ಮನಸ್ಸಿದ್ದರೆ ಮಾರ್ಗ ಕನಸಿದ್ದರೆ ಸಾಧನೆ ಅನ್ನೋ ಮಾತು ಈ ವ್ಯಕ್ತಿಗೆ ಸರಿಯಾಗಿ ಅನ್ವಯಿಸುತ್ತೆ. 294 ಕೆಜಿ ತೂಕವಿದ್ದ ಈ ದಡೂತಿ ಮನುಷ್ಯ ಬಹಳಷ್ಟು ಶ್ರಮಪಟ್ಟು 129 ಕೆಜಿ ತೂಕ ಇಳಿಸಿದ್ದಾನೆ. ಬರೋಬ್ಬರಿ 165 ಕೆಜಿ ತೂಕ ಇಳಿಸಿರೋ ಈತನ ಸಾಧನೆ ನಿಜಕ್ಕೂ ಸಾಮಾನ್ಯವಲ್ಲ.
ಜೂನ್ 2019ರಲ್ಲಿ ಅಮೆರಿಕಾ ಮಿಸಿಸ್ಸಿಪ್ಪಿ ಮೂಲದ ನಿಕೊಲಾಸ್ ಕ್ರಾಫ್ಟ್ 649 ಪೌಂಡ್ ಅಂದ್ರೆ 294 ಕೆಜಿ ತೂಕವಿದ್ದರು. ದಡೂತಿ ದೇಹ ನಿಕೊಲಾಸ್‌ಗೆ ಎಷ್ಟು ಕಾಡಿಸಿತ್ತು ಅಂದ್ರೆ ಈ ಜೀವನವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದರಂತೆ. ಮೂರು ವರ್ಷದ ಹಿಂದೆಯೇ ನಿಕೊಲಾಸ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರಂತೆ.
ಕೊನೆಗೆ ವೈದ್ಯರ ಸಲಹೆ ಪಡೆದ ನಿಕೊಲಾಸ್ ಕ್ರಾಫ್ಟ್ ತನ್ನ ದೇಹದ ತೂಕ ಇಳಿಸಲು ಆರಂಭಿಸಿದ್ದಾರೆ. ನಿಯಮಿತ ಆಹಾರ ಪದ್ಧತಿಯ ಡೈಯಟ್ ನಿಕೊಲಾಸ್ ಬದುಕನ್ನೇ ಬದಲಾಯಿಸಿದೆ. ಊಟದ ಕ್ರಮ ಬದಲಿಸಿದ ಒಂದೇ ತಿಂಗಳಿಗೆ ನಿಕೊಲಾಸ್ 40 ಪೌಂಡ್ ತೂಕ ಇಳಿಸಿದ್ದಾರೆ.
ನನಗೆ ನನ್ನ ಅಮ್ಮ, ಅಜ್ಜಿ, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು, ಸಂಬಂಧಿಕರು ಬಹಳಷ್ಟು ಸಹಾಯ ಮಾಡಿದರು. ಎಲ್ಲರ ಸಹಕಾರದಿಂದ ನಾನಿಷ್ಟು ತೂಕ ಇಳಿಸಲು ಸಾಧ್ಯವಾಯಿತು ಎಂದು ನಿಕೊಲಾಸ್ ಧನ್ಯವಾದ ಹೇಳಿದ್ದಾರೆ. ದಿಢೀರ್ ತೂಕ ಇಳಿಸಿಕೊಂಡ ನಿಕೊಲಾಸ್ ಸದ್ಯ ದೇಹದ ಚರ್ಮದ ಸಮಸ್ಯೆಗೂ ತುತ್ತಾಗಿದ್ದಾರೆ. ಚರ್ಮದ ಶಸ್ತ್ರ ಚಿಕಿತ್ಸೆಗೆ ನಿಕೊಲಾಸ್ ಒಳಗಾಗಿದ್ದು, ಆ ಸವಾಲನ್ನು ಗೆದ್ದು ಬರುವ ವಿಶ್ವಾಸದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post