ಆಸಿಸ್ ಟೆಸ್ಟ್ ಸರಣಿಗೂ ಮತ್ತೊಂದು ಆಘಾತಕಾರಿ ಸುದ್ದಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿದೆ. ಹೈವೋಲ್ಟೆಜ್ ಟೆಸ್ಟ್ ಸಿರೀಸ್ಗೂ ಮುನ್ನ ಸ್ಟಾರ್ ಆಟಗಾರನೊಬ್ಬ ತಂಡದಿಂದ ಹೊರ ಬಿದ್ದಿದ್ದಾರೆ. ಒಬ್ಬ ಆಟಗಾರನ ಅಲಭ್ಯತೆ ಇದೀಗ ಮತ್ತೊಬ್ಬ ಸ್ಟಾರ್ಗೆ ಅವಕಾಶ ಮಾಡಿಕೊಟ್ಟಿದೆ. ಆದ್ರೆ, ಇದ್ರ ಜೊತೆಗೆ ಹಲ ಪ್ರಶ್ನೆಗಳೂ ಹುಟ್ಟಿವೆ.
ನಿನ್ನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಶೈನಿಂಗ್ ಸ್ಟಾರ್ ಸೂರ್ಯ ಕುಮಾರ್ ಹೇಳಿದ ಮಾತಿವು. ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಟೆಸ್ಟ್ ಕ್ರಿಕೆಟ್ ಆಡೋದೆ ಅಲ್ಟಿಮೇಟ್ ಗೋಲ್ ಆಗಿರುತ್ತೆ. ಇದೆ ರೀತಿ ಟೆಸ್ಟ್ ಕ್ರಿಕೆಟ್ ಆಡೋ ಬಯಕೆಯನ್ನ ಹೊರ ಹಾಕಿದ್ದ T20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ಗೆ ಈಗ ಲಕ್ ಖುಲಾಯಿಸಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸೂರ್ಯ ತಮ್ಮ ಬಹುಕಾಲದ ಕನಸನ್ನ ನನಸಾಗಿಸೋಕೆ ಹೊರಟಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡಲು ಸೂರ್ಯಕುಮಾರ್ ಸಜ್ಜು
ಸೂರ್ಯಕುಮಾರ್ ಕನಸು ನನಸಾಗೋ ಕಾಲ ಹತ್ತಿರವಾಗಿದೆ. ದೀರ್ಘಕಾಲದಿಂದ ಭಾರತದ ಪರ ವೈಟ್ ಜೆರ್ಸಿ ತೊಟ್ಟು ಆಡ್ಬೇಕು ಅಂತಿದ್ದ ಸೂರ್ಯನ, ಕನಸು ನನಸಾಗೋ ಕಾಲ ಸನ್ನಿಹಿತವಾಗಿದೆ. ಫೆಬ್ರವರಿ 9ರಿಂದ ಶುರುವಾಗೋ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸಿರೀಸ್ನ ಮೊದಲ ಪಂದ್ಯದಲ್ಲೇ ಸೂರ್ಯ ಟೆಸ್ಟ್ಗೆ ಪದಾರ್ಪಣೆ ಮಾಡೋ ಸಾಧ್ಯತೆ ದಟ್ಟವಾಗಿದೆ.
ಶ್ರೇಯಸ್ ಅಯ್ಯರ್ ಅನ್ಫಿಟ್, ಸೂರ್ಯಗೆ ಹೊಡೀತು ಲಕ್
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಆಸೀಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಸೆಲೆಕ್ಟ್ ಆಗಿದ್ರು. ಆದ್ರೆ ನ್ಯೂಜಿಲೆಂಡ್ ಏಕದಿನ ಸಿರೀಸ್ನಲ್ಲಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ರು. ಹೀಗಾಗಿ ಕಿವೀಸ್ ಸರಣಿ ಆರಂಭಕ್ಕೂ ಮೊದಲೇ ಹೊರಬಿದ್ದಿದ್ರು. ಅದರ ಬೆನ್ನಲ್ಲೇ ಆಸೀಸ್ ಸರಣಿಗೂ ಮುನ್ನ ಚೇತರಿಸಿಕೊಂಡು ಕಂಪ್ಲೀಟ್ ಫಿಟ್ ಆಗಲು ಬೆಂಗಳೂರಿನ NCAಗೆ ಬಂದಿದ್ರು. ಆದ್ರೆ ಇದೀಗ ಶ್ರೇಯಸ್ ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ.
