್ ಅಂತಾನೇ ಹೇಳ್ತಿದ್ದಾರೆ. ಸೀತಾರ ಗಟ್ಟಮನೇನಿ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವ್ರ ಪುತ್ರಿ. ಸದ್ಯ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಗಮನ ಸೆಳಿತಿರೋ ಸ್ಟಾರ್ ಕಿಡ್.
ಸೀತಾರ ಗುಡ್ ಡ್ಯಾನ್ಸರ್ ಅಂತಾ ಇಡೀ ಇಂಡಸ್ಟ್ರಿಗೆ ಗೊತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂಡಿಪೆಂಡೆಂಟ್ ಆಗಿ ಕೆಲವು ಕಾರ್ಯಕ್ರಮಗಳನ್ನ ಮಾಡೋ ಸೀತಾರ ತಂದೆಗೆ ತಕ್ಕ ಮಗಳು. ಅಪ್ಪನ ಸಿನಿಮಾಗಳಿಗೆ ಸ್ಟಾರ್ ಪ್ರಮೋಟರ್. ಸೀತಾರ ಈಗ ಲೆಟೆಸ್ಟ್ ವಿಡಿಯೋವೊಂದು ಶೇರ್ ಮಾಡಿದ್ದಾರೆ. ಮಹೇಶ್ ಬಾಬು ನಟನೆಯ ಆಥಡು ಚಿತ್ರದಲ್ಲಿ ತ್ರಿಷಾ ಹೆಜ್ಜೆ ಹಾಕಿರೋ ಹಾಡಿಗೆ ಸಿತಾರ ಸ್ಟೆಪ್ ಹಾಕಿದ್ದು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿದೆ.
ತಾರ ಡ್ಯಾನ್ಸ್ಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ಸಿತಾರ ಯಾವುದೇ ಹೊಸ ಡ್ಯಾನ್ಸ್ ವಿಡಿಯೋ ಹಾಕಿದ ಕೂಡಲೇ ಫಸ್ಟ್ ಕಾಮೆಂಟ್, ಫಸ್ಟ್ ಶೇರ್ ಮಾಡೋ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಅಪ್ಪ ಸೂಪರ್ಸ್ಟಾರ್ ಆದರೆ ಮಗಳು ಫ್ಯೂಚರ್ ಹೀರೋಯಿನ್. ಸೀತಾರ ಈಗಿಂದಲೇ ಸಿನಿಮಾ ಇಂಡಸ್ಟ್ರಿ ಜೊತೆ ಒಳ್ಳೆಯ ರಿಲೇಶನ್ಷಿಪ್ ಹೊಂದಿದ್ದಾರೆ. ಅಪ್ಪನ ಸಿನಿಮಾ ಮಾತ್ರವಲ್ಲ ಬೇರೆಯವರ ಚಿತ್ರಗಳನ್ನ ಪ್ರಮೋಟ್ ಮಾಡ್ತಾರೆ. ಸೀತಾರ ಎನರ್ಜಿ, ಇಂಟ್ರೆಸ್ಟ್, ಟ್ಯಾಲೆಂಟ್ ಹಾಗೂ ಬ್ಯೂಟಿ ಎಲ್ಲವನ್ನ ಗಮನಿಸ್ತಿರೋ ಪ್ರೊಡ್ಯೂಸರ್ಸ್ ಸೀತಾರನ ಯಾವಾಗ ಹೀರೋಯಿನ್ ಮಾಡೋದಂತು ಲೆಕ್ಕಾಚಾರ ಹಾಕ್ತಾ ಇದ್ದಾರೆ.
View this post on Instagram
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post