ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ ಕೃಷ್ಣಪಕ್ಷ, ಚತುರ್ಥಿ-ತಿಥಿ, ಸ್ವಾತಿ-ನಕ್ಷತ್ರ ಶನಿವಾರ- ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.
ಮೇಷ :
- ಆಧ್ಯಾತ್ಮಿಕ ವಿಚಾರಗಳಲ್ಲಿ ಮನಸ್ಸು ಬರಬಹುದು
- ಅಧಿಕವಾದ ಖರ್ಚಿನಿಂದ ಬೇಸರವಾಗಬಹುದು
- ನಿದ್ರಾಭಂಗದಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು
- ಇಂದು ಹಣ ಬಂದರೂ ಉಳಿಯುವುದಿಲ್ಲ
- ಇಂದು ನಿಮ್ಮನ್ನು ನೋಡಿದರೆ ಶತ್ರುಗಳಿಗೆ ಹೆದರಿಕೆ
- ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ
- ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ವೃಷಭ :
ಇಂದು ವಿನಾಕಾರಣ ದಂಡ ಕಟ್ಟಬೇಕಾಗಬಹುದು
- ಗೆಳೆಯರ ಕಷ್ಟಕ್ಕೆ ಸ್ಪಂದಿಸಿದ ನಿಮಗೆ ಮನ್ನಣೆ ಸಿಗಬಹುದು
- ಬಂಧು, ಮಿತ್ರರಿಂದ ನಿಮ್ಮಿಂದ ಅನುಕೂಲ
- ಇಂದು ಮಾನಸಿಕ ಗೊಂದಲದಲ್ಲಿ ಸಿಲುಕಬಹುದು
- ವಿದ್ಯಾರ್ಥಿಗಳಿಗೆ ಅಶುಭವಾದ ದಿನ
- ಉದ್ವೇಗಕ್ಕೆ ಒಳಗಾಗಬೇಡಿ ಇಂದು ಶಾಂತಿ ಬಹಳ ಅಗತ್ಯ
- ಮಹಾಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ :
ಧನಾಗಮ, ಸಂತೋಷ, ಸಮಾಧಾನವಾಗುವ ದಿನ
- ನಿಮ್ಮ ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
- ನ್ಯಾಯಾಲಯದ ಕೆಲಸದಲ್ಲಿ ಸಮಸ್ಯೆಯಾಗಬಹುದು
- ಆಲಸ್ಯದಿಂದ ಅವಕಾಶ ವಂಚಿತರಾಗುವ ಸಾಧ್ಯತೆಯಿದೆ
- ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಅದರಿಂದ ಅಸಮಾಧಾನ, ಅವಮಾನ ಸಾಧ್ಯತೆ
- ದೇವತಾ ಕಾರ್ಯದಲ್ಲಿ ಭಾಗಿಯಾಗಲು ನಿರಾಸಕ್ತಿ
- ದುರ್ಗಾರಾಧನೆ ಮಾಡಿ
ಕಟಕ :
ದಾಂಪತ್ಯದಲ್ಲಿ ವಿರಸ ಮತ್ತು ಬೇಸರ ಸಾಧ್ಯತೆ
- ಸ್ವಯಂಕೃತ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೀರಿ
- ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಪರಿಸ್ಥಿತಿ ಬರಬಹುದು
- ಆಸೆ, ಆಕಾಂಕ್ಷೆಗಳಿಗೆ ಯಾವುದೇ ರೀತಿಯ ಮನ್ನಣೆ ಇರುವುದಿಲ್ಲ
- ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ
- ಯಾವ ವಿಚಾರದಲ್ಲಿಯೂ ಸಮಸ್ಯೆಯಾಗದಂತೆ ಗಮನಿಸಿ
- ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ
ಸಿಂಹ :
ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆಯಾಗಬಹುದು
- ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
- ಕಲಾವಿದರಿಗೆ ವಿಶೇಷವಾದ ದಿನ
- ಹಣಕಾಸಿನ ವಿಚಾರದಲ್ಲಿ ಸ್ವಲ್ಪ ತೊಂದರೆಯಾಗಬಹುದು
- ಮನೋವ್ಯಥೆ ನಿಮ್ಮನ್ನು ಕಾಡಬಹುದು
- ಸರ್ಕಾರಿ ಕೆಲಸಗಳು ಸುಗಮವಾಗಿ ಈಡೇರುತ್ತವೆ
- ನವಗ್ರಹಾರಾಧನೆ ಮಾಡಿ
ಕನ್ಯಾ :
ಇಂದು ಸೌಜನ್ಯದಿಂದ ವರ್ತಿಸಿ ಅಪಮಾನದಿಂದ ಹೊರ ಬರಬಹುದು
- ಅಕಾಲ ಭೋಜನ, ಕೋಪ ಸಾಮನ್ಯವಾಗಿರುತ್ತದೆ
- ನಾನಾ ರೀತಿಯ ಚಿಂತೆ, ಬೇಸರ ಇರುತ್ತವೆ
- ಬಂಧುಗಳಿಂದ ಹಿಂಸೆ, ದೂರವಾಗುವಿಕೆಯ ಸೂಚನೆಯಿದೆ
- ಕೋರ್ಟು ಬೇರೆ ಕೇಸುಗಳಲ್ಲಿ ಜಯವಿಲ್ಲದ ಹೋರಾಟ ಸಾಧ್ಯತೆ
- ಮಕ್ಕಳ ಬಗ್ಗೆ ಅನುಮಾನ ಪಡುತ್ತೀರಿ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ತುಲಾ :
ಉದ್ಯೋಗದಲ್ಲಿ ಸ್ವಲ್ಪ ನಷ್ಟ, ಆದಾಯದ ಕೊರತೆ ಕಾಣುತ್ತದೆ
- ಧೃತಿಗೆಡದೆ ಸಮಾಧಾನ ಚಿತ್ತರಾಗಿರಬೇಕು
- ಆಹಾರ ಸೇವನೆಯಲ್ಲಿ ವ್ಯತ್ಯಾಸದಿಂದ ಶಾರೀರಿಕ ಹಿಂಸೆ ಸಾಧ್ಯತೆ
- ಸಾಲ ಮರುಪಾವತಿ ಮಾಡಲು ಹಣದ ಸಹಕಾರ ಸಿಗಬಹುದು
- ಯಾವುದೇ ಕುತಂತ್ರದ ಮಾತಿಗೆ ಒಳಗಾಗಬೇಡಿ
- ಸ್ನೇಹಿತರ ವರ್ತನೆ ಬೇಸರ ತರಬಹುದು
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ :
ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
- ಹೆಂಗಸರಿಂದ ಅನುಕೂಲ, ಸಹಾಯ ಸಿಗಬಹುದು
- ಕೆಲಸ ಕಾರ್ಯದಲ್ಲಿ ನಿರಾಸಕ್ತಿ ಕಾಡಬಹುದು
- ಅತಿಯಾದ ಭಯ ಮನಸ್ಸಿನಲ್ಲಿ ಉಂಟಾಗಬಹುದು
- ವಾದದಲ್ಲಿ ಸೋಲು, ಹಿನ್ನಡೆಯಾಗಬಹುದು
- ವ್ಯಾಪಾರದಲ್ಲಿ ಶುಭ ಮತ್ತು ಲಾಭವಿದೆ
- ವರದಿಗಾರರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್ಸು :
