ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಸುತ್ತ ಆತಂಕ ಹಾಗೆ ಇದೆ. ಟ್ರೀಟ್ಮೆಂಟ್ ಕೊಡ್ತಿದ್ದೇವೆ, ರೆಸ್ಪಾನ್ಸ್ ಮಾಡ್ತಿದ್ದಾರೆ. ಆದರೆ ಚೇತರಿಕೆ ಇಲ್ಲ. ಸ್ಟೇಬಲ್ ಆಗಿದ್ದಾರೆ. ತಾರಕರತ್ನ ನಂದಮೂರಿ ಫ್ಯಾಮಿಲಿ ಜೊತೆ ಇಲ್ಲ. ತಂದೆ ಜೊತೆಯೂ ಸಂಬಂಧ ಅಷ್ಟಕ್ಕಷ್ಟೇ. ಹನ್ನೊಂದು ವರ್ಷದ ಹಿಂದೆ ನಡೆದ ಆ ಒಂದು ಘಟನೆ ತಾರಕರತ್ನ ಲೈಫ್ಲ್ಲಿ ಏನೇನೋ ಮಾಡಿಬಿಡ್ತು. ನಂದಮೂರಿ ತಾರಕರತ್ನ. ಕಳೆದ ಶುಕ್ರವಾರ ಸಂಜೆ ಆಂಧ್ರಪ್ರದೇಶದ ಕುಪ್ಪಂನಲ್ಲಿ ಟಿಡಿಪಿ ನಾಯಕ ನರಾ ಲೋಕೇಶ್ ಸಾರಥ್ಯದಲ್ಲಿ ಯುವಗಲಂ ಪಾದೆಯಾತ್ರೆ ಆರಂಭವಾಗಿತ್ತು.
ಈ ಪಾದೆಯಾತ್ರೆಯಲ್ಲಿ ಪಾಲ್ಗೊಂಡಿದ್ದ ತಾರಕರತ್ನ ಜನರ ನಡುವೆ ಹೆಜ್ಜೆ ಹಾಕುತ್ತಿರುವಾಗಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಗಾಬರಿಗೊಂಡ ಜನ ತಾರಕರತ್ನ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸ್ಥಳಿಯ ಆಸ್ಪತ್ರೆಗೆ ಸೇರಿಸಿದ್ರು. ನಂತರ ಅಲ್ಲಿಂದ ಪಿಇಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಲೇ ಗೊತ್ತಾಗಿದ್ದು ತಾರಕರತ್ನಗೆ ಹೃದಯಾಘಾತ ಆಗಿದ್ದು, ಹೃದಯದ ಎಡಭಾಗದಲ್ಲಿ ಶೇಕಡಾ 90 ರಷ್ಟು ಬ್ಲಾಕ್ ಆಗಿದೆ ಅಂತೆ.
39 ವರ್ಷದ ತಾರಕರತ್ನಗೆ ಮೊದಲ ಸಲ ಹೃದಯಾಘಾತ ಆಗಿತ್ತು. ಹೃದಯಕ್ಕೆ ರಕ್ತ ಸಂಚಲನ ಸರಿಯಾಗಿ ಆಗ್ತಿರಲಿಲ್ಲ. ಪರಿಸ್ಥಿತಿ ಹದೆಗೆಡುತ್ತಿತ್ತು. ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಟ್ಟರು ತಾರಕರತ್ನ ಸ್ಪಂದಿಸಿಲ್ಲ. ಇದು ವೈದ್ಯರನ್ನ ಇನ್ನಷ್ಟು ಆತಂಕಕ್ಕೀಡು ಮಾಡ್ತು. ಕೂಡಲೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಬೆಂಗಳೂರಿಗೆ ಶಿಫ್ಟ್ ಮಾಡಬೇಕು ಅಂತ ಅಲ್ಲಿನ ವೈದ್ಯರು ನಿರ್ಧರಿಸಿ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರನ್ನ ಸಂಪರ್ಕಿಸಿದ್ರು. ಎನ್ಎಚ್ ಆಸ್ಪತ್ರೆಯಿಂದ ಎಕ್ಸ್ಪರ್ಟ್ಸ್ ತಂಡ ತಾರಕರತ್ನ ಅವರಲ್ಲಿಗೆ ಪ್ರಯಾಣ ಮಾಡಿ ಅವರ ಸ್ಥಿತಿಗತಿ ಪರಿಶೀಲಿಸಿ ಬೆಂಗಳೂರಿಗೆ ಶಿಫ್ಟ್ ಮಾಡೋಣ ಅಂತ ನಿರ್ಧರಿಸಿದ್ರು. ಶುಕ್ರವಾರ ಮಧ್ಯರಾತ್ರಿಯೇ ಅಲ್ಲಿಂದ ಶಿಫ್ಟ್ ಮಾಡಿದ ಟಾಕ್ಟರ್ಸ್ ರಾತ್ರಿ 1 ಗಂಟೆಗೆ ನಾರಾಯಣ ಹೃದಯಾಲಯ ತಲುಪಿದ್ರು.
