ಪ್ರತಿನಿತ್ಯ ನಮ್ಮ ನಿಮ್ಮ ನಡುವೆ ಅದೆಷ್ಟೋ ಸ್ಫೂರ್ತಿದಾಯಕ ಕಥೆಗಳು ನಡೆಯುತ್ತಾ ಇರುತ್ತವೆ. ಅವುಗಳಿಂದ ಸ್ಫೂರ್ತಿ ಪಡೆದು ಮುನ್ನುಗುತ್ತೇವೆ ನಾವು ನೀವು. ಆದರೆ ಸಿನಿಮಾ ಮಂದಿ ಸಿನಿಮಾ ಮಾಡಿ ಇನ್ನಷ್ಟು ಸ್ಫೂರ್ತಿಯನ್ನ ಪೂರ್ತಿಯಾಗಿ ಹಂಚಲು ಮುಂದಾಗಿ ಬಿಡ್ತಾರೆ. ಅಂಥದ್ದೆ ಒಂದು ವಿಭಿನ್ನ ಪ್ರಯುತ್ನ ತನುಜಾ. ಈ ವಾರ ನಿಮ್ಮ ಬರಲಿದ್ದು ನಿಮ್ಮ ಆಶೀರ್ವಾದ ಈ ನೈಜ ಪ್ರಯತ್ನಕ್ಕೆ ಅತ್ಯಗತ್ಯ.
ಸಿನಿಮಾದೊಳಗಿನ ಕಥೆಗಳು ನಿಜ ಜೀವನಕ್ಕೆ ಸ್ಫೂರ್ತಿಯಾದ್ರೆ, ಇನ್ನು ಕೆಲವೊಂದು ಸಂದರ್ಭಗಳಲ್ಲಿ ನಿಜ ಕಥೆಗಳು ಸಿನಿಮಾ ಮಾಡಲು ಸ್ಫೂರ್ತಿಯಾಗುತ್ತದೆ.
ತನುಜಾ ಈ ಸಿನಿಮಾ ಕೂಡ ನಿಜ ಜೀವನದಲ್ಲಿ ಅದ್ರಲೂ ಕೊರೊನಾ ಸಂದರ್ಭದಲ್ಲಿ ನಡೆದ ಕಥೆಯ ಆಧಾರಿತ ಸಿನಿಮಾ. ಈಗಲಾಗಲೇ ತನುಜಾ ಟ್ರೈಲರ್ ಮತ್ತು ಸಾಂಗ್ಸ್ ನೋಡುಗರನ್ನ ಇಂಪ್ರೇಸ್ ಮಾಡಿದೆ. ಟ್ರೈಲರ್ನಿಂದ ಸದ್ದು ಮಾಡಿದ್ದ ತನುಜಾ ಈ ಹಾಡುಗಳಿಂದಲು ಸೌಂಡ್ ಮಾಡ್ತಾ ಇದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಿನಿಮಾದಲ್ಲಿ ಇದ್ದಾರೆ ಎಂದು ಸಿನಿಮಾ ರಂಗ ಮತ್ತು ರಾಜಕೀಯ ರಂಗ ಎರಡಲು ನಿರೀಕ್ಷೆ ಮೂಡಿಸಿರುವ ತನುಜಾ ಈಗ ಹಾಡುಗಳ ಮೂಲಕವು ಕುತೂಹಲ ಮೂಡಿಸುವಲ್ಲಿ ಹೆಜ್ಜೆ ಹಾಕುತ್ತಿದೆ. ಇತ್ತೀಚಿನ ಸಿನಿಮಾಗಳು ಥ್ರಿಲ್ಲರ್, ಮಾಸ್ ಎಲಿಮೆಂಟ್ಸ್ನೋಂದಿಗೆ ಬರುತ್ತಿವೆ. ಅಭಿರುಚಿ ಇರುವ ಪ್ರೇಕ್ಷಕ ಇಂತಹ ಸ್ಫೂರ್ತಿದಾಯಕ ಚಿತ್ರಗಳನ್ನು ಎದುರು ನೋಡುತ್ತಿದ್ದು, ಈ ಸಂದರ್ಭಕ್ಕೆ ಸಮಯೋಚಿತವಾಗೀ ಈ ಚಿತ್ರ ತೆರೆಗೆ ಬರುತ್ತಿದ್ದು, ಅದನ್ನ ಆಸ್ವಾದಿಸಲು ಪ್ರೇಕ್ಷಕ ಕಾದು ಕುಳಿತಿದ್ದಾನೆ. ಈಗಾಗಲೇ ಈ ಚಿತ್ರದ ಟ್ರೈಲರ್ ಯೂಟ್ಯೂಬ್ನಲ್ಲಿ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.
