ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ತ್ರಯೋದಶಿ-ತಿಥಿ, ಆರಿದ್ರಾ-ನಕ್ಷತ್ರ ರಾಹುಕಾಲ- ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರ ವರೆಗೆ ಇರಲಿದೆ.
ಮೇಷ
- ಈ ದಿನ ನೀವು ಮಾಡಿದ ಎಲ್ಲಾ ಕೆಲಸಗಳಿಗೆ ಸಮಾಜದಲ್ಲಿ ಮನ್ನಣೆ, ಗೌರವ ಸಿಗಲಿದೆ
- ದುಬಾರಿ ವಸ್ತುಗಳನ್ನು ಖರೀದಿಸುವ ಅವಕಾಶವಿದೆ
- ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಅವಕಾಶವಿದೆ
- ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
- ಪ್ರೇಮಿಗಳಿಗೆ ಬಹಳ ಶುಭವಿರುವ ದಿನ
- ಈ ದಿನ ಕೆಲವು ವಿಚಾರಗಳಲ್ಲಿ ಅದೃಷ್ಟ ನಿಮ್ಮ ಪರವಾಗಿದೆ ಎಂದು ಹೇಳಬಹುದು
- ಗಣಪತಿ ಆರಾಧನೆ ಮಾಡಿ
ವೃಷಭ
- ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಸದಾವಕಾಶ
- ಹಣದ ವಿಚಾರದಲ್ಲಿ ಸ್ವಲ್ಪ ನಿರಾಸೆಯಾಗಬಹುದು
- ಅನುಪಯುಕ್ತವಾದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುತ್ತೀರಿ
- ಸಂವಾದದ ಮೂಲಕ ಅನೇಕ ವಿಧವಾದಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
- ಬೇರೆಯವರನ್ನು ದೂಷಿಸಬೇಡಿ
- ತಾಯಿಯವರ ಆರೋಗ್ಯದ ಕಡೆ ಗಮನವಿರಲಿ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರುವ ದಿನ
- ಬೇರೆಯವರ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ
- ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವಿದೆ
- ಮನೆಯಲ್ಲಿ ಜಟಿಲ ಸಮಸ್ಯೆಗಳು ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳುವ ದಿನ
- ನಿಮ್ಮ ಆತ್ಮಬಲವೇ ನಿಮಗೆ ಧೈರ್ಯ
- ವಿರೋಧಿಗಳಿಂದ ಅಂತರವನ್ನು ಕಾಪಾಡಿಕೊಳ್ಳಿ
- ಶಿವನ ಆರಾಧನೆ ಮಾಡಿ
ಕಟಕ
- ಹಳೆಯ ವಾದ-ವಿವಾದಗಳನ್ನು ದೂರಮಾಡಿಕೊಳ್ಳಿ
- ಗ್ರಹಗತಿಯ ದೃಷ್ಟಿಯಿಂದ ಅನುಕೂಲಕರವಾದ ಯೋಗವಿದೆ
- ಇಂದು ಹೊಸ ಹೂಡಿಕೆ ಮಾಡಬಹುದು
- ತನ್ನ ಇಚ್ಛೆಯಂತೆ ಎಲ್ಲವೂ ಕೂಡ ಆಗಲಿ ಎಂದು ನಿರೀಕ್ಷಿಸಬೇಡಿ
