ಸಕ್ಕರೆನಾಡು ಮಂಡ್ಯ ಮದುಮಗಳಂತೆ ಸಿಂಗಾರಗೊಳ್ತಿದೆ. ವರ್ಷಾನುಗಟ್ಟಲೇ ಕಾಯ್ತಿದ್ದ ಕ್ಷಣಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ದಶಪಥ ಹೆದ್ದಾರಿ ಲೋಕಾರ್ಪಣೆಗೆ ಜಿಲ್ಲಾಡಳಿತ ಮತ್ತು ಕೇಸರಿ ಪಡೆ ಭರದಿಂದ ಸಿದ್ಧತೆ ನಡೆಸ್ತಿದೆ. ದಶಪಥ ರಾಷ್ಟ್ರೀಯ ಹೆದ್ದಾರಿ ರಾಜ್ಯದ ಅಭಿವೃದ್ಧಿಗೆ ಹಿಡಿದ ಮತ್ತೊಂದು ಕೈಗನ್ನಡಿ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಹೆದ್ದಾರಿ ನಾಳೆ ಲೋಕಾರ್ಪಣೆಗೊಳ್ಳಲಿದೆ. ಆ ಅದ್ಭುತ ಕ್ಷಣಕ್ಕಾಗಿ ಕೇಸರಿ ಕಲಿಗಳು ಹಾಗು ಜನರು ಕಾತರದಿಂದ ಕಾಯ್ತಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಭರದಿಂದ ಸಾಗ್ತಿದೆ ಬೃಹತ್ ವೇದಿಕೆ
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆ ಹಿನ್ನೆಲೆ ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ಮೋದಿ ನಾಳೆ ಆಗಮಿಸುತ್ತಿದ್ದು, ಜಿಲ್ಲಾಡಳಿತದಿಂದ ಸಿದ್ಧತೆ ಭರದಿಂದ ಸಾಗ್ತಿದೆ. ಮಂಡ್ಯದ ಮದ್ದೂರು ತಾಲೂಕಿನ ಗಜ್ಜಲೆಗೆರೆ ಬಳಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ರೆಡಿಯಾಗ್ತಿದೆ. ವೇದಿಕೆ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಹಿನ್ನೆಲೆ 30 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಮಹಾತ್ವಕಾಂಕ್ಷಿ ದಶಪಥ ಹೆದ್ದಾರಿ ಯೋಜನೆ ಬರೋಬ್ಬರಿ 10 ಸಾವಿರ ಕೋಟಿ ವೆಚ್ಚದಲ್ಲಿ 118 ಕಿಲೋ ಮೀಟರ್ ಉದ್ದ ನಿರ್ಮಾಣವಾಗಿದೆ. ನಾಳೆ ಹೆದ್ದಾರಿ ಲೋಕಾರ್ಪಣೆ ಕಾರ್ಯ ಪ್ರಧಾನಿ ಮೋದಿ ಅವರಿಂದ ನೆರವೇರುತ್ತಿದ್ದು ಸಕಲ ರೀತಿಯಲ್ಲಿ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಉದ್ಘಾಟನೆಗೂ ಮುನ್ನ ನಗರದಲ್ಲಿ ಐಬಿ ವೃತ್ತದಿಂದ ನಂದ ವೃತ್ತದವರಗೆ 1.8 ಕಿಲೋ ಮೀಟರ್‌ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ.
ಹೊಸ ಎಕ್ಸ್‌ಪ್ರೆಸ್‌ವೇ ದೇಶಕ್ಕೆ ಗಿಫ್ಟ್
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆದ್ದಾರಿ ವಿಡಿಯೋವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದು, ಇದು ದೇಶಕ್ಕೆ ಕೊಡುಗೆ ಎಂದಿದ್ದಾರೆ.
