ಚಿಕ್ಕಬಳ್ಳಾಪುರ: ಇಷ್ಟು ದಿನ ಬೆಂಗಳೂರು, ಮೈಸೂರಿನ ಜನರಿಗೆ ಚಿರತೆಗಳು ಭಯ ಬೀಳಿಸಿ ನಾಲ್ವರನ್ನ ಬಲಿ ಪಡೆದಿದ್ದವು. ಸದ್ಯ ಚಿಕ್ಕಬಳ್ಳಾಪುರದಲ್ಲೂ ಚಿರತೆಗಳ ಅಟ್ಟಹಾಸ ಶುರುವಾಗಿದ್ದು ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದಲ್ಲಿ ಎರಡು ಚಿರತೆಗಳು ಸೇರಿ ಎರಡು ಕರುಗಳನ್ನ ಬಲಿ ಪಡೆದಿವೆ. ಇದರಿಂದ ಗ್ರಾಮಸ್ಥರು ಹೊರ ಹೋಗಲು ಭಯ ಪಡುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಕೂಡ ಹೊಲ, ಗದ್ದೆಗಳಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ.
ಇನ್ನು ಗ್ರಾಮದ ತೆಂಗಿನ ಮರದ ಮೇಲೆ ಎರಡು ಚಿರತೆಗಳು ರಾಜಾರೋಶವಾಗಿ ಓಡಾಡುತ್ತಿವೆ. ಇವುಗಳು ಓಡಾಟದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಹೀಗಾಗಿ ನಗರಸಭೆಯು ಮುನ್ನೆಚ್ಚರಿಕಾ ಕ್ರಮವಾಗಿ ಯಾವುದಕ್ಕೂ ಜನರು ಜಾಗ್ರತೆಯಿಂದ ಇರಬೇಕು ಎಂದು ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post