ಕಿರುತೆರೆಯಲ್ಲಿ ಬೆಳೆದು ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಕಲಾವಿದರಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾದ ನಟಿ ಪ್ರಿಯಾಂಕಾ ಶಿವಣ್ಣ ಅವರು ಒಂದು ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡದ ಬಿಸಿಯಸ್ಟ್ ನಟಿ ಇದೀಗ ತೆಲುಗಿನ ಅಂಗಳಕ್ಕೆ ಹಾರಿದ್ದಾರೆ.
ಇದನ್ನು ಓದಿ: ಮತ್ತೆ ಎಡವಿದ ಕ್ಯಾಪ್ಟನ್; ರೋಹಿತ್ ನಿರ್ಧಾರಗಳಿಂದಲೇ ಟೀಂ ಇಂಡಿಯಾಗೆ ಸಂಕಷ್ಟ; ಆಗಿದ್ದೇನು?
ಬಿಗ್ಬಾಸ್ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ನಟಿ ಪ್ರಿಯಾಂಕಾ ಶಿವಣ್ಣ. ಪರ ಭಾಷೆಗೆ ಕಾಲಿಟ್ಟು ಅಲ್ಲಿನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಅವರ ಮೊದಲ ಪರಭಾಷೆಯ ಧಾರವಾಹಿಯಲ್ಲ. ಈಗಾಗಲೇ ಬೇರೆ ಭಾಷೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ಸೈ ಎನ್ನಿಸಿಕೊಡಿದ್ದಾರೆ. ಈಗ ಕನ್ನಡದಲ್ಲಿ ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಪಾತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.
ತೆಲುಗಿನ ಸ್ಟಾರ್ ವಾಹಿನಿಯಲ್ಲಿ ಹೊಸ ಧಾರಾವಾಹಿಯಾದ ನಾಗಪಂಚಮಿ ಸೀರಿಯಲ್ನಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಲು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಇದೆಂದು ಕಾಣಿಸಿಕೊಂಡಿರದ ಪಾತ್ರದ ಮೂಲಕ ನಟಿ ಪ್ರಿಯಾಂಕಾ ಶಿವಣ್ಣ ಕಿರುತೆರೆಯ ತೆರೆಯ ಮೇಲೆ ಬರಲು ರೆಡಿ ಇದ್ದಾರೆ. ಪ್ರಿಯಾಂಕಾ ಶಿವಣ್ಣ ಅವರು ನಾಗಪಂಚಮಿ ಧಾರಾವಾಹಿಯಲ್ಲಿ ನಾಗಿಣಿಯಾಗಿ ಪ್ರಮುಖ ಪಾತ್ರವನ್ನ ನಿಭಾಯಿಸಲಿದ್ದಾರೆ.
ಈಗಾಗಲೇ ಧಾರಾವಾಹಿಯ ಪ್ರೋಮೊ ಹೊರಬಂದಿದ್ದು. ಅಲ್ಲಿನ ವೀಕ್ಷಕರು ಕುತೂಹಲ ಭರಿತರಾಗಿದ್ದಾರೆ. ಇನ್ನು ಈ ಸೀರಿಯಲ್ ಪ್ರೋಮೊ ನೋಡಿದರೆ ಇದರಲ್ಲಿಯೂ ಕೂಡ ಪ್ರಿಯಾಂಕ ಅವರು ವಿಲನಿಶ್ ಶೇಡ್ನಲ್ಲಿಯೇ ಕಾಣಿಸಿಳ್ಳಲಿದ್ದಾರೆ ಅನ್ನೋದು ಖಚಿತವಾಗಿದೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ವಿಲನ್ ಈಗ ತೆಲುಗಿನಲ್ಲಿ ನಾಗಿಣಿಯಾಗಿ ಮಿಂಚಲು ರೆಡಿಯಾಗಿದ್ದಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post