ನಿತಿನ್ ಗಡ್ಕರಿ, ಕೇಂದ್ರ ಸಚಿವ
ಹೊಸ ಎಕ್ಸ್‌ಪ್ರೆಸ್ ವೇನಿಂದ ಸಂಚಾರ ಸಮಯ 75 ನಿಮಿಷಕ್ಕೆ ಇಳಿಕೆಯಾಗಿದೆ. ಹೊಸ ಎಕ್ಸ್‌ಪ್ರೆಸ್ ವೇ ದೇಶಕ್ಕೆ ಗಿಫ್ಟ್. ಪ್ರಧಾನಿ ಮೋದಿ ನಾಯಕತ್ವದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿದೆ. ಸಿಟಿಗಳ ಸಂಪರ್ಕ, ಅಭಿವೃದ್ಧಿಗೆ ಉತ್ತೇಜನ ಮತ್ತು ಉಜ್ವಲ ಭವಿಷ್ಯದ ನಿರ್ಮಾಣವಾಗಲಿದೆ. ನಿತಿನ್ ಗಡ್ಕರಿ ಟ್ವೀಟ್‌ಅನ್ನ ಪ್ರಧಾನಿ ನರೇಂದ್ರ ಮೋದಿ ರೀ-ಟ್ವೀಟ್ ಮಾಡಿದ್ದಾರೆ.
ಇದು ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡುವ ಪ್ರಮುಖ ಸಂಪರ್ಕ ಯೋಜನೆಯಾಗಿದೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ
ಇನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಬರ್ತಿರೋ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟ ಪ್ರಕಾಶ್ ರಾಜ್ ಆ ಪೋಸ್ಟ್‌ನ್ನು ಹಂಚಿಕೊಂಡು ಕೌಂಟರ್ ಕೊಟ್ಚಿದ್ದಾರೆ.
ನೆನಪಿರಲಿ ಪ್ರಜೆಗಳೇ.. ರಸ್ತೆ ಹಾಕ್ಸಿದ್ ದುಡ್ಡು ನಮ್ಮದು. ನಾಳೆ ಅದರಲ್ಲಿ ಓಡಾಡೋಕೆ ಟೋಲ್ ಕಟ್ಟೋದು ನಾವೇ.. ಇದನ್ನು ಕೂಡ ಟ್ವೀಟರ್‌ನಲ್ಲಿ ಹಂಚಿಕೊಳ್ಳಿ ಸಂಸದರೇ.
ಪ್ರಕಾಶ್ ರಾಜ್, ನಟ
ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾದ್ರೆ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯ ಸುಮಾರು 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ. 8 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್ ಪಾಸ್ಗಳು, 11 ಓವರ್ ಪಾಸ್ಗಳು, 4 ರೈಲ್ವೆ ಮೇಲ್ಸೇತುವೆಗಳು, 5 ಬೈಪಾಸ್ಗಳು ಇರಲಿವೆ. ವಾರ್.. ಕ್ರೆಡಿಟ್ ವಾರ್‌ಗಳ ನಡುವೆ ದಶಪಥ ಹೆದ್ದಾರಿ ಲೋಕಾರ್ಪಣೆಗೆ ಸಜ್ಜಾಗ್ತಿದೆ. ರಾಜಕೀಯ ಪಕ್ಷಗಳು ಏನಾದ್ರೂ ಮಾಡ್ಕೊಳ್ಳಲಿ ನಮ್ಮ ಟೈಮ್ ಸೇವ್ ಆಯ್ತು. ಅಷ್ಟು ಸಾಕು ಅಂತ ಸಾರ್ವಜನಿಕರು ಹೇಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Reducing the commute time between Bengaluru & Mysuru from 3 hr to approximately 75 min, the access-controlled highway is a gift to the country, constructed under the outstanding and inspiring leadership of PM Shri @narendramodi Ji.#Bengaluru_Mysuru_Highway #PragatiKaHighway pic.twitter.com/nhS6qnBg3x
— Nitin Gadkari (@nitin_gadkari) March 10, 2023
An important connectivity project which will contribute to Karnataka’s growth trajectory. https://t.co/9sci1sVSCB
— Narendra Modi (@narendramodi) March 10, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post