ಅಜಿಂಕ್ಯ ರಹಾನೆ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದೇ ಬೇಸರದಲ್ಲಿದ್ದಾರೆ. ರಹಾನೆ ತಂಡಕ್ಕೆ ಕಮ್ಬ್ಯಾಕ್ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಪೂಜಾರಾ ಹಾದಿ ಹಿಡಿದಿದ್ದಾರೆ.
ಕೆಲ ವರ್ಷಗಳ ಹಿಂದೆ ಅಜಿಂಕ್ಯಾ ರಹಾನೆ 3 ಫಾರ್ಮೆಟ್ನಲ್ಲು ಟೀಮ್ ಇಂಡಿಯಾದ ಕೀ ಪ್ಲೇಯರ್ ಆಗಿದ್ರು. ಆದ್ರೀಗ ಯಾವ ತಂಡದಲ್ಲೂ ಈ ಮುಂಬೈಕರ್ಗೆ ಸ್ಥಾನ ಇಲ್ಲ. 2016ರಲ್ಲಿ T20, 2018ರಲ್ಲಿ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡ ರಹಾನೆ ಕಳೆದೊಂದು ವರ್ಷದಿಂದ ಟೆಸ್ಟ್ ತಂಡದಿಂದಲೂ ಔಟ್ ಆಗಿದ್ದಾರೆ.
ಆಸಿಸ್ ಟೆಸ್ಟ್ ಸರಣಿಗೂ ರಹಾನೆಗೆ ತಂಡದಲ್ಲಿ ಸ್ಥಾನ ಇಲ್ಲ
ಅಜಿಂಕ್ಯಾ ರಹಾನೆ, ಪಕ್ಕಾ ಕ್ಲಾಸ್ ಬ್ಯಾಟ್ಸ್ಮನ್. ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಭಾರತಕ್ಕೆ ಹಲವು ಟೆಸ್ಟ್ ಪಂದ್ಯಗಳನ್ನ ರಹಾನೆ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ, ಕಳಪೆ ಫಾರ್ಮ್, ಯುವ ಆಟಗಾರರ ಅಬ್ಬರದಿಂದಾಗಿ ರಹಾನೆಯನ್ನ ತಂಡದಿಂದ ಕೈ ಬಿಡಲಾಗಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್, ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಳಿಂದ ರಹಾನೆಯನ್ನ ಡ್ರಾಪ್ ಮಾಡಲಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗು ರಹಾನೆ ಆಯ್ಕೆಯಾಗಿಲ್ಲ.
ರಣಜಿ ಟೂರ್ನಿಯಲ್ಲಿ ರಹಾನೆ ಅದ್ಭುತ ಪ್ರದರ್ಶನ
ರಹಾನೆ ಪಾಲಿಗೆ ಟೀಮ್ ಇಂಡಿಯಾ ಡೋರ್ ಕಂಪ್ಲೀಟ್ ಕ್ಲೋಸ್ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಕಮ್ಬ್ಯಾಕ್ ಮಾಡೋದಕ್ಕೆ ರಹಾನೆ ಪಣ ತೊಟ್ಟಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರೋ ರಹಾನೆ, ಡೊಮೆಸ್ಟಿಕ್ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ರಣಜಿಯಲ್ಲಿ ಮುಂಬೈ ತಂಡದ ಪರ ಬ್ಯಾಟ್ ಬೀಸ್ತಿರೋ ರಹಾನೆ ಅದ್ಭುತ ಪ್ರದರ್ಶನ ಮೂಲಕ ಮಿಂಚ್ತಿದ್ದಾರೆ.
ರಣಜಿ ಟೂರ್ನಿಯಲ್ಲಿ ರಹಾನೆ ಪ್ರದರ್ಶನ
ಪ್ರಸಕ್ತ ರಣಜಿ ಟೂರ್ನಿಯಲ್ಲಿ ರಹಾನೆ ಈವರೆಗೂ 7 ಪಂದ್ಯಗಳನ್ನಾಡಿದ್ದು 11 ಇನ್ನಿಂಗ್ಸ್ಗಳಿಂದ 57.63ರ ಸರಾಸರಿಯಲ್ಲಿ 634 ರನ್ ಕಲೆಹಾಕಿದ್ದಾರೆ. 2 ಶತಕ, 1 ಅರ್ಧಶತಕ ದಾಖಲಿಸಿದ್ದಾರೆ.