- ಉದ್ಯೋಗ ಬದಲಾವಣೆಗೆ ಅವಕಾಶವಿದೆ
- ನಿರ್ಧಾರಗಳಲ್ಲಿ ಗೊಂದಲಗಳು ಬೇಡ
- ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡಿ
ಸಿಂಹ
- ಧಾರ್ಮಿಕ ಚಿಂತನೆಯಿಂದ ಸಮಾಧಾನವಿದೆ
- ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಿದೆ
- ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡಿ
- ದೊಡ್ಡ ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸಕ್ಕೆ ಅವಕಾಶವಿದೆ
- ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುವಂತಹದ್ದು
- ಮನಸ್ಸಿಗೆ ಯಾವುದು ಸರಿ ಅನಿಸುತ್ತೊ ಅಂತಹ ನಿರ್ಧಾರ ಮಾಡಿ
- ನರಸಿಂಹ ಸ್ವಾಮಿಯನ್ನ ಆರಾಧನೆ ಮಾಡಿ
ಕನ್ಯಾ
- ನಿಮ್ಮ ವೈಯಕ್ತಿಕ ವಿಚಾರಕ್ಕೆ 3ನೇ ವ್ಯಕ್ತಿ ಬಂದು ರಾಜಿ ಮಾಡಲು ಅವಕಾಶ ಮಾಡಿಕೊಡಬೇಡಿ
- ತಾಳ್ಮೆಯನ್ನು ಪರೀಕ್ಷೆ ಮಾಡುವ ವಾತಾವರಣ ನಿರ್ಮಾಣ ಆಗಲಿದೆ
- ವಿರೋಧಿಗಳ ಮುಂದೆ ನೀವು ದುರ್ಬಲರಾಗುತ್ತೀರಿ
- ಜವಾಬ್ದಾರಿ ಅಥವಾ ಒತ್ತಡ ಹೆಚ್ಚಾಗುವ ಕೆಲಸವಿರುತ್ತದೆ
- ಗುಂಪಿರುವ ಸ್ಥಳಕ್ಕೆ ಹೋಗಬೇಡಿ ತೊಂದರೆಯಾಗಬಹುದು
- ಮಕ್ಕಳ ವರ್ತನೆಯಿಂದ ಬೇಸರ ಆಗಲಿದೆ
- ಸರಸ್ವತಿದೇವಿಯನ್ನು ಆರಾಧಿಸಿ
ತುಲಾ
- ರಾಜಕೀಯ ಪ್ರಭಾವ ಸ್ವಲ್ಪ ಅನುಕೂಲ ಮಾಡಬಹುದು
- ಮಾತುಕತೆಗಳಿಂದ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ
- ವ್ಯಾಪಾರ ಅಥವಾ ವೃತ್ತಿಯಲ್ಲಿ ಅಭಿವೃದ್ಧಿಯಿದೆ
- ಅನಾರೋಗ್ಯ ಪೀಡಿತರಲ್ಲಿ ಚೇತರಿಕೆ ಕಾಣಬಹುದು
- ಮನೆಯಲ್ಲಿ ದೀರ್ಘವಾದ ಚರ್ಚೆಯಾಗುತ್ತದೆ ಆದರೆ ಯಾವುದೇ ನಿರ್ಧಾರ ಮಾಡುವುದಿಲ್ಲ
- ಮನಸ್ಸು ಮಾತ್ರ ಪ್ರಶಾಂತವಾಗಿರಬೇಕು
- ಮೃತ್ಯುಂಜಯನ ಪ್ರಾರ್ಥನೆ ಮಾಡಿ
ವೃಶ್ಚಿಕ
- ವ್ಯಾಪಾರದಲ್ಲಿ ಹೊಸತನ್ನು ಕಾಣುವ ದಿನ
- ಸಹೋದ್ಯೋಗಿಗಳ ಜೊತೆ ಹೊಂದಾಣಿಕೆಯಿರಲಿ
- ಮನೆಯ ಬಗ್ಗೆ ಸ್ವಲ್ಪ ಕಾಳಜಿವಹಿಸಿ
- ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಪ್ರಯತ್ನಿಸಿ
- ಏಕಾಗ್ರತೆಯಿಂದ ನೀವು ಕೆಲಸ ಮಾಡಬೇಕು