ಮಕ್ಕಳಿಗೆ ಉತ್ತಮ ಅವಕಾಶ ಅನುಕೂಲವಿದೆ
- ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಗಮನವಿರಲಿ
- ವಾಹನ ಅಪಘಾತವಾಗುವ ಸಂದರ್ಭವಿದೆ ಅನಗತ್ಯ ಪ್ರಯಾಣ ಬೇಡ
- ಸಹೋದರ, ಸಹೋದರಿಯರಿಂದ ಮೋಸವಾಗುವ ಸಾಧ್ಯತೆಯಿದೆ
- ನಿಮ್ಮ ಮಾತುಗಳು ಅನರ್ಥಕ್ಕೆ ಅವಕಾಶ ಮಾಡಿಕೊಡಬಹುದು ಎಚ್ಚರ
- ಸಂಬಂಧಿಕರ ಸಹಾಯ, ಸಹಕಾರ, ಬೆಂಬಲ ಸಿಗಬಹುದು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಕರ :
ಕಾನೂನು ಬಾಹಿರ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
- ಉತ್ತಮವಾದ ವ್ಯಕ್ತಿಗಳ ಪರಿಚಯವಾಗಿ ಅನುಕೂಲವಾಗಬಹುದು
- ಅಧಿಕ ತಿರುಗಾಟ, ಆಯಾಸ ಕಾಣಬಹುದು
- ಇಷ್ಟವಾದ ವಸ್ತುಗಳನ್ನು ಖರೀದಿ ಮಾಡುವುದರಿಂದ ಸಂತೋಷವಾಗುತ್ತದೆ
- ಸರ್ಕಾರಿ ಕೆಲಸಗಳಲ್ಲಿ ಜಯ, ನೆಮ್ಮದಿ ಕಾಣುತ್ತೀರಿ
- ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ, ಸಮಸ್ಯೆ ಉಂಟಾಗಬಹುದು
- ಭೂದೇವಿಯನ್ನು ಪ್ರಾರ್ಥನೆ ಮಾಡಿ
ಕುಂಭ :
ನಿಮ್ಮ ವೈಯಕ್ತಿಕ ವಿಚಾರಗಳಿಗೆ ಸಾಲ ಮಾಡ ಬೇಕಾದ ಸ್ಥಿತಿ ಬರಬಹುದು
- ಕಾರ್ಮಿಕರಿಂದ ತೊಂದರೆಯ ಸಂಭವವಿದೆ
- ತಾಯಿಯ ಸಹಾಯ, ಆಶೀರ್ವಾದ ಸ್ವಲ್ಪ ಬಲ ಕೊಡಬಹುದು
- ವಾಹನ ಚಾಲಕರಿಗೆ ಸ್ವಲ್ಪ ತೊಂದರೆಯಾಗುವ ಸಾಧ್ಯತೆಯಿದೆ
- ಪ್ರೇಮಿಗಳಿಗೆ ಶುಭವಿದೆ ಆದರೆ ಭಯವೂ ಇರುತ್ತದೆ
- ಋಣಾತ್ಮಕವಾದ ಚಿಂತೆಗಳು ಅಧಿಕವಾಗಿರುತ್ತವೆ
- ಇಂದು ದುರ್ಗಾರಾಧನೆ ಮಾಡಿ
ಮೀನಾ :
ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ತುಂಬ ಆತಂಕ ತರಬಹುದು
- ಬಂಧುಗಳಿಂದ ಮಾನಹಾನಿ, ದ್ವೇಷ ಹುಟ್ಟಿಕೊಳ್ಳಬಹುದು
- ದೈವ ಚಿಂತನೆಯಲ್ಲಿ ಆಸಕ್ತಿ ತೋರಿದರೆ ಒಳ್ಳೆಯದು
- ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶವಿದೆ
- ಸಂಗೀತ, ನೃತ್ಯ ಕಲಾವಿದರಿಗೆ ಅನುಕೂಲ ಮತ್ತು ಗೌರವ ಸಿಗಬಹುದು
- ಆಕಸ್ಮಿಕ ಧನಲಾಭವಾಗಿ ಸಂತೋಷ ಉಂಟಾಗಬಹುದು
- ನಟರಾಜನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post