ಯಾದಗಿರಿ: ಬೃಹತ್ ಪ್ರಮಾಣದ ನೀರಾವರಿ ಪೈಪ್ಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲವಾದ ಘಟನೆ ಸುರಪುರ ತಾಲೂಕಿನ ಕೆಂಭಾವಿ ಸಮೀಪ ನಡೆದಿದೆ. ರೈತರ ಹೊಲದಲ್ಲಿ ಇಡಲಾಗಿದ್ದ ಪೈಪ್ಗಳಿಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿದಿವೆ.
ಬೂದಿಹಾಳ-ಪೀರಾಪೂರ ಏತ ನೀರಾವರಿ ಮಾಡಲೆಂದು ಪೈಪುಗಳನ್ನ ಕೆಂಭಾವಿ ಗ್ರಾಮದ ವ್ಯಾಪ್ತಿಯ ಹೊಲಗಳಲ್ಲಿ ಇಡಲಾಗಿತ್ತು. ಆದ್ರೆ ಪೈಪ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಎಲ್ಲ ಪೈಪ್ಗಳೆಲ್ಲ ಸುಟ್ಟುಕರಕಲಾಗಿವೆ. ರೈತರ ಹೊಲಗಳಿಗೆ ನೀರು ಹರಿಸಬೇಕೆಂದು ಜೋಡಣೆ ಮಾಡುವುದಕ್ಕಾಗಿ ಇಟ್ಟಂತಹ ಪೈಪ್ಗಳೆಲ್ಲ ಬೆಂಕಿಯಲ್ಲಿ ಸುಟ್ಟುಹೋಗಿವೆ. ಇನ್ನು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post