ನವದೆಹಲಿ: ಇದೊಂದು ಐತಿಹಾಸಿಕ ಬಜೆಟ್. ಸುಮಾರು ವರ್ಷಗಳ ನಂತರ ಈ ರೀತಿ ಬಜೆಟ್ ಬಂದಿರೋದು ಹರ್ಷ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಇದನ್ನೂ ಓದಿ: Budget 2023: ‘ಮೋದಿ ಲೆಕ್ಕವೆಲ್ಲಾ ಕನ್ನಡಿ ಒಳಗಿನ ಗಂಟು’-ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಷಿ, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿರೋದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಸ್ಟಾರ್ಟ್ ಅಪ್ ದೃಷ್ಟಿಯಿಂದ ಬಹುದೊಡ್ಡ ಸಹಾಯ ಆಗಿದೆ. ಅತಿ ಹೆಚ್ಚು ಸ್ಟಾರ್ಟ್ ಅಪ್ ಕರ್ನಾಟಕದಲ್ಲೇ ಇವೆ. ಇದು ಪರೋಕ್ಷವಾಗಿ ಕರ್ನಾಟಕಕ್ಕೆ ಸಹಕಾರಿಯಾಗಲಿದೆ. ರೈಲ್ವೆ ಇಲಾಖೆಯಿಂದ ರಾಜ್ಯಕ್ಕೆ ಮೊದಲು 600 ರಿಂದ 700 ಕೋಟಿ ಬರ್ತಿತ್ತು. ಮುನಿಯಪ್ಪ ರೈಲ್ವೆ ಸಚಿವರಿದ್ದಾಗ 800 ಕೋಟಿ ಕೊಟ್ಟಿದ್ದೇ ಸಾಧನೆ ಅಂತಿದ್ರು. ಈಗ 2013-14 ಕ್ಕೆ ಹೋಲಿಸಿದ್ರೆ 8 ರಿಂದ 9 ಪಟ್ಟು ಹೆಚ್ಚಾಗಿದೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಕೃಷಿಗೆ 20 ಲಕ್ಷ ಕೋಟಿ ರೂಪಾಯಿ ಹಣ ನೀಡಿದ್ದಾರೆ. ಕೃಷಿಯ ಸ್ಟಾರ್ಟ್ ಅಪ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಜೆಟ್ ಎಲೆಕ್ಷನ್ ಬಂದಿದೆ ಅವರಿಗೆ ಸಮಾಧಾನ ಪಡಿಸಬೇಕು ಎಂದು ತಂದಿರೋ ಬಜೆಟ್ ಅಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಾನು ಈಗ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಸಿದ್ದರಾಮಯ್ಯಗೆ ಕ್ಷೇತ್ರ ಗೊಂದಲ ಇರುವ ಹಿನ್ನೆಲೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ನಾಯಿ ಅಂತೆಲ್ಲಾ ಕರೆದಿದ್ರು ಎಂದು ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post