ಆ ಕ್ಷಣದಿಂದ ಇಲ್ಲಿಯವರೆಗೂ ತಾರಕರತ್ನ ಅವ್ರಿಗೆ ಐಸಿಯುನಲ್ಲಿ ಟ್ರೀಟ್ ಮೆಂಟ್ ಕೊಡಲಾಗ್ತಿದೆ. ಹೃದಯ ಸಂಬಂಧಿ ಟಾಪ್ ಎಕ್ಸ್ಪರ್ಟ್ಸ್ ಕರೆಸಿ ಚೆಕ್ ಮಾಡಲಾಗ್ತಿದೆ. ಮೂರು ದಿನ ಕಳೆದರೂ ತಾರಕರತ್ನ ಚೇತರಿಸಿಕೊಂಡಿಲ್ಲ. ಇನ್ನು ಅವರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಸದ್ಯಕ್ಕೆ ಸ್ಟೇಬಲ್ ಅಂತ ಹೇಳುವ ವೈದ್ಯರು ಔಟ್ ಆಫ್ ಡಂಜರ್ ಅಂತ ಘೋಷಿಸೋಕೆ ರೆಡಿ ಇಲ್ಲ. ತಾರಕರತ್ನ ಬೇಗ ಗುಣಮುಖರಾಗಲಿ, ಮೊದಲಿನಂತಾಗಲಿ ಅಂತ ನಂದಮೂರಿ ಕುಟುಂಬದವರು ಅಭಿಮಾನಿಗಳು ಪ್ರಾರ್ಥಿಸ್ತಿದ್ದಾರೆ. ಪತ್ನಿ ಅಲೇಖ್ಯಾ ರೆಡ್ಡಿ, ಪುತ್ರಿ, ಬಾಲಯ್ಯ ಕಳೆದ ಮೂರು ದಿನದಿಂದ ಆಸ್ಪತ್ರೆಯಲ್ಲೇ ವೈದ್ಯರಿಂದ ಏನಾದರೂ ಸಿಹಿ ಸುದ್ದಿ ಸಿಗಬಹುದಾ ಅಂತ ಎದುರು ನೋಡ್ತಾ ಇದ್ದಾರೆ. ಜ್ಯೂನಿಯರ್ ಎನ್ಟಿಆರ್, ಚಂದ್ರಬಾಬು ನಾಯ್ಡು, ಶಿವರಾಜ್ ಕುಮಾರ್ ಸೇರಿ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಬಂದು ತಾರಕರತ್ನ ಆರೋಗ್ಯ ವಿಚಾರಿಸ್ತಿದ್ದಾರೆ. ತೆಲುಗು ಇಂಡಸ್ಟ್ರಿಯ ಸ್ಟಾರ್ ನಟರು ತಾರಕರತ್ನ ಚೇತರಿಕೆಗೆ ಪ್ರಾರ್ಥಿಸ್ತಿದ್ದಾರೆ.