ರಣಜಿಯಲ್ಲಿ ರಹಾನೆ ಪರ್ಫಾಮೆನ್ಸ್ ಹೇಗಿದ ಅಂತ. ರಹಾನೆ ತಮ್ಮ ಹಳೆ ಖದರ್ಗೆ ಮರಳಿದ್ದಾರೆ ಅಂತ ಹೇಳೋದಕ್ಕೆ, ಈ ಅಂಕಿ ಅಂಶಗಳೇ ಸಾಕ್ಷಿ. ಹೀಗಾಗಿಯೇ ಅದ್ಭುತ ಫಾರ್ಮ್ನಲ್ಲಿರೋ ರಹಾನೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗೋ ವಿಶ್ವಾಸದಲ್ಲಿದ್ರು. ಆದ್ರೆ, ಇಷ್ಟೊಳ್ಳೆ ಪ್ರದರ್ಶನ ನೀಡಿದ್ರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ರಹಾನೆಯನ್ನ ಆಯ್ಕೆ ಮಾಡಲಾಗಿಲ್ಲ. ಇದರಿಂದ ಬೇಸರಗೊಂಡಿರೋ ರಹಾನೆ ಹೇಗಾದ್ರೂ ಮಾಡಿ ಮತ್ತೆ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕೆಂದು ಪಣ ತೊಟ್ಟಿದ್ದಾರೆ.
ಇದನ್ನು ಓದಿ: ICC T20 ಱಂಕಿಂಗ್ನಲ್ಲೂ ಹೊಸ ದಾಖಲೆ ಬರೆದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್!
ಲಿಸಿಸ್ಟರ್ಶೈರ್ ತಂಡದ ಪರ ರಹಾನೆ ಬ್ಯಾಟಿಂಗ್.!
ರಣಜಿಯಲ್ಲಿ ಮಿಂಚಿದ್ರು ರಹಾನೆಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಇದ್ರಿಂದ ಈ ಟೆಸ್ಟ್ ಸ್ಪೆಷಲಿಸ್ಟ್ ವಿದೇಶ ನೆಲದಲ್ಲಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡಲು ರೆಡಿಯಾಗಿದ್ದಾರೆ. ಐಪಿಎಲ್ ಸೀಸನ್ 16ರ ನಂತರ ಇಂಗ್ಲೆಂಡ್ ಕೌಂಟಿ ಸೀಸನ್ನಲ್ಲಿ ಲಿಸಿಸ್ಟರ್ಶೈರ್ ತಂಡದ ಪರ ಆಡಲು ರಹಾನೆ ನಿರ್ಧರಿಸಿದ್ದಾರೆ. ಈಗಾಗ್ಲೇ ಲಿಸಿಸ್ಟರ್ ಶೈರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಲಿಸಿಸ್ಟರ್ಶೈರ್ ತಂಡದ ಪರ ರಹಾನೆ ಕೌಂಟಿ ಚಾಂಪಿಯನ್ಷಿಪ್ನಲ್ಲಿ 8 ಪಂದ್ಯಗಳನ್ನಾಡಲಿದ್ದಾರೆ. ಇನ್ನು ರಾಯಲ್ ಲಂಡನ್ ಏಕದಿನ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ.
ಪೂಜಾರಾರಂತೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡ್ತಾರಾ ಮುಂಬೈಕರ್?
ಟೀಮ್ ಇಂಂಡಿಯಾ ಆಯ್ಕೆ ಸಮಿತಿ, ರಹಾನೆ ಹಾಗೂ ಚೇತೇಶ್ವರ್ ಪೂಜಾರ, ಇಬ್ಬರನ್ನ ಒಂದೇ ಸಮಯದಲ್ಲಿ ಟೆಸ್ಟ್ ತಂಡದಿಂದ ಡ್ರಾಪ್ ಮಾಡಿತ್ತು. ಆದ್ರೆ ಪೂಜಾರಾ ಕೌಂಟಿ ಚಾಂಪಿಯನ್ಷಿಪ್ನಲ್ಲಿ ಸಸೆಕ್ಸ್ ತಂಡದ ಪರ 3 ದ್ವಿಶತಕ, 1 ಅರ್ಧಶತಕ ಸಿಡಿಸಿ ದಾಖಲೆ ಬರೆದ್ರು. ಕೌಂಟಿಯಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಪೂಜಾರಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರು.
ಈಗ ಅಜಿಂಕ್ಯ ರಹಾನೆ ಕೂಡ ಪೂಜಾರಾರಂತೆ ಕೌಂಟಿಯಲ್ಲಿ ಮಿಂಚಿ ತಂಡಕ್ಕೆ ವಾಪಸ್ಸಾಗೋ ಪ್ಲಾನ್ ಮಾಡಿದ್ದಾರೆ. ರಹಾನೆ ಇಂಗ್ಲೆಂಡ್ ನೆಲದಲ್ಲಿ ಅಬ್ಬರಿಸ್ತಾರಾ? ತಂಡಕ್ಕೆ ಕಮ್ಬ್ಯಾಕ್ ಮಾಡ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post