ಡಿಕೆಶಿ ವರ್ಸಸ್ ಬೆಳಗಾವಿ ಸಾಹುಕಾರ್ ಸಿಡಿ ಸಮರ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ಅತ್ತ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಅಂತ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ರೆ ಇತ್ತ ಜಾರಕಿಹೊಳಿ ಸಹೋದರರು ಪ್ರಕರಣವನ್ನ ಸಿನಿಮಾ ಮಾಡಲು ಹೊರಟಿದ್ದಾರೆ.
ಎಲೆಕ್ಷನ್ ಹೊತ್ತಲ್ಲೇ ಕರ್ನಾಟಕ ವಿಧಾನ ಸಭಾ ಚುನಾವಣಾ ಅಖಾಡದಲ್ಲಿ ಸಿಡಿ ಸದ್ದು ಮಾರ್ದನಿಸುತ್ತಿದೆ. ಇಟ್ಟ ಹೆಜ್ಜೆ ಹಿಂದೆ ತೆಗೆಯೋ ಮಾತೇಯಿಲ್ಲ ಅಂತ ಡಿಕೆಶಿ ವಿರುದ್ಧ ಸಿಡಿ ಸಮರ ಸಾರಿರುವ ಬೆಳಗಾವಿ ಸಾಹುಕಾರ್ ಕೆಂಡಕಾರುತ್ತಿದ್ದಾರೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿ ಮಾಡಿ ಸಿಡಿ ಪ್ರಕರಣವನ್ನ ಸಿಬಿಐಗೆ ವಹಿಸಲು ದುಂಬಾಲು ಬಿದ್ದಿದ್ದಾರೆ.
ಸಿಎಂ ಬೆನ್ನುಬಿದ್ದ ಸಾಹುಕಾರ್.. ಸಿಬಿಐ ತನಿಖೆಗೆ ಪಟ್ಟು!
ಬೆಂಗಳೂರಿನ ಆರ್‌ಟಿನಗರದ ಖಾಸಗಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಕೆಲಕಾಲ ಅವರ ಜೊತೆ ಚರ್ಚೆ ನಡೆಸಿದರು. ಬಳಿಕ ಕಾರ್ಯಕ್ರಮದ ನಿಮಿತ್ತ ಸಿಎಂ ನಿವಾಸದಿಂದ ತೆರಳಲು ಸಿದ್ದವಾಗಿ ಹೊರಟಾಗ ರಮೇಶ್ ಜಾರಕಿಹೊಳಿ ಅವರ ಜೊತೆಯೇ ಅವರು ಕಾರಿನಲ್ಲಿ ಹೋಗಿದ್ದಾರೆ. ಇನ್ನೂ ಸಿಡಿ ಪ್ರಕರಣವನ್ನ ಸಿಬಿಐಗೆ ನಿಡೋ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನನಗೆ ಆ ಬಗ್ಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ.
ಸಿಡಿ ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದ ಆರಗ
ಸಿಡಿ ಪ್ರಕರಣವನ್ನ ಸಿಬಿಐಗೆ ವಹಿಸೋ ಬಗ್ಗೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿರೋ ಹಿನ್ನಲೆ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸ್ತೀನಿ ಎಂದಿದ್ದಾರೆ.
ಜಾರಕಿಹೊಳಿ ಸಹೋದರರಿಂದ ಬಿಗ್ ಬಜೆಟ್ ಸಿನಿಮಾಗೆ ತಯಾರಿ
ತೀವ್ರ ಕುತೂಹಲ ಕೆರಳಿಸಿದ ಲಖನ್ ಜಾರಕಿಹೊಳಿ ಸಿನಿಮಾ ಮಾತು
ಡಿಕೆಶಿ ವಿರುದ್ದ ಜಾರಕಿಹೊಳಿ ಬ್ರದರ್ಸ್ ಹೊಸ ಸಿನಿಮಾ ಸಮರಕ್ಕೆ ಮುಂದಾಗಿದ್ದಾರೆ.. ಸಿಡಿಯಿಂದ ಶುರುವಾದ ವಿವಾದ ಈಗ ಸಿನಿಮಾದತ್ತ ಮುಖ ಮಾಡ್ತಿದೆ.. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ರಕ್ತಕಣ್ಣೀರು ಚಿತ್ರದಂತೆ ಸಿಡಿ ಪ್ರಕರಣವನ್ನ ಇಟ್ಟುಕೊಂಡು ಜಾರಕಿಹೊಳಿ ಸಹೋದರರು ‘ರಕ್ತಕಣ್ಣೀರು-3’ ಚಲನಚಿತ್ರಕ್ಕೆ ಸಿದ್ದತೆ ನಡೆಸಿದ್ದಾರೆ.. ರಕ್ತ ಕಣ್ಣೀರು-3 ಚಿತ್ರಕ್ಕೆ ನಟ ಉಪೇಂದ್ರ ಅವರ ಕಾಲ್ ಸಿಟ್ ಸಹ ಲಖನ್ ಜಾರಕಿಹೊಳಿ ಕೇಳಿದ್ದಾರಂತೆ.. ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ, ನಟಿಯಾಗಿ ನಯನತಾರಾ ಹಾಗೂ ನಾನೇ ಚಿತ್ರದ ನಿರ್ಮಾಪಕ ಅಂತ ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸಿಡಿ ಪ್ರಕರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಕಿಡಿ
ಡಿ.ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಫೈಟ್ ಬಗ್ಗೆ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ. ಅವರ ಹತ್ತಿರ ಇಷ್ಟು ವರ್ಷದಿಂದ ಸೀಡಿ ಇದ್ರೆ ಇಲ್ಲಿವರೆಗೂ ಯಾಕೆ ಕೊಟ್ಟಿಲ್ಲ? ಐಟಿ, ಇಡಿ ಪ್ರಕರಣ ನಿನ್ನೆ ಮೊನ್ನೆ ಬಂದಿದ್ದಾ? ನಾಲ್ಕು ವರ್ಷದಿಂದ ತನಿಖೆ ನಡೆಯುತ್ತಿದೆ, ಅವಾಗ್ಯಾಕೆ ಕೊಟ್ಟಿಲ್ಲ, ಕೊಡಬೇಕಿತ್ತು ಅಂತ ಕೆಂಡಕಾರಿದ್ದಾರೆ. ಡಿಕೆಶಿ ವರ್ಸಸ್ ಸಾಹುಕಾರ್ ಸಿಡಿ ಸಮರ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ಕನಕಪುರ ಸಹೋದರರ ಮೇಲೆ ಬೆಳಗಾವಿ ಬ್ರದರ್ಸ್ ಸಿನಿಮಾ ಸಮರಕ್ಕೂ ಮುಂದಾಗಿದ್ದು ಹಾಗಿದ್ರೆ ರಕ್ತಕಣ್ಣೀರು ಪಾರ್ಟ್ 3 ಚಿತ್ರಾ ಬರುತ್ತಾ ಅಂತ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post