ಯಾರು ಈ ತಾರಕರತ್ನ? ಎನ್ಟಿಆರ್ಗೆ ಹೇಗೆ ಸಂಬಂಧ?
ತಾರಕರತ್ನ ನಂದಮೂರಿ ತಾರಕ್ ರಾಮಾರಾವ್ ಅವರ ಮೊಮ್ಮಗ. ಎನ್ಟಿಆರ್ ಅವರ ಹನ್ನೆರಡು ಜನ ಮಕ್ಕಳಲ್ಲಿ ಐದನೇಯವರು ಮೋಹನಕೃಷ್ಣ. ಈ ಮೋಹನಕೃಷ್ಣ ಅವರ ಮಗ ತಾರಕರತ್ನ. ಬಾಲಯ್ಯ ಅಣ್ಣನ ಮಗ ಆಗಬೇಕು. ಜ್ಯೂನಿಯರ್ ಎನ್ಟಿಆರ್ಗೆ ಚಿಕ್ಕಪ್ಪನ ಮಗ ಅಂದ್ರೆ ಸಹೋದರ ಆಗ್ಬೇಕು. ಎನ್ಟಿಆರ್ ಫ್ಯಾಮಿಲಿಯ ಸದಸ್ಯರಂತೆ ತಾರಕರತ್ನ ಕೂಡ ಸಿನಿಮಾದಲ್ಲೇ ಭವಿಷ್ಯ ರೂಪಿಸಿಕೊಳ್ಳೋಕೆ ನಿರ್ಧರಿಸಿದ್ರು. 2002ರಲ್ಲಿ ‘ಒಕಟೋ ನಂ ಕುರ್ರೋಡು’ ಚಿತ್ರದಲ್ಲಿ ಫಸ್ಟ್ ಟೈಂ ತಾರಕರತ್ನ ನಾಯಕನಾಗಿ ಕಾಣಿಸಿಕೊಂಡ್ರು. ಅಲ್ಲಿಂದ ನಿರಂತರವಾಗಿ ಸಿನಿಮಾಗಳನ್ನ ಮಾಡೋಕೆ ಶುರು ಮಾಡಿದ್ರು. ಯುವರತ್ನ, ತಾರಕ್, ಭದ್ರಾದಿ ರಾಮುಡು, ಅಮರಾವತಿ ಸೇರಿ 21ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀರೋ, ವಿಲನ್, ಪೋಷಕ ನಟ ಹೀಗೆ ಹತ್ತು ಹಲವು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಮರಾವತಿ ಚಿತ್ರದ ನಟನೆಗಾಗಿ ಅತ್ಯುತ್ತಮ ವಿಲನ್ ಅಂತ ನಂದಿ ಅವಾರ್ಡ್ ಕೂಡ ಪಡೆದುಕೊಂಡಿದ್ರು.
ನಂದಮೂರಿ ಫ್ಯಾಮಿಲಿಯಿಂದ ದೂರವಿದ್ದಿದ್ದೇಕೆ ತಾರಕರತ್ನ?
ಆ ಒಂದು ಘಟನೆಯಿಂದ ತಾರಕರತ್ನ ಕುಟುಂಬದಿಂದ ದೂರಾದ್ರು!
