ಕಲಬುರಗಿ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ ಎದುರಾಗಿದೆ. ಪೈಲಟ್ನ ಜಾಗರೂಕತೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದರಿಂದ ಭದ್ರತಾ ಲೋಪ ಕಂಡು ಬಂದಿದೆ.
ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರಹೊಲಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಜಮೀನಿನ ಸುತ್ತಾಮುತ್ತಾ ಇದ್ದ ಪ್ಲಾಸ್ಟಿಕ್ ಚೀಲ, ಡಬ್ಬ, ಇತರೆ ಕಸ ಹಾಗೂ ದೂಳು ಎಲ್ಲ ಗಾಳಿಗೆ ಹಾರಿ ಮೇಲೆದ್ದಿವೆ. ಇದರಿಂದ ಅಧಿಕಾರಿಗಳು, ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರು. ಇನ್ನೇನು ಲ್ಯಾಂಡಿಂಗ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ಎಚ್ಚೆತ್ತುಕೊಂಡು ಹೆಲಿಕಾಪ್ಟರ್ನ್ನ ಲ್ಯಾಂಡ್ ಮಾಡದೇ ಮತ್ತೆ ಮೇಲೆಕ್ಕೆ ತೆಗೆದುಕೊಂಡು ಹೋಗಿ ಒಂದೆರಡು ಸುತ್ತು ಹಾರಾಟ ನಡೆಸಿದರು. ಈ ವೇಳೆ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನ ತೆರವು ಮಾಡಿದ ಬಳಿಕ ಬಿಎಸ್ವೈ ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಯಿತು. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post