ರೋಹಿತ್ ಶರ್ಮಾ ಇರಲಿಲ್ಲ, ವಿರಾಟ್ ಕೊಹ್ಲಿ ಇರಲಿಲ್ಲ. ಹಾಗಿದ್ರೂ ನಿನ್ನೆಯ ಪಂದ್ಯಕ್ಕೆ ಅಭಿಮಾನಿಗಳ ಕ್ರೇಜ್ ಕಿಂಚಿತ್ತೂ ಕಡೆಮೆಯಾಗಿರಲಿಲ್ಲ. ಯಂಗ್ ಇಂಡಿಯಾವನ್ನ ಬೆಂಬಲಿಸಲು ಲಕ್ಷಕ್ಕೂ ಹೆಚ್ಚು ಮೈದಾನಕ್ಕೆ ಬಂದಿದ್ರು. ಕೋಟ್ಯಾಂತರ ಜನ ಟಿವಿ ಮುಂದೆ ಕೂತಿದ್ರು. ಹಾಗೇ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಯಾಕಂದ್ರೆ ಪ್ಯೂಚರ್ಸ್ಟಾರ್ ಶುಭ್ಮನ್ ಆಟ ಹಾಗಿತ್ತು.
ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಪಂದ್ಯಕ್ಕೂ ಮುನ್ನ ಬಿಗ್ ಡಿಬೇಟ್ ನಡೆದಿತ್ತು. ಓಪನರ್ ಶುಭ್ಮನ್ ಗಿಲ್ ಟಿ20 ಫಾರ್ಮೆಟ್ಗೆ ಸೂಟ್ ಆಗಲ್ಲಾ ಅಂತಾ ದೊಡ್ಡ ದೊಡ್ಡ ಎಕ್ಸ್ಪರ್ಟ್ಸ್ಗಳೇ ಭವಿಷ್ಯ ನುಡಿದಿದ್ರು. ಮೊದಲ 2 ಪಂದ್ಯದಲ್ಲಿ ಗಿಲ್ ವೈಫಲ್ಯ ಅನುಭವಿಸಿದ್ದನ್ನ ಮುಂದಿಟ್ಟು, ಬೆಂಚ್ನಲ್ಲಿರೋ ಮುಂಬೈಕರ್ ಪೃಥ್ವಿ ಶಾಗೆ ಚಾನ್ಸ್ ನೀಡಿ ಅಂತಾ ಲಾಬಿ ನಡೆಸಿದ್ರು. ಆದ್ರೆ ಪಂದ್ಯದಲ್ಲಿ ಫಸ್ಟ್ ಇನ್ನಿಂಗ್ಸ್ ಮುಗಿದಿದ್ದೇ ಮುಗಿದಿದ್ದು ಎಲ್ಲೆಡೆ ಶುಭ್ಮನ್ಗೆ ಸಲಾಂ ಅಂತಿದ್ದಾರೆ.
ನಮೋ ಮೈದಾನದಲ್ಲಿ ಶುಭ್ಮನ್ ಗಿಲ್ ಘರ್ಜನೆ
ಕಿವೀಸ್ ಸರಣಿಯ ಮೊದಲ ಪಂದ್ಯದಲ್ಲಿ 7 ರನ್ಗೆ ಔಟ್. 2ನೇ ಪಂದ್ಯದಲ್ಲಿ 11 ರನ್ಗಳಿಗೆ ಆಟ ಬಂದ್. ಈ ಎರಡು ವೈಫಲ್ಯಗಳು ಶುಭ್ಮನ್ ಗಿಲ್ ಟಿ20 ಕರಿಯರ್ ಅನ್ನೇ ಮುಗಿಸೋ ಸಿಚ್ಯುವೇಷನ್ ಕ್ರಿಯೇಟ್ ಮಾಡಿದ್ವು. ಎಗ್ಗಿಲ್ಲದೇ ಟೀಕಾ ಪ್ರಹಾರ ನಡೆದಿತ್ತು. ಆದ್ರೆ ಇದೆಲ್ಲವನ್ನ ಗಿಲ್ ತಲೆಗೆ ಹಾಕ್ಕೊಳ್ಳಲಿಲ್ಲ. ಹಾಗಂತ ಉತ್ತರ ಕೊಡಲಿಲ್ಲ ಅನ್ಕೋಬೇಡಿ. ಟೀಕಿಸಿದವರಿಗೆ ನಮೋ ಮೈದಾನದಲ್ಲಿ ಘರ್ಜಸಿ ಬ್ಯಾಟ್ನಿಂದಲೇ ಉತ್ತರ ನೀಡಿದ್ರು.
