ಮಾಡಿದುಣ್ಣೋ ಮಾರಾಯ ಅನ್ನೋ ಹಾಗೆ ಆಗಿದೆ ಪಾಪಿ ಪಾಕಿಸ್ತಾನದ ಪರಿಸ್ಥಿತಿ. ಭಾರತದ ಮೇಲೆ ಕತ್ತಿ ಮಸೆಯುತ್ತ ದುಷ್ಟ ಶಕ್ತಿಗಳನ್ನ ಮೆರೆಸುತ್ತಿದ್ದ ಪಾಕ್ಗೆ ಅದೇ ಶಕ್ತಿಗಳೇ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ಪಾಕ್ನ ಪ್ರಮುಖ ನಗರದ ಮಸೀದಿಯಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿ ರಕ್ತದೋಕುಳಿ ಹರಿಸಿದ್ದಾರೆ. ಹೊಟ್ಟೆಗೆ ಹಿಟ್ಟು ಇಲ್ಲದಿದ್ರು ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ಹಾಗೆ ಆಗಿದೆ ಪಾಕಿಸ್ತಾನದ ಜನರ ಪರಿಸ್ಥಿತಿ. ಒಂದ್ಕಡೆ ಆರ್ಥಿಕ ಪರಿಸ್ಥಿತಿ ನೆಲಕಚ್ಚಿ ಪಾಕ್ ಜನರು ತಿನ್ನೋಕೆ ಅನ್ನವಿಲ್ಲದೆ ಒಂದು ಹೊತ್ತು ಕೂಳಿಗಾಗಿ ಪರಿತಪ್ಪಿಸ್ತಾ ಇದ್ರೆ ಮತ್ತೊಂದ್ಕಡೆ ರಕ್ತಪಿಪಾಸುಗಳು ದ್ವೇಶದ ಜ್ವಾಲೆಗೆ ದೇಶವನ್ನ ಬಲಿಕೊಡಲು ಹೊರಟಿದ್ದಾರೆ. ಪಾಕಿಸ್ತಾನದ ಪೇಶಾವರ್ನಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿ ರಕ್ತದೋಕುಳಿಯನ್ನೇ ಹರಿಸಿದ್ದಾರೆ.
ಮಟ, ಮಟ ಮಧ್ಯಾಹ್ನ ಮಸೀದಿಯಲ್ಲಿ ಉಗ್ರರ ಅಟ್ಟಹಾಸ
ಪಾಕಿಸ್ತಾನ ಪ್ರಮುಖ ನಗರಗಳಲ್ಲೊಂದಾದ ಪೇಶಾವರ್ ಅಕ್ಷರಶಃ ಸ್ಮಶಾಣವಾಗಿ ಬದಲಾಗಿತ್ತು. ನಿನ್ನೆ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಆರಂಭವಾಗುವುದನ್ನೇ ರಣ ಹದ್ದುಗಳಂತೆ ಕಾದು ಕುಳಿತಿದ್ದ ನರರಾಕ್ಷಸರು ಮಸೀದಿಯೊಳಗೆ ಜನ ಸೇರ್ತಿದ್ದಂತೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಗೆ 46ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 150 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಶಿಯಾ-ಸುನ್ನಿ ಸಂಘರ್ಷಕ್ಕೆ ಮುಗ್ಧ ಜನರು ಬಲಿ
ಪೇಶಾವರ್ನಲ್ಲಿ ಶಿಯಾ-ಸುನ್ನಿ ಪಂಗಡಗಳ ನಡುವಿನ ದ್ವೇಶ ನಿನ್ನೆ ಮೊನ್ನೆಯದಲ್ಲ. ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ದಿನದಿಂದ ಈ ಪ್ರಾಂತ್ಯದಲ್ಲಿ ಎರಡು ಪಂಗಡಗಳ ಸಂಘರ್ಷ ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ ಸುನ್ನಿ ಪಂಗಡದ ಮಸೀದಿಯನ್ನ ಟಾರ್ಗೆಟ್ ಮಾಡಿ ಶಿಯಾ ಪಂಗಡದ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೇಶಾವರ್ನಲ್ಲಿ ಮಡಿಕಲ್ ಎಮರ್ಜೆನ್ಸಿ ಘೋಷಣೆ.. ಹೈ ಅಲರ್ಟ್
ಪೇಶಾವರ್ನ ಮಸೀದಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ಗಾಯಾಳುಗಳನ್ನ ಆಸ್ಪತ್ರೆಗಳಿಗೆ ರವಾನೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ 150 ಜನರ ಪೈಕಿ 15 ಜನರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೇಶಾವರ್ನಲ್ಲಿ ಆರೋಗ್ಯ ಇಲಾಖೆ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿದೆ. 10 ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಉಚಿತ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದೆ.
ಆರ್ಥಿಕ ಸಂಕಷ್ಟ, ಆಹಾರ ಕೊರತೆಯಿಂದ ಪಾಠ ಕಲಿಯಬೇಕಿದ್ದ ಪಾಕ್ ಜನರು ನಾಯಿ ಬಾಲ ಡೊಂಕು ಅನ್ನೋ ಹಾಗೆ ತಮ್ಮ ಕುತಂತ್ರಿ ಬುದ್ಧಿಯಿಂದ ಮತ್ತೆ ರಕ್ತ ಚರಿತ್ರೆ ಬರೆಯಲು ಮುಂದಾಗಿದ್ದಾರೆ. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಭಾರತೀಯರ ರಕ್ತ ಹರಿಸಲು ಸಂಚು ರೂಪಿಸೋ ಪಾಕ್ನ ಒಡಲಲ್ಲೇ ಸದ್ಯ ರಕ್ತ ಪಾತ ಮಡುಗಟ್ಟಿ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post