ಹೀರೋ ಆಗಿ ಅದಾಗಲೇ ಅಭಿಮಾನಿಗಳನ್ನ ಸಂಪಾದಿಸಿದ್ದ ತಾರಕರತ್ನ 2012ರ ನಂತರ ತನ್ನ ಫ್ಯಾಮಿಲಿಯಿಂದ ದೂರ ಆಗಬೇಕಾಯಿತು. ಮನೆಯವರ ವಿರೋಧದ ನಡುವೆ ಪ್ರೀತಿಸಿದ ಹುಡುಗಿಯನ್ನ ಮದುವೆಯಾದ ಕಾರಣ ನಂದಮೂರಿ ಕುಟುಂಬದಿಂದ ತಾರಕರತ್ನ ದೂರ ಉಳಿದರು. ಕಾಮನ್ ಫ್ರೆಂಡ್ ಮೂಲಕ ಪರಿಚಯ ಆದ ಅಲೇಖ್ಯಾ ರೆಡ್ಡಿ ಅವರನ್ನು ಪ್ರೀತಿಸಿದ ತಾರಕರತ್ನ ಎರಡು ಮನೆಗಳ ವಿರೋಧದ ನಡುವೆ ದೇವಸ್ಥಾನದಲ್ಲಿ ಮದುವೆ ಆಗ್ಬೇಕಾಯಿತು. ಅಲೇಖ್ಯಾ ರೆಡ್ಡಿಗೆ ಅದಾಗಲೇ ಮದುವೆಯಾಗಿ ಡಿವೋರ್ಸ್ ಆಗಿತ್ತು. ಆ ಕಾರಣದಿಂದ ನಂದಮೂರಿ ಫ್ಯಾಮಿಲಿ ಈ ಮದುವೆಗೆ ಒಪ್ಪಿರಲಿಲ್ಲ. ಇನ್ನು ಸಿನಿಮಾ ಕುಟುಂಬವಾಗಿದ್ದರಿಂದ ಅಲೇಖ್ಯಾ ರೆಡ್ಡಿ ಮನೆಯವರಿಗೂ ತಾರಕರತ್ನ ಸಂಬಂಧ ಇಷ್ಟ ಇರಲಿಲ್ಲ. ಹೀಗೆ ಎರಡು ಕುಟುಂಬಗಳ ವಿರೋಧದಲ್ಲಿ ಮದುವೆಯಾದ ಕಾರಣ ವರ್ಷಗಳ ಕಾಲ ತಾರಕರತ್ನ ತನ್ನ ತಂದೆ-ತಾಯಿಯಿಂದ ದೂರ ಉಳಿಯಬೇಕಾಯಿತು.
ತಾರಕರತ್ನ ಮತ್ತು ಅಲೇಖ್ಯಾ ರೆಡ್ಡಿ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಈ ಮಗು ಆದ್ಮೇಲೆ ಅಲೇಖ್ಯಾ ರೆಡ್ಡಿ ಫ್ಯಾಮಿಲಿಯವರು ತಾರಕರತ್ನ ಜೊತೆ ಹೊಂದಿಕೊಂಡ್ರು. ಅಲೇಖ್ಯಾ ಕೂಡ ಅವರು ಮನೆಯವರನ್ನ ಸೇರಿದ್ರು. ಆದರೆ, ತಾರಕ್ ತಂದೆ ಮೋಹನಕೃಷ್ಣ ಈ ದ್ವೇಷವನ್ನ ಬಹಳ ವರ್ಷಗಳ ಕಾಲ ಮುಂದುವರಿಸಿ ಬಿಟ್ಟರು. ಈಗಲೂ ತಾರಕರತ್ನ ಮತ್ತು ಅವರ ತಂದೆ ಸಂಬಂಧ ಅಷ್ಟಕ್ಕಷ್ಟೇ ಎನ್ನಲಾಗಿದೆ. ಯಾವುದಾದರೂ ಕಾರ್ಯಕ್ರಮ, ಸಮಾರಂಭಗಳಿದ್ದರೆ ಮಾತ್ರ ಮನೆಯವರನ್ನ ಭೇಟಿ ಮಾಡ್ತಿದ್ರಂತೆ ತಾರಕ್. ತಾರಕರತ್ನಗೆ ಬಾಲಯ್ಯ ತುಂಬಾ ಕ್ಲೋಸ್. ಈಗಲೂ ತಾರಕರತ್ನ ಆಸ್ಪತ್ರೆ ಸೇರಿದಾಗಿಂದಲೂ ಬಾಲಕೃಷ್ಣ ರಾತ್ರಿ-ಹಗಲು ಆಸ್ಪತ್ರೆಯಲ್ಲಿದ್ದುಕೊಂಡ ಪರಿಸ್ಥಿತಿ ನಿಭಾಯಿಸ್ತಾ ಇದ್ದಾರೆ.
