ಬೆಳಗಾವಿ: CD ವಿಚಾರದ ಬಗ್ಗೆ ನನ್ನ ಮಕ್ಕಳು ಕೇಳ್ತಾ ಇದ್ದಾರೆ. CD ಅಂದರೆ ಏನು? ಅದರಲ್ಲೇನಿದೆ? ಎಂದು. ಆ ಮಕ್ಕಳಿಗೆ ನಾನು ಏನು ಹೇಳಲಿ? ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ಸಿಡಿ’ದೆದ್ದ ರಮೇಶ್ ಜಾರಕಿಹೊಳಿ ಸಡನ್ ಸಿಎಂ ಬೊಮ್ಮಾಯಿ ಕಾರು ಹತ್ತಿ ಹೋಗಿದ್ದೇಕೆ?
‘ಪಾಪ ರಮೇಶ್ ಜಾರಕಿಹೊಳಿ’
ಬೆಳಗಾವಿ ಮಹಾನ್ ರಾಜಕೀಯ ನಾಯಕರನ್ನ ಕೊಟ್ಟ ಜಿಲ್ಲೆ. ಅವರು ಹೇಳುತ್ತಾರೆ ನಾಗಕನ್ಯೆ ಎಂದು. ಇವರು ಹೇಳುತ್ತಾರೆ ವಿಷಕನ್ಯೆ ಅಂತಾ. ಡಿಕೆ ಶಿವಕುಮಾರ್ ಹೇಳಿದ್ದು ಸತ್ಯ. ರಮೇಶ್ ಜಾರಕಿಹೊಳಿ ಹೇಳಿದ್ದು ಸತ್ಯ. ಮಾನ ಮರ್ಯಾದೆ ಇದ್ದರೆ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ. ಸಿಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಲೇ ಬಂದಿದ್ದಾರೆ. ಪಾಪ ರಮೇಶ್ ಜಾರಕಿಹೊಳಿ ಚೌರಾನೇ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರೆಂದು ಹೇಳಿಕೊಳ್ಳುವಂತಹ ಅರ್ಹತೆ ಯಾರಿಗೂ ಇಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.
ಭವಾನಿ ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ?
ಹಾಸನದಿಂದ ಭವಾನಿ ರೇವಣ್ಣ ಸ್ಫರ್ಧಿಸುವ ಕುರಿತು ಮಾತನಾಡಿದ ಸಿ.ಎಂ. ಇಬ್ರಾಹಿಂ, ಭವಾನಿ ರೇವಣ್ಣ ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ? ಸ್ವರೂಪ್ ಕೇಳಿದ್ರೆ ತಪ್ಪೇನಿದೆ? ಆಕಾಂಕ್ಷಿಗಳು ನಾವು ಅಭ್ಯರ್ಥಿಗಳು ಅಂತಾ ಹೇಳಿಕೊಳ್ಳುವುದು ತಪ್ಪಲ್ಲ. ಆದ್ರೆ ಒಂದು ಬಾರಿ ಟಿಕೆಟ್ ಘೋಷಣೆ ಆದ ಮೇಲೆ ಈ ರೀತಿ ಹೇಳಿಕೆ ನೀಡಿದ್ರೆ ತಪ್ಪು. ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೇಳೋದಕ್ಕೆ ಹಕ್ಕಿದೆ. ಭವಾನಿ ನನ್ನ ತಂಗಿ ಇದ್ದ ಹಾಗೆ, ಅವಳದೇ ಆದ ಶಕ್ತಿ ಇದೆ. ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಹಾಗೇ ನಮಗೆ ದೇವೇಗೌಡರ ಕುಟುಂಬ ರಾಜಕಾರಣ ರಾಜ್ಯಕ್ಕೆ ಅವಶ್ಯಕತೆ ಇದೆ ಎಂದು ಇಬ್ರಾಹಿಂ ವಾದಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post