ಮೊನ್ನೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಆಚಾರ್ ಮತ್ತು ಪಾರು ಖ್ಯಾತಿಯ ಸಿದ್ದು ಮೂಲಿಮನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿವೆ.
ಇದನ್ನು ಓದಿ: ಪಾರು ಪ್ರೀತಂ, ಗಟ್ಟಿಮೇಳ ಅದಿತಿ ಮಧ್ಯೆ ಚುಂಬನ ಕಲ್ಯಾಣ; ಇದು ಸೀರಿಯಲ್ ಸಂಭ್ರಮ
ಕಳೆದ ಎರಡು ವರ್ಷಗಳಿಂದ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಿದ್ದು ಮೂಲಿಮನಿ ಪಾರು ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡು ಎಲ್ಲರ ಮನೆ ಹಾಗೂ ಮನದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಇನ್ನು ಗಟ್ಟಿಮೇಳ ಧಾರಾವಾಹಿ ಮೂಲಕ ಅಪಾರ ಪಡ್ಡೆ ಹುಡುಗರ ಮನಸ್ಸನ್ನು ಕದ್ದ ಬೆಡಗಿ ನಟಿ ಪ್ರಿಯಾ ಆಚಾರ್ ಕೂಡ ಅನೇಕ ಪ್ರಮಾಣದಲ್ಲಿ ಎಲ್ಲರ ಮನೆಮಾತಾಗಿದ್ದಾರೆ.
ಇದನ್ನು ಓದಿ: VIDEO: ತುಂತುರು ಅಲ್ಲಿ ನೀರ ಹಾಡು.. ಕಂಪನ ಇಲ್ಲಿ ಪ್ರೀತಿ ಹಾಡು; ದುಬೈನಲ್ಲಿ ನವಜೋಡಿಯ ಚಿಲಿಪಿಲಿ
ಡ್ಯಾನ್ಸ್ ಶೋ ಒಂದರಲ್ಲಿ ಪರಿಚಿತರಾದ ಸಿದ್ದು ಹಾಗೂ ಪ್ರಿಯಾ ಜೆ ಆಚಾರ್ ಅವರು ಆ ನಂತರದ ದಿನಗಳಲ್ಲಿ ಧಮಾಕ ಚಿತ್ರದಲ್ಲಿ ಒಟ್ಟಿಗೆ ನಟಿಸಿ ಸೈ ಎನಿಸಿಕೊಂಡರು. ಫೆಬ್ರವರಿ 12 ತಾರಿಖಿನಂದು ನಟ ಸಿದ್ದು ಹಾಗೂ ನಟಿ ಪ್ರಿಯಾ ಆಚಾರ್ ಹಸೆಮಣೆ ಏರಿದ್ದರು. ಇವರ ಮದುವೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾ ಹಾರೈಸಿದ್ದರು.
ಇನ್ನು ನಟಿ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಮದುವೆಯಾದ ಬಳಿಕ ಹೊಸ ಹೊಸ ಫೋಟೋಶೂಟ್ಗಳನ್ನು ಕ್ಲಿಕ್ಕಿಸಿಕೊಳ್ಳುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇನ್ನು ರೋಮ್ಯಾಂಟಿಕ್ ಆಗಿರೋ ಫೋಟೋವನ್ನು ನಟಿ ಪ್ರಿಯಾ ಆಚಾರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೂದು ಬಣ್ಣದ ಲೆಹೆಂಗಾದಲ್ಲಿ ಸಿದ್ದು ಮೂಲಿಮನಿ ಪತ್ನಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾಳೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post