ತನುಜಾ ಚಿತ್ರದ ಕಥೆಯು ರೈತನ ಮಗಳಾದ ತನುಜಾಳ ಪ್ರಯಾಣ, ಸಾಂಕ್ರಾಮಿಕದ ಸಮಯದಲ್ಲಿ ನೀಟ್ ಪರೀಕ್ಷೆಯನ್ನು ಬರೆಯಲು ಅವಳ ಹೋರಾಟ ಮತ್ತು ಶಸ್ತ್ರಚಿಕಿತ್ಸಕಿಯಾಗಿ ಅವಳ ಕನಸಿನ ಸುತ್ತ ಸುತ್ತುತ್ತದೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಪ್ತ ಪಾವೂರು ಈ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ಸಂಯೋಜಿಸಿದ್ದಾರೆ. ತನುಜ ಚಿತ್ರತಂಡದ ಬಗ್ಗೆ ಚಿತ್ರದ ಬಗ್ಗೆ ರಾಜ್ಯದ ಶ್ರೇಷ್ಠ ಸಾಹಿತಿಗಳು, ಸಿನಿಮಾ ಕಲಾವಿದರು, ಮಠಾಧೀಶರುಗಳು, ಹಾಗೂ ಧರ್ಮಧಿಕಾರಿಗಳು ಒಳ್ಳೆಯ ಪ್ರಶಂಸೆಯ ಮಾತುಗಳನ್ನ ಆಡುತ್ತಿದ್ದು ಚಿತ್ರ ಯಶಸ್ವಿ ಆಗುತ್ತದೆ ಎನ್ನುವುದು ಸಿನಿಪಂಡಿತರ ಲೆಕ್ಕಾಚಾರವಾಗಿದೆ. ಜೊತೆಗೆ ಯುವ ನಿರ್ದೇಶಕ ಎಂ.ಡಿ ಹಳ್ಳಿ ಅವರು ಇಂತಹ ಘಟಾನುಘಟಿ ನಾಯಕರಗಳನ್ನ ಸಂಭಾಳಿಸಿ ನಿರ್ದೇಶಿಸಿದ್ದು ನೈಜ ಘಟನೆ ಆಧಾರಿತ ಚಿತ್ರವನ್ನು ತೆರೆ ಮೇಲೆ ತರಲು ಹೊರಟಿರುವ ಸಾಹಸಕ್ಕೆ ಇಡೀ ಸ್ಯಾಂಡಲ್ವುಡ್ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಾಗಿದೆ.
ಚಿತ್ರತಂಡ ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ ಏಕೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಆಗಿನಿಂದಲೂ ಪ್ರತಿ ಹಂತದಲ್ಲೂ ಚಿತ್ರತಂಡವನ್ನು ಪ್ರೋತ್ಸಾಹಿಸಿ ಬಂದಿದ್ದು ಆನೆ ಬಲ ಬಂದಂತಿದೆ. ಹರೀಶ್ ಎಂ ಡಿ ಹಳ್ಳಿ ನಿರ್ದೇಶನದ ತನುಜಾ ಚಿತ್ರವನ್ನ ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ, ಜಿ.ಎ ಭಾಸ್ಕರ್ ನಿರ್ಮಾಣ ಮಾಡಿದ್ದು ಈ ಶುಕ್ರವಾರ 3ನೇ ತಾರೀಖ್ ಪ್ರೇಕ್ಷಕರ ಮುಂದೆ ಬರಲಿದೆ. ಥಿಯೇಟರ್ಗೆ ಬಂದು ಹರಸಿ ಹಾರೈಸಿ ಆಶೀರ್ವಾದಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post