ಬೌಂಡರಿ, ಸಿಕ್ಸರ್ಗಳ ಆರ್ಭಟ, ಕಿವೀಸ್ ಪಡೆ ಥಂಡಾ
ಅಕ್ಷರಶಃ ಶುಭ್ಮನ್ ಗಿಲ್ ಬ್ಯಾಟಿಂಗ್ ವೈಭವ ಹಾಗಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ನೆರೆದಿದ್ದ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಮೇಳ ನಡೆಯಿತು. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಆಯ್ತು. ಕಿವೀಸ್ ಬೌಲರ್ಗಳ ದಾಳಿಯನ್ನ ಉಡಾಯಿಸಿದ ಗಿಲ್ ಬರೋಬ್ಬರಿ 12 ಬೌಂಡರಿ, 7 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನ ರಂಜಿಸಿದ್ರು.
ಶತಕ ಸಿಡಿಸಿ ಸಂಭ್ರಮಿಸಿದ ಪಂಜಾಬ್ ಪುತ್ತರ್
ಅಬ್ಬರಿಸಲೇಬೇಕಾದ ಒತ್ತಡವಿದ್ರೂ ಪಂದ್ಯದಲ್ಲಿ ಶುಭ್ಮನ್ ಫುಲ್ RELAXED ಆಗಿ ಬ್ಯಾಟ್ ಬೀಸಿದ್ರು. ಆರಂಭದಲ್ಲಿ ಎಚ್ಚರಿಕೆಯ ಆಟದೊಂದಿಗೆ ವೇಗವಾಗಿ ರನ್ ಕಲೆ ಹಾಕಿದ ಪಂಜಾಬ್ ಪುತ್ತರ್, 35 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ರು. ಆದ್ರೆ, ಹಾಫ್ ಸೆಂಚುರಿ ಸಿಡಿಸಿದ ಬಳಿಕ ಗಿಲ್ ಆಟ ಕಂಪ್ಲೀಟ್ ಚೇಂಜ್ ಆಯ್ತು. ಕಿವೀಸ್ ಬೌಲರ್ಗಳ ದಾಳಿಯನ್ನ ಬೌಂಡರಿ, ಸಿಕ್ಸರ್ಗಳಿಂದಲೇ ಡೀಲ್ ಮಾಡಿದ ಯಂಗ್ ಟೈಗರ್, ಮುಂದಿನ 19 ಎಸೆತಗಳಲ್ಲೇ ನೆಕ್ಸ್ಟ್ ಫಿಫ್ಟಿ ಸಿಡಿಸಿದ್ರು. ಅಂದ್ರೆ ಕೇವಲ 54 ಎಸೆತಗಳಲ್ಲಿ ಚೊಚ್ಚಲ ಸೆಂಚುರಿ ಬಾರಿಸಿದ್ರು. ಈ ಮೂಲಕ ಚುಟುಕು ಫಾರ್ಮೆಟ್ನಲ್ಲಿ ಸೆಂಚುರಿ ಸಿಡಿಸಿದ ಭಾರತದ 7ನೇ ಬ್ಯಾಟ್ಸ್ಮನ್ ಅನ್ನೋ ಸಾಧನೆ ಮಾಡಿದ್ರು.
