ಬೆಂಗಳೂರು: ಸಿಡಿ ಸಮರದಲ್ಲಿ ಸಿಡಿದೆದ್ದು ಜಿದ್ದು ಸಾಧಿಸುತ್ತಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ ಅವರಲ್ಲಿ ಏನೇನು ಪಟ್ಟುಗಳು, ಆಸನಗಳು ಇದ್ದಾವೆ ತೋರಿಸಲಿ ನೋಡಿಕೊಳ್ತೀವಿ ಎಂದು ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ ನಡೆಸಿದಾಗ ಡಿಕೆ ಶಿವಕುಮಾರ್ ಶ್ರೀನಗರದಲ್ಲಿದ್ರು. ಅಲ್ಲಿಂದ ಇವತ್ತು ಬೆಂಗಳೂರಿಗೆ ವಾಪಸ್ ಆಗಿದ್ದು, ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮಂತ್ರಿ ಆಗಿದ್ರು, ಬಳಿಕ ರಾಜೀನಾಮೆ ನೀಡಿದ್ರು. ಇದರಿಂದ ಹತಾಶೆಗೆ ಒಳಗಾಗಿದ್ದಾರೆ. ಮಾನಸಿಕ ಆರೋಗ್ಯ ಸುಧಾರಿಸುತ್ತಿಲ್ಲ. ಅವರ ಮಾತುಗಳನ್ನ ಕೇಳಿದ್ರೆ ಅಯ್ಯೋ ಅನಿಸುತ್ತೆ ನನಗೆ. ನಾನೇನು ಕಾಮೆಂಟ್ ಮಾಡಲ್ಲ. ಯಾರು ಯಾವ ತನಿಖೆ ಆದರೂ ನಡೆಸಲಿ. ನಮ್ಮದೇನಿದ್ದರೂ ರಣರಂಗ, ಚುನಾವಣೆಯಲ್ಲಿ ಎದುರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿದೇಶದಲ್ಲಿ ಮನೆ, ಫ್ಲಾಟ್ ಇರೋ ಆಡಿಯೋ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಅದರಲ್ಲಿ ಶೇಕಡಾ 10ರಷ್ಟಾದರೂ ಬರುವ ಹಾಗೆ ಮಾಡಿ. ನಾನು ಹೋಗಿ ಬರ್ತೇನೆ. ಅವರಿಗೆ ಒಳ್ಳೆದಾಗಲಿ ಎಂದು ಹಾರೈಸುತ್ತೇನೆ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post