ಮೈಸೂರು: ಮಾಜಿ ಸಂಸದ ಆರ್.ಧ್ರುವನಾರಾಯಣ ವಿಧಿವಶ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬುದು ಭಾರೀ ಕುತೂಹಲ ಮೂಡಿತ್ತು. ಆದ್ರೆ ಧ್ರುವನಾರಾಯಣ ಪುತ್ರ ದರ್ಶನ್ಗೆ ಟಿಕೆಟ್ ಬಹುತೇಕ ಪಕ್ಕಾ ಆಗಿದೆ.
ಧ್ರುವನಾರಾಯಣ ಅವರ 11ನೇ ದಿನದ ವೈಕುಂಠ ಸಮಾರಾಧನೆ ದಿನ ದರ್ಶನ್ಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆಯಿದೆ.
ನಂಜನಗೂಡು ಕ್ಷೇತ್ರದಿಂದ ಅವರ ಮಗನನ್ನ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಧ್ರುವನಾರಾಯಣ ಸ್ಪರ್ಧಿಸಲು ಚಿಂತಿಸಿದ್ದ ಕ್ಷೇತ್ರವಾಗಿದೆ. ಅವರ ಅಕಾಲ ಮರಣದ ಹಿನ್ನೆಲೆಯಲ್ಲಿ ದರ್ಶನ್ರನ್ನ ಕಣಕ್ಕಿಳಿಸಲು ಪಕ್ಷದಲ್ಲಿ ಆಂತರಿಕ ಮಾತುಕತೆ ನಡೆದಿದೆ. ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕ್ಷೇತ್ರದಲ್ಲಿ ಮಹದೇವಪ್ಪ ಬದಲು ದರ್ಶನ್ ಸ್ಪರ್ಧೆ ನಡೆಸಲಿ ಎಂದು ಕೂಗು ಕೇಳಿ ಬರುತ್ತಿದೆ.
ತಂದೆಯಂತೆ ದರ್ಶನ್ ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿದ್ದಾರೆ. ಎಲ್ಎಲ್ಬಿ ಮುಗಿಸಿ ವಕೀಲ ವೃತ್ತಿ ಮಾಡುತ್ತಿರುವ ವಿದ್ಯಾವಂತ ಯುವಕ. ಅಲ್ಲದೇ ಕ್ಷೇತ್ರದಲ್ಲಿ ದರ್ಶನ್ಗೆ ಟಿಕೆಟ್ ನೀಡುವಂತೆ ಒತ್ತಡ ಕೇಳಿ ಬರುತ್ತಿದೆ. ಧ್ರುವನಾರಾಯಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗು ಆಪ್ತರಾಗಿದ್ದರು. ಹೀಗಾಗಿ ಅವರ ಕಾರ್ಯವೈಖರಿ ಹಾಗು ಅವರ ಸಾವಿನ ಅನುಕಂಪ ವರ್ಕೌಟ್ ಆಗುವ ಸಾಧ್ಯತೆಯಿದೆ. ದರ್ಶನ್ಗೆ ಟಿಕೆಟ್ ನೀಡದಿದ್ದರೇ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳು ಮತ ಸೆಳೆಯುವ ಆತಂಕ ಎದುರಾಗಲಿದೆ ಎಂದು ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿದ್ದಾವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post