ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕೇವಲ ಕಾಂಗ್ರೆಸ್ ನಾಯಕರ ಹೃದಯ ಗೆದ್ದಿರಲಿಲ್ಲ. ಅವರ ಸಭ್ಯ ರಾಜಕೀಯ, ಮೇರು ವ್ಯಕ್ತಿತ್ವ ಪಕ್ಷಾತೀತ ಮನಸುಗಳನ್ನ ಪ್ರೀತಿಯಿಂದ ಸೆಳೆದಿತ್ತು. ಮೈಸೂರು ಸಂಸದ ಪ್ರತಾಪ್ ಸಿಂಹ, ಧ್ರುವನಾರಾಯಣ್ ನಿಧನದ ಹಿನ್ನೆಲೆ ಇಂತಹ ಆತ್ಮೀಯ ನೆನೆಪುಗಳನ್ನ ಮೆಲುಕು ಹಾಕಿದ್ದಾರೆ. ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದ ಬಳಿಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಧ್ರುವನಾರಾಯಣ್ ಸಾಹೇಬ್ರು ಬೆಳಗ್ಗೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ ಎಂದು ನನಗೆ ಗೊತ್ತಾದಾಗ ಮನಸಿಗೆ ಬಹಳ ಆಘಾತವಾಯ್ತು. ನನಗೆ ವೈಯಕ್ತಿಕವಾಗಿ ಬಹಳ ಗೌರವಿಸುವ ವ್ಯಕ್ತಿ ಅಂದ್ರೆ ಧ್ರುವನಾರಾಯಣ್ ಅವರಾಗಿದ್ದರು. ಪಕ್ಷ ರಾಜಕಾರಣ ಬೇರೆ ಇರಬಹುದು. ಆದರೆ ಧ್ರುವನಾರಾಯಣ್ ಸಾಹೇಬರ ವ್ಯಕ್ತಿತ್ವ ಎಲ್ಲರನ್ನ ಗೆಲ್ಲುವುದಾಗಿತ್ತು ಎಂದು ಪ್ರತಾಪ್ ಸಿಂಹ ಸ್ಮರಿಸಿಕೊಂಡರು.
ನಾನು 2014ರಲ್ಲಿ ಸಂಸದನಾದಾಗ ಯಾವ ರಾಜಕೀಯದ ಅನುಭವ ನನಗಿರಲಿಲ್ಲ. ಆಗ ನನ್ನ ಕರೆದು ಯಾವ ರೀತಿ ಮೀಟಿಂಗ್ ಮಾಡಬೇಕು. ಯಾವ ಅಧಿಕಾರಿಗಳಿಗೆ ಯಾವ ವಿಚಾರಕ್ಕೆ ಕಾಲ್ ಮಾಡಬೇಕು. ಫೈಲ್ ಫಾಲೋಅಪ್ ಯಾವ ರೀತಿ ಮಾಡಬೇಕು. ಸಂಸದನಾಗಿ ಯೋಜನೆಗಳನ್ನ ಯಾವ ರೀತಿ ತರಬೇಕು ಅನ್ನೋದನ್ನ ಧ್ರುವನಾರಾಯಣ್ ಗೈಡ್ ಮಾಡಿದ್ದರು.
ಇದನ್ನೂ ಓದಿ: DK ಸುರೇಶ್ ಮುಂದೆಯೇ ಧ್ರುವನಾರಾಯಣ್ ಪಾರ್ಥಿವ ಶರೀರ ಎತ್ತಲು ಬಿಡದೆ ಅಭಿಮಾನಿಗಳ ಗಲಾಟೆ!
ಅವರು ಕಾಂಗ್ರೆಸ್‌ನವರು, ನಾನು ಬಿಜೆಪಿಯವ ಅಂತಾ ಯಾವತ್ತೂ ಧ್ರುವನಾರಾಯಣ್ ಸಾಹೇಬ್ರು ತಾರತಮ್ಯ ತೋರಲಿಲ್ಲ. ಪ್ರತಾಪ್ ಒಳ್ಳೆ ಕೆಲಸ ಮಾಡ್ತಿದ್ಯಾ ಗುಡ್ ಅಂತಾ ಬೆನ್ನು ತಟ್ಟಿದ್ದರು. ಈ ಭಾಗದಲ್ಲಿ ಇಷ್ಟು ಒಳ್ಳೆಯ ರಾಜಕಾರಣಿ, ಸಭ್ಯ ನಡತೆಯ ವ್ಯಕ್ತಿತ್ವ ಸಿಗೋದು ಕಷ್ಟ. ಚಾಮರಾಜನಗರ ಜಿಲ್ಲೆಗೆ ಧ್ರುವನಾರಾಯಣ್ ಕೊಡುಗೆ ಅಪಾರವಾದದ್ದು. ಅವರು ಇಷ್ಟು ಬೇಗ ದೂರವಾಗಿದ್ದು ಹಳೇ ಮೈಸೂರು ಭಾಗಕ್ಕೆ ತುಂಬಲಾರದ ನಷ್ಟ. ಈ ಭಾಗದ ಜನರು ನತದೃಷ್ಟರು ಅಂತಾನೇ ಹೇಳಬೇಕು. ಧ್ರುವನಾರಾಯಣ್ ಅವರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಾಪ್ ಸಿಂಹ ಕೋರಿದ್ದಾರೆ.
— Pratap Simha (@mepratap) March 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post