ಲಾಸ್ ಏಂಜಲೀಸ್: 2023ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಯಾರ ಪಾಲಾಗುತ್ತೆ. ಇಡೀ ಜಗತ್ತಿನ ಸಿನಿ ಪ್ರಿಯರು ಕಾತರ, ಕುತೂಹಲದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ 2023ರ ಆಸ್ಕರ್ ಪ್ರಶಸ್ತಿ ಯಾರಿಗೆ ಅನ್ನೋದು ಬಯಲಾಗುತ್ತಿದೆ.
ಭಾರತೀಯರಿಗೆ ಈ ಬಾರಿಯ ಆಸ್ಕರ್ ಅವಾರ್ಡ್ ಬಹಳಷ್ಟು ಸ್ಪೆಷಲ್ ಆಗಿದೆ. ಯಾಕಂದ್ರೆ ಮೂರು ಸಿನಿಮಾಗಳು 2023ರ 95ನೇ ಆಸ್ಕರ್ ಪ್ರಶಸ್ತಿಯ ರೇಸ್‌ನಲ್ಲಿ ನಾಮಿನೇಟ್ ಆಗಿವೆ. ರಾಜಮೌಳಿ ನಿರ್ದೇಶನದ RRR ಚಿತ್ರದ ನಾಟು.. ನಾಟು ಹಾಡು ದಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆಲ್ ದಟ್ ಬ್ರೀತ್ಸ್ ಮತ್ತು ದಿ ಎಲೆಫ್ಯಾಂಟ್ ವಿಸ್ಪರ್ಸ್ ಸಾಕ್ಷಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮಿನೆಟ್ ಆಗಿರೋದು ಭಾರತೀಯರಿಗೆ ವಿಶೇಷವಾಗಿದೆ.
95ನೇ ಆಸ್ಕರ್ ಪ್ರಶಸ್ತಿಯ ಕಲರ್‌ಫುಲ್ ಕಾರ್ಯಕ್ರಮಕ್ಕೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಅವಾರ್ಡ್ ಅನೌನ್ಸ್‌ಗೂ ಮುಂಚೆಯೇ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳು ಬಯಲಾಗಿದೆ.
ಆಸ್ಕರ್ ಅಂಗಳದಲ್ಲಿ ನಾಟು, ನಾಟು ಹಾಡಿಗೆ ಖ್ಯಾತ ಹಾಲಿವುಡ್ ನಟಿ, ಮಾಡೆಲ್, ಸಿಂಗರ್ ಡ್ಯಾನ್ಸ್ ಮಾಡುತ್ತಿದ್ದಾರೆ. ನಟಿ ಲೌರೆನ್ ಗೊಟ್‌ಲೈಬ್ ಖುದ್ದು ಈ ಸುಳಿವು ಬಿಟ್ಟು ಕೊಟ್ಟಿದ್ದು, ನಾಟು, ನಾಟು ಅನ್ನೋ ಹೈ ಎನರ್ಜೆಟಿಕ್ ಹಾಡಿಗೆ ಹೆಜ್ಜೆ ಹಾಕುತ್ತೇನೆ ಎಂದು ತಿಳಿಸಿದ್ದಾರೆ. ನಾನು ಭಾರತದ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದಕ್ಕೆ ಖುಷಿ ಪಡುತ್ತೇನೆ. ಆಸ್ಕರ್ ಸ್ಟೇಜ್‌ನಲ್ಲಿ ನಾಟು, ನಾಟು ಹಾಡಿಗೆ ಪ್ರದರ್ಶನ ನೀಡುತ್ತಿರುವುದು ಹರ್ಷ ತಂದಿದೆ ಎಂದಿದ್ದಾರೆ.
View this post on Instagram
RRR ಸಿನಿಮಾದಲ್ಲಿ ನಟಿಸಿರುವ ರಾಮ್ ಚರಣ್ ತೇಜ ಹಾಗೂ ಜ್ಯೂ. NTR ಈಗಾಗಲೇ ಆಸ್ಕರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೂ.NTR ಬೆಸ್ಟ್ ಆ್ಯಕ್ಟರ್ ಅವಾರ್ಡ್‌ಗೆ ನಾಮಿನೇಟ್ ಆಗಿರುವ ಬ್ರೆಂಡನ್ ಫ್ರೆಸರ್ ಜೊತೆ ಸೆಲ್ಫೆ ತೆಗೆದು ಶೇರ್ ಮಾಡಿದ್ದಾರೆ. ಬ್ರೆಂಡನ್ ಫ್ರೆಸರ್ ಅವರಿಗೆ ಗುಡ್ ಲಕ್ ಹೇಳಿದ್ದೇನೆ ಎಂದು ತಮ್ಮ ಫೋಟೋವನ್ನ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಪ್ರೀತಿ ಝಿಂಟಾ ಕೂಡ ಆಸ್ಕರ್ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಜ್ಯೂ.NTR ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಈ ಬಾರಿ ಆಸ್ಕರ್ ಅಂಗಳದಲ್ಲಿ ಮಿಂಚುತ್ತಿದ್ದು, ಹಲವು ಸ್ಟಾರ್ ನಟ, ನಟಿಯರ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post