ಇದೀಗ, ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಬಹುತೇಕ ತಂಡದಲ್ಲಿರೋ ಸೂರ್ಯ ಟೆಸ್ಟ್ಗೆ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದೆ. ಟೀಮ್ ಮ್ಯಾನೇಜ್ಮೆಂಟ್ ಕೂಡ ಈ ಬಗ್ಗೆ ಸುಳಿವು ನೀಡಿದ್ದು ನಾಗ್ಪುರದಲ್ಲಿ ಸೂರ್ಯ ಡೆಬ್ಯೂ ಮಾಡೋದು ಬಹುತೇಕ ಖಚಿತವಾಗಿದೆ.
ಟೆಸ್ಟ್ ಕ್ರಿಕೆಟ್ ಆಡೋ ತಾಳ್ಮೆ T20 ಸ್ಪೆಷಲಿಸ್ಟ್ಗೆ ಇದ್ಯಾ?
ಹೊಡಿಬಡಿ ಆಟಕ್ಕೆ ಸೂರ್ಯಕುಮಾರ್ ಹೇಳಿಮಾಡಿಸಿದ ಬ್ಯಾಟರ್. ಘಟಾನುಘಟಿ ಬೌಲರ್ಗಳ ಸಾಮ್ರಾಜ್ಯವನ್ನೇ ಅಲುಗಾಡಿಸುವ ತಾಕತ್ತು ಸ್ಕೈಗಿದೆ. T20 ಕ್ರಿಕೆಟ್ನಲ್ಲಿ ಸೂರ್ಯನೇ ಟಾರ್ಚ್ ಬೇರರ್. ಆದ್ರೆ ಈ T20 ಸ್ಪೆಷಲಿಸ್ಟ್ಗೆ ಟೆಸ್ಟ್ ಕ್ರಿಕೆಟ್ ಆಡೋ ತಾಳ್ಮೆಯಿದ್ಯಾ ಅನ್ನೋದು ಈಗ ಹುಟ್ಟಿರುವ ಪ್ರಶ್ನೆಯಾಗಿದೆ.
ಇದನ್ನು ಓದಿ: ಅಕ್ರಮ ಸಂಬಂಧ ಶಂಕೆ; ಹೆಂಡತಿಯನ್ನು ಡಂಬಲ್ಸ್ನಿಂದ ಹೊಡೆದು ಬರ್ಬರವಾಗಿ ಕೊಂದ ಗಂಡ..!
T20 ಕ್ರಿಕೆಟ್ನಲ್ಲಿ ಸೂರ್ಯಕುಮಾರ್ರನ್ನ ಟಚ್ ಮಾಡೋ ಗಂಡು ಯಾರಿಲ್ಲ. ಆದ್ರೆ, ಏಕದಿನ ಕ್ರಿಕೆಟ್ನಲ್ಲಿ ರನ್ ಗಳಿಸೋಕೆ ಪರದಾಟ ನಡೆಸ್ತಿದ್ದಾರೆ. ಶ್ರೀಲಂಕಾ -ನ್ಯೂಜಿಲೆಂಡ್ ಸರಣಿಯಲ್ಲಿ ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ದಾರೆ. ಒಂದೇ ಒಂದು ಬಿಗ್ ಇನ್ನಿಂಗ್ಸ್ ಕಟ್ಟೋಕೆ ಸೂರ್ಯನ ಕೈಲಿ ಸಾಧ್ಯವಾಗಿಲ್ಲ.
ಕಳೆದ 14 ಏಕದಿನ ಪಂದ್ಯಗಳಲ್ಲಿ ಸೂರ್ಯ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಕೇವಲ 15ರ ಬ್ಯಾಟಿಂಗ್ ಸರಾಸರಿಯಲ್ಲಿ ಜಸ್ಟ್ 172 ರನ್ ಸಿಡಿಸಿದ್ದಾರೆ. ಸೂರ್ಯ ಕೈಲಿ ಒಂದೇ ಒಂದು ಅರ್ಧಶತಕ ಸಿಡಿಸೋಕೆ ಕೂಡ ಸಾಧ್ಯವಾಗಿಲ್ಲ. ಹೀಗಿರೋ ಸೂರ್ಯ ಟೆಸ್ಟ್ನಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ತಾರಾ ಅನ್ನೋದು ತೀವ್ರ ಚರ್ಚೆಯಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post