ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಕಿವೀಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಶುಭ್ಮನ್ ಗಿಲ್ ಹಲವು ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ. ಟೆಸ್ಟ್, ಏಕದಿನ ಹಾಗೂ T20 ಈ ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ದಿಗ್ಗಜ ಆಟಗಾರರ ಲಿಸ್ಟ್ನಲ್ಲಿ ಯುವ ಬ್ಯಾಟ್ಸ್ಮನ್ ಹೆಸರು ನೋಂದಾಯಿಸಿಕೊಂಡ್ರು.
ಮೂರು ಮಾದರಿಯಲ್ಲಿ ಶತಕ ಸಿಡಿಸಿ ಭಾರತದ 5ನೇ ಬ್ಯಾಟ್ಸ್ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು. ಇಷ್ಟೇ ಅಲ್ಲ.! ಕಿವೀಸ್ ವಿರುದ್ಧ ಏಕದಿನದಲ್ಲಿ ದ್ವಿಶತಕ, ಟಿ20ಯಲ್ಲಿ ಶತಕ ಸಿಡಿಸಿದ ವಿಶಿಷ್ಟ ಸಾಧನೆಯನ್ನೂ ಮಾಡಿದ್ರು.
ವಿರಾಟ್ ಕೊಹ್ಲಿ ಅಂದ್ರೆ ದಾಖಲೆಯ ಒಡೆಯ.! ಅಂತಹ ಕೊಹ್ಲಿಯ ಒಂದು ದಾಖಲೆಯನ್ನೇ ಶುಭ್ಮನ್ ಗಿಲ್ ಕಸಿದುಕೊಂಡಿದ್ದಾರೆ. ಕಿವೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 200ರ ಸ್ಟ್ರೇಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಶುಭ್ಮನ್, 63 ಎಸೆತಗಳಲ್ಲಿ ಅಜೇಯ 126 ರನ್ಗಳಿಸಿದ್ರು. ಈ ಮೂಲಕ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಅನ್ನೋ ದಾಖಲೆ ಬರೆದ್ರು. ಈ ಹಿಂದೆ ಈ ಹೆಗ್ಗಳಿಕೆ 122 ರನ್ ಸಿಡಿಸಿದ್ದ ಕಿಂಗ್ ಕೊಹ್ಲಿ ಹೆಸರಲ್ಲಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post