- ಕುಟುಂಬದವರ ಸಹಕಾರ ನಿಮಗೆ ತೃಪ್ತಿ ಕೊಡಲಿದೆ
- ಕುಲದೇವತಾ ಆರಾಧನೆ ಮಾಡಿ
ಧನಸ್ಸು
- ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿ ಬೇಸರ ಆಗಲಿದೆ
- ಪ್ರೇಮ ವ್ಯವಹಾರ ಈ ದಿನ ತೊಂದರೆ ಮಾಡಬಹುದು ಜಾಗ್ರತೆವಹಿಸಿ
- ಆಹಾರ ಸೇವನೆಯಲ್ಲಿ ವ್ಯತ್ಯಾಸ ಆಗಬಹುದು ಗಮನವಿರಲಿ
- ಉತ್ತಮವಾದ ವಾತಾವರಣವನ್ನು ಕಲ್ಪನೆ ಮಾಡಿಕೊಳ್ಳಿ
- ಅನಗತ್ಯ ವಿಚಾರಗಳಲ್ಲಿ ತಲೆ ಹಾಕುವುದನ್ನು ನಿಲ್ಲಿಸಿಬಿಡಿ
- ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡುವಂತಹದ್ದು
- ದುರ್ಗಾದೇವಿಯ ಆರಾಧನೆ ಮಾಡಿ
ಮಕರ
- ಯಾವುದೇ ಕೆಲಸದಲ್ಲಿ ಆಡಂಬರ ಬೇಡ
- ಸ್ವಯಂ ಪ್ರಜ್ಞೆಯಿಂದಲೇ ಕೆಲಸ ಮಾಡಿ
- ಸ್ನೇಹಿತರಿಂದ ಸಹಾಯ ಆಗುವುದರಿಂದ ಅನುಕೂಲ ಆಗಲಿದೆ
- ಉದ್ಯೋಗಿಗಳಿಗೆ ಸ್ವಲ್ಪ ಒತ್ತಡದ ಸಮಯ
- ಉತ್ತಮರ ಸಾಧಕರ ಬಗ್ಗೆ ಓದಿ ತಿಳಿಯಿರಿ
- ನಿಮ್ಮ ತನವನ್ನು ಬಿಟ್ಟು ಬದಲಾದರೆ ಶುಭವಿದೆ
- ಇಷ್ಟದೇವತಾ ಆರಾಧನೆ ಮಾಡಿ
ಕುಂಭ
- ಮಕ್ಕಳ ವಿದ್ಯಾಭ್ಯಾಸ, ಅವರ ಚಟುವಟಿಕೆ, ನಡತೆ, ವರ್ತನೆಯಿಂದ ಸಮಾಧಾನ ಆಗಲಿದೆ
- ಇಂದು ವ್ಯಾಪಾರದಲ್ಲಿ ಪ್ರಗತಿ ಕಾಣುತ್ತೀರಿ
- ಸಮಯ ಹೇಗೆ ಕಳೆಯಿತು ಅನ್ನೋದು ಗೊತ್ತಾಗದೆ ಇರುವ ದಿನ
- ವಿವಾಹದ ವಿಚಾರದಲ್ಲಿ ಆನಂದ ಆಗಲಿದೆ
- ಮನೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ
- ಬೇಕು ಬೇಡಗಳ ವಿಚಾರದಲ್ಲಿ ಮನೆಯಲ್ಲಿ ಏಕಾಭಿಪ್ರಾಯ ಇರುವುದರಿಂದ ಖುಷಿ ಕೊಡಲಿದೆ
- ಪಾರ್ವತಿದೇವಿಯನ್ನು ಆರಾಧನೆ ಮಾಡಿ
ಮೀನ
- ನಿಮಗೆ ಕೆಟ್ಟದನ್ನು ಬಯಸುವವರನ್ನ ಭೇಟಿ ಮಾಡುವ ಪರಿಸ್ಥಿತಿ ಏರ್ಪಾಟಾಗುತ್ತದೆ
- ನಿಮ್ಮ ಗುರಿಯ ಬಗ್ಗೆ ತಿಳುವಳಿಕೆ ಇರಲಿ
- ಸಮಯಕ್ಕೆ ಆದ್ಯತೆಯನ್ನು ನೀಡಿ
- ಧನಾತ್ಮಕ ಫಲಿತಾಂಶಕ್ಕೆ ಬೇಕಾದವರಿಂದಲೇ ಅಡ್ಡಿಯಾಗುವಂತಹದ್ದು
- ಕೋಪ ಕಡಿಮೆ ಇರಲಿ ಕೋಪ ಹೆಚ್ಚಾದರೆ ನಷ್ಟವಿದೆ ಸ್ವಲ್ಪ ಗಮನಹರಿಸಿ
- ಮನೋವಿಕಾರ ಬೇಡ ದೃಢ ನಿರ್ಧಾರವಿರಲಿ
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post