ಮದುವೆ ಪ್ರತಿಯೊಬ್ಬರ ಬಾಳಿನಲ್ಲಿ ಮರೆಯಲಾರದ ಕ್ಷಣ. ವಧು-ವರನ ನಡುವೆ ನೂರಾರು ಅನುಬಂಧ ಹೆಣೆದುಕೊಡುವ ಸಂಭ್ರಮದ ಸಮಯವದು. ಸದ್ಯ ಈ ಸಂಗತಿಗಳನ್ನ ಇಲ್ಲೇಕೆ ಹೇಳುತ್ತಿದ್ದೇವೆ ಅಂದರೆ, ಇಲ್ಲೊಬ್ಬ ಯುವತಿ ತನ್ನನ್ನೇ ತಾನು ವಿವಾಹವಾಗಿ ಮತ್ತೆ ಡಿವೋರ್ಸ್ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.
ಬ್ಯೂಟಿಫುಲ್ ಬೆಡಗಿ, ಬಿಳಿ ಕಮಲದಂತವಳು ತನ್ನನ್ನು ತಾನೇ ಮದುವೆಯಾದ ಈ 25ರ ಯವೌನದ ಯುವತಿಯ ಹೆಸರು ಸೋಫಿ ಮೌರ್. ಅರ್ಜೆಂಟೀನಾ ದೇಶದವರು. ಈಕೆ ಫೆಬ್ರವರಿ 20 ರಂದು ಮದುವೆಯಾಗಿದ್ದಳು. ಈ ಬಗ್ಗೆ ತನ್ನ ಟ್ವಿಟರ್ ಅಕೌಂಟ್ನಲ್ಲಿ ಫೋಟೋಗಳನ್ನ ಶೇರ್ ಮಾಡಿ ತನ್ನ ಫ್ಯಾನ್ಸ್ ಹಾಗೂ ಫಾಲೋವರ್ಸ್ಗೆ ನನ್ನನ್ನು ನಾನೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದರು.
ಬಿಳಿ ಬಣ್ಣದ ಗೌನ್ ಡ್ರೆಸ್ ಹಾಕಿಕೊಂಡು ತಲೆ ಮೇಲೆ ಗೋಲ್ಡ್ ಕಲರ್ ಕಿರೀಟ ಧರಿಸಿಕೊಂಡು ವಧುವಾಗಿ ತನ್ನನ್ನ ತಾನೇ ವರಿಸಿಕೊಂಡಿದ್ದಾಳೆ. ನಂತರ ಕೇಕ್ ಕಟ್ ಮಾಡಿ ಸಂಭ್ರಮಸಿದ್ದಾಳೆ. ಮರುದಿನ ಅಂದರೆ ಫೆಬ್ರವರಿ 21 ರಂದು ನನ್ನನ್ನು ನಾನೇ ಮದುವೆಯಾಗಿರುವುದು ಸಹಿಸಿಕೊಳ್ಳಲು ಆಗದೇ ಡಿವೋರ್ಸ್ ನೀಡಿದ್ದೇನೆ. ಇದನ್ನು ಮತ್ತೆ ಪಡೆಯಲಾಗಲ್ಲ ಎಂದು ಚೆಲುವೆ ಟ್ವಿಟ್ ಮಾಡಿದ್ದಾಳೆ. ಸದ್ಯ ಇದಕ್ಕೆ ನೆಟ್ಟಿಗರಲ್ಲಿ ಹಲವಾರು ಪ್ರಶ್ನೆಗಳು ಮೂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
hoy en momentos esquizo de mi vida me compre un vestido de novia y me cocine una torta de casamiento para casarme conmigo misma pic.twitter.com/yQvYUUKsM4
— Sofi 𒉭 (@sofimaure07) February 19, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post