ಶುಭ್ಮನ್ ಅಬ್ಬರದ ಮುಂದೆ ದಾಖಲೆಗಳೆಲ್ಲಾ ಉಡೀಸ್
ಕಿವೀಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಶುಭ್ಮನ್ ದಾಖಲೆಗಳನ್ನೂ ಉಡೀಸ್ ಮಾಡಿದ್ರು. ಟೆಸ್ಟ್, ಏಕದಿನ ಹಾಗೂ ಟಿ20 ಈ 3 ಮಾದರಿಯಲ್ಲಿ ಶತಕ ಸಿಡಿಸಿದ ದಿಗ್ಗಜ ಆಟಗಾರರ ಲಿಸ್ಟ್ನಲ್ಲಿ ಯುವ ಬ್ಯಾಟ್ಸ್ಮನ್ ಹೆಸರು ನೋಂದಾಯಿಸಿಕೊಂಡ್ರು. 3 ಮಾದರಿಯಲ್ಲಿ ಶತಕ ಸಿಡಿಸಿ ಭಾರತದ 5ನೇ ಬ್ಯಾಟ್ಸ್ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು. ಇಷ್ಟೇ ಅಲ್ಲ, ಕಿವೀಸ್ ವಿರುದ್ಧ ಏಕದಿನದಲ್ಲಿ ದ್ವಿಶತಕ, ಟಿ20ಯಲ್ಲಿ ಶತಕ ಸಿಡಿಸಿದ ವಿಶಿಷ್ಟ ಸಾಧನೆಯನ್ನೂ ಮಾಡಿದ್ರು.
ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ ಶೈನಿಂಗ್ ಶುಭ್ಮನ್
ಕೊಹ್ಲಿ ಅಂದ್ರೆ ದಾಖಲೆಯ ಒಡೆಯ. ಅಂತಹ ಕೊಹ್ಲಿಯ ಒಂದು ದಾಖಲೆಯನ್ನೇ ಶುಭ್ಮನ್ ಕಸಿದುಕೊಂಡ್ರು. ಪಂದ್ಯದಲ್ಲಿ 200ರ ಸ್ಟ್ರೇಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಶುಭ್ಮನ್ 63 ಎಸೆತಗಳಲ್ಲಿ ಅಜೇಯ 126 ರನ್ಗಳಿಸಿದ್ರು. ಈ ಮೂಲಕ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಅನ್ನೋ ದಾಖಲೆ ಬರೆದ್ರು. ಈ ಹಿಂದೆ ಈ ಹೆಗ್ಗಳಿಕೆ 122 ರನ್ ಸಿಡಿಸಿದ್ದ ಕಿಂಗ್ ಕೊಹ್ಲಿ ಹೆಸರಲ್ಲಿತ್ತು.
ಶೈನಿಂಗ್ ಶುಭ್ಮನ್ಗಿನ್ನೂ ಕೇವಲ 23 ವರ್ಷ, ಅದಾಗಲೇ ಏಕದಿನದಲ್ಲಿ ಡಬಲ್ ಸೆಂಚುರಿ, ಟಿ20ಯಲ್ಲಿ ಸೆಂಚುರಿಗಳನ್ನ ಚಚ್ಚಿ ದಾಖಲೆಯ ಪುಟಗಳಲ್ಲಿ ದಿಗ್ಗಜರೊಂದಿಗೆ ಸ್ಥಾನ ಪಡೀತಾ ಇದ್ದಾರೆ. ಸದ್ಯಕ್ಕಂತೂ ಶುಭ್ಮನ್ ಗಿಲ್ ಟೀಮ್ ಇಂಡಿಯಾದ ಪ್ಯೂಚರ್ ಸ್ಟಾರ್ ಅನ್ನೋ ಮಾತನ್ನ ಎಲ್ಲರೂ ಆಡ್ತಿದ್ದಾರೆ. ಇದೇ ಕನ್ಸಿಸ್ಟೆನ್ಸಿಯನ್ನೇ ಮುಂದುವರೆಸಿದ್ರೆ ಶುಭ್ಮನ್ ಗಿಲ್ ಲೆಜೆಂಡ್ ಪಟ್ಟ ಅಲಂಕರಿಸೋದ್ರಲ್ಲಿ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post