ಆರೋಗ್ಯವಾಗಿ, ಆ್ಯಕ್ಟಿವ್ ಆಗಿದ್ದ ತಾರಕರತ್ನ!
ಒಂದು ಕಡೆ ಸಿನಿಮಾಗಳು, ಇನ್ನೊಂದ್ಕಡೆ ಫ್ಯಾಮಿಲಿ ಹೀಗೆ ಎರಡನ್ನೂ ಬ್ಯಾಲೆನ್ಸ್ ಮಾಡ್ತಿದ್ದ ತಾರಕರತ್ನ ಈಗ ರಾಜಕೀಯವಾಗಿಯೂ ಸಕ್ರಿಯರಾಗಿದ್ದರು. ಮುಂದಿನ ಚುನಾವಣೆಯಲ್ಲಿ ಟಿಡಿಪಿ ಪಕ್ಷದಿಂದ ಸ್ಪರ್ಧಿಸಲು ತಯಾರಾಗ್ತಿದ್ರು. ಈ ತಯಾರಿಯ ಒಂದು ಭಾಗವೇ ಶುಕ್ರವಾರ ಆರಂಭವಾಗಿದ್ದ ಪಾದಾಯಾತ್ರೆ. ಅದಕ್ಕೂ ಮುಂಚೆ 24ನೇ ತಾರೀಖು ಪರಟಾಲ ರವಿ ಹುಟ್ಟುಹಬ್ಬದ ಹಿನ್ನೆಲೆ ಅವರ ಮನೆಗೆ ಭೇಟಿ ಕೊಟ್ಟಿದ್ದ ತಾರಕರತ್ನ ನಂದಮೂರಿ ಫ್ಯಾಮಿಲಿ ಜೊತೆ ರವಿ ಸಂಬಂಧದ ಬಗ್ಗೆ ಮಾತಾಡಿದ್ರು. ತಾರಕರತ್ನ ವಯಸ್ಸು ಕೇವಲ 39 ವರ್ಷ. ಜ್ಯೂನಿಯರ್ ಎನ್ಟಿಆರ್ಗಿಂತ ಆರು ತಿಂಗಳು ಚಿಕ್ಕವರು. ತಾರಕರತ್ನ ತುಂಬಾ ಆರೋಗ್ಯವಾಗಿ ಆ್ಯಕ್ಟಿವ್ ಆಗಿದ್ದ ವ್ಯಕ್ತಿ. ಆದರೆ ಇದೀಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿರುವುದು ಇಡೀ ನಂದಮೂರಿ ಫ್ಯಾಮಿಲಿಗೆ ಆಘಾತ ತಂದಿದೆ. ಸದ್ಯಕ್ಕೆ ತಾರಕರತ್ನ ಆರೋಗ್ಯ ಸ್ಟೇಬಲ್ ಆಗಿದ್ರೂ ವೈದ್ಯರು ಯಾವುದೇ ಕಾನ್ಫಿಡೆನ್ಸ್ ಕೊಡ್ತಿಲ್ಲ. ಅಗತ್ಯವೆನಿಸೋ ಎಲ್ಲಾ ಪ್ರಯತ್ನಗಳನ್ನ ಮಾಡ್ತಿದ್ರು ಚೇತರಿಕೆಯ ಲಕ್ಷಣ ಕಾಣ್ತಿಲ್ಲ. ತಾರಕರತ್ನ ಕೋಮಾ ತಲುಪಿದ್ದಾರೆ ಎನ್ನಲಾಗುತ್ತಿದೆ. ಇದು ಇನ್ನಷ್ಟು ಆತಂಕ ಹೆಚ್ಚಿಸಿದ್ದು, ತಾರಕರತ್ನ ಬದುಕಿ ಬರಲಿ ಅನ್ನೋ ಪ್ರಾರ್ಥನೆ ಎಲ್ಲರದ್ದು ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post