ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರ ನಟನೆಯೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸೇರಿ ಇತರೆ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ತೆಲುಗು ಸ್ಟಾರ್ ಡೈರೆಕ್ಟರ್ ರಾಜಮೌಳಿ ಕಣ್ಣಿಗೆ ಬಿದ್ದ ಈ ಕಿಚ್ಚ ಈಗ ಸಿನಿಮಾದಲ್ಲಿ ವಿಲ್ಲನ್ ರೋಲ್ನಲ್ಲಿ ಅಬ್ಬರಿಸಿದ್ದರು. ಬಳಿಕ ಪ್ರೇಮ್ ನಿರ್ದೇಶನದ ದೀ ವಿಲ್ಲನ್ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ಬಣ್ಣಹಚ್ಚಿದವ್ರು. ಸದ್ಯ ಸುದೀಪ್ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟು ಇಲ್ಲಿಗೆ 27 ವಸಂತಗಳು ಪೂರೈಸಿವೆ.
27ರ ಸಂಭ್ರಮದಲ್ಲಿರುವ ಸುದೀಪ್ ಶಿವರಾಜ್ ಕುಮಾರ್ ದಂಪತಿ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆನಂದಿಸಿದ್ದಾರೆ. ಇದೇ ವೇಳೆ ಕನ್ನಡದ ಸ್ಟಾರ್ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ಪೆಟ್ರೋಲ್ ಪ್ರಸನ್ನ, ನಿರ್ಮಾಪಕ ಕೆ.ಪಿ ಶ್ರೀಕಾಂತ್, ಚಂದನ್ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.
ಇವತ್ತು ಬೆಂಗಳೂರಿನ ಹೊರವಲಯದಲ್ಲಿ ಕೆಸಿಸಿ ಕ್ರಿಕೆಟ್ ಟೂರ್ನಿಗಾಗಿ ಸ್ಯಾಂಡಲ್ವುಡ್ ಸ್ಟಾರ್ಗಳೆಲ್ಲ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದರು. ಸುದೀಪ್ ಅವರು ಕನ್ನಡ ಇಂಡಸ್ಟ್ರಿಗೆ ಬಂದು 27 ವರ್ಷಗಳು ಕಳೆದಿವೆ. ಹೀಗಾಗಿ ಕನ್ನಡದ ಸ್ಟಾರ್ ನಟರು ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿ ಕಿಚ್ಚ ಕೇಕ್ ಕಟ್ ಮಾಡಿದ್ರು. ಬಳಿಕ ಶಿವಣ್ಣ ಹಾಗೂ ಪತ್ನಿ ಗೀತಾ ಅವರು ಸುದೀಪ್ರಿಗೆ ಕೇಕ್ ತಿನ್ನಿಸಿದ್ರು. ಗಣೇಶ್ ಸೇರಿದಂತೆ ಇತರೆ ನಟರು ಕೂಡ ಕಿಚ್ಚನಿಗೆ ಕೇಕ್ ತಿನ್ನಿಸಿದರು.
ಸುದೀಪ್ ಅವರು 1997ರಲ್ಲಿ ತಾಯವ್ವ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ರಮೇಶ್ ಅರವಿಂದ್ರ ಪ್ರತ್ಯರ್ಥ ಸಿನಿಮಾದಲ್ಲಿ ನಟಿಸಿದ್ರು. ಸ್ಪರ್ಶ ಚಿತ್ರದಿಂದ ಸುದೀಪ್ ಕೆಲ ಡೈರೆಕ್ಟರ್ ಕಣ್ಣಿಗೆ ಬಿದ್ದರು. ಹುಚ್ಚ ಸಿನಿಮಾದ ಮೂಲಕ ಇಡೀ ಕರ್ನಾಟಕಕ್ಕೆ ಸುದೀಪ್ ಪರಿಚಯವಾದರು. ಅಲ್ಲಿಂದ ಸ್ಯಾಂಡಲ್ವುಡ್ ಸವಾರಿ ಮಾಡಿದ ಬಿಗ್ಬಾಸ್ ತೆಲುಗು, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಅಭಿನಯಿಸಿದರು. ಈಗಲೂ ಅವರಿಗೆ ಬೇರೆ ಭಾಷೆಗಲ್ಲಿ ಕಾಲ್ಶೀಟ್ಗಳು ಕಾದು ಕುಳಿತಿವೆ.
ತೆಲುಗು ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಬಿಗ್ ಬಜೆಟ್ ಮೂವಿಗಳಾದ ಈಗ, ಬಾಹುಬಲಿ, ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಜೊತೆಯು ನಟಿಸಿದರು. ಕನ್ನಡದಲ್ಲಿ ರೆಬಲ್ಸ್ಟಾರ್ ಅಂಬರೀಶ್ ಅವರಿಗೆ ಜೊತೆಯಾಗಿ ಬಣ್ಣ ಹಚ್ಚಿದ್ದು ಫ್ಯಾನ್ಸ್ಗೆ ಹೆಚ್ಚು ಖುಷಿ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post