ಬೆಂಗಳೂರು: 2023-24ನೇ ಸಾಲಿನ ಮೋದಿ ಸರ್ಕಾರದ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕಕ್ಕೆ ಏನೂ ಮಾಡಿಲ್ಲ. ಹೀಗಾಗಿ ಕನ್ನಡಿ ಒಳಗಿನ ಗಂಟು ಈ ಬಜೆಟ್ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಮಂಡಿಸುವಾಗ ಜೋರಾಗಿ ಮಗುಳ್ನಕ್ಕ ನಿರ್ಮಲಾ ಸೀತಾರಾಮನ್; ಯಾಕೆ ಗೊತ್ತಾ?
ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ನಿರ್ಮಲಾ ಸೀತಾರಾಮನ್ ಮುಂಗಡ ಪತ್ರ ಮಂಡಿಸಿದ್ದಾರೆ. ಕೃಷಿ, ನೀರಾವರಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಏನೂ ಮಾಡಿಲ್ಲ. ಉದ್ಯೋಗಕ್ಕೆ ಭಾರೀ ಹೊಡೆತ ಬಿದ್ದಿದೆ. 2023-24ರಲ್ಲಿ 18 ಲಕ್ಷ ಕೋಟಿ ಸಾಲ ಮಾಡಲಿದ್ದಾರೆ. ಅದರಲ್ಲಿ ಸುಮಾರು ಶೇ.42ರಷ್ಟು ಬಡ್ಡಿಯೇ ಆಗಲಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 54.90ಲಕ್ಷ ಕೋಟಿ ಸಾಲ ಇತ್ತು. ಕಳೆದ 10 ವರ್ಷದಲ್ಲಿ 1 ಲಕ್ಷದ 18 ಸಾವಿರ ಕೋಟಿ ಸಾಲ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಚಿನ್ನ, ಬೆಳ್ಳಿ ಆಭರಣಗಳು ಮತ್ತಷ್ಟು ದುಬಾರಿ; ನಿರ್ಮಲಾ ಬಜೆಟ್‌ನಿಂದ ಯಾರಿಗೆಲ್ಲಾ ಬಿಗ್ ಶಾಕ್?
ಭದ್ರಾ ಮೇಲ್ದಂಡೆ ಯೋಜನೆಗೆ ನೋಟಿಫಿಕೇಷನ್ ಆಗಿಲ್ಲ. ನೋಟಿಫಿಕೇಷನ್ ಆಗದೆ ಹಣ ಖರ್ಚು ಮಾಡಲು ಆಗಲ್ಲ. ಚುನಾವಣೆಗೆ ತೋರಿಸೋ ತಮಾಷೆ ಪೆಟ್ಟಿಗೆಯ ಬಜೆಟ್ ಇದಾಗಿದೆ. ಕನ್ನಡಿ ಒಳಗಿನ ಗಂಟು ಈ ಬಜೆಟ್ ಆಗಿದೆ. ಕಾರ್ಪೊರೇಟ್, ಇನ್ ಕಮ್ ಟ್ಯಾಕ್ಸ್‌ಗಿಂತ ಜನರಿಂದ ವಸೂಲಿ ಮಾಡುವ ತೆರಿಗೆ ಹೆಚ್ಚಾಗಿದೆ. ಹೀಗಾಗಿ ಇದು ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post