ಲಂಡನ್: ಅಮೆರಿಕಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಬಾಗಿಲು ಬಂದ್ ಆಗಿದೆ. ಸ್ಟಾರ್ಟ್ ಅಪ್ ಉದ್ಯಮಕ್ಕೆ ಹೆಸರುವಾಸಿಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಈ ಪತನ ಕೇವಲ ಅಮೆರಿಕಾಕ್ಕೆ ಮಾತ್ರವಲ್ಲ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಲಂಡನ್‌ನಲ್ಲೂ ತನ್ನ ಶಾಖೆಯನ್ನು ಹೊಂದಿತ್ತು. ಈ ಶಾಖೆ ಹಾಗೂ ಅದರ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಕೇವಲ ಒಂದು ಪೌಂಡ್‌ಗೆ ಮಾರಾಟ ಮಾಡಲಾಗಿದೆ. ಒಂದು ಪೌಂಡ್ ಅಂದ್ರೆ ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದ್ರೆ ಕೇವಲ 99 ರೂಪಾಯಿ.
ಇದನ್ನೂ ಓದಿ: ದೆಹಲಿಯಿಂದ ದೋಹಾಕ್ಕೆ ಹಾರುತ್ತಿದ್ದ ವಿಮಾನ ಪಾಕಿಸ್ತಾನದಲ್ಲಿ ಲ್ಯಾಂಡ್! ಕಾರಣ ಏನು ಗೊತ್ತಾ?
99 ರೂಪಾಯಿ ಅಂದ್ರೆ ಒಂದು ಪೌಂಡ್‌ಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಲಂಡನ್ ಶಾಖೆಯನ್ನ HSBC ಬ್ಯಾಂಕ್‌ಗೆ ಮಾರಾಟ ಮಾಡಲಾಗಿದೆ. ಬ್ಯಾಂಕಿಂಗ್ ಕಾಯಿದೆ 2009ರಡಿ ಈ ಬ್ಯಾಂಕ್ ಮಾರಾಟ ಮಾಡಲಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಇಂಗ್ಲೆಂಡ್‌ನಲ್ಲಿ 5.5 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಒಟ್ಟಾರೆ ಇಂಗ್ಲೆಂಡ್‌ನ ಹಣಕಾಸಿನ ವ್ಯವಹಾರದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ 6.7 ಬಿಲಿಯನ್ ಡಾಲರ್ ಠೇವಣಿಯನ್ನು ಹೊಂದಿತ್ತು. ಈ ಬಗ್ಗೆ ಇಂಗ್ಲೆಂಡ್ ಸರ್ಕಾರ ಮತ್ತು HSBC ಬ್ಯಾಂಕ್‌ನಿಂದ ಅಧಿಕೃತ ಮಾಹಿತಿ ಪ್ರಕಟಿಸಲಾಗಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿದ 2 ದಿನದ ಬಳಿಕ ಅಮೆರಿಕಾದ ಮತ್ತೊಂದು ಬ್ಯಾಂಕ್ ಕೂಡ ತನ್ನ ಬಾಗಿಲು ಬಂದ್ ಮಾಡಿದೆ. ಅಮೆರಿಕಾದ 3ನೇ ದೊಡ್ಡ ಬ್ಯಾಂಕ್ ನ್ಯೂಯಾರ್ಕ್‌ನ ಸಿಗ್ನೇಚರ್ ಬ್ಯಾಂಕ್ ಕೂಡ ಬಂದ್ ಮಾಡಲಾಗಿದೆ.
ಸಿಗ್ನೇಚರ್ ಬ್ಯಾಂಕ್‌ನಲ್ಲಿ ಅಮೆರಿಕಾದ ನಾಗರಿಕರು 88 ಬಿಲಿಯನ್ ಡಾಲರ್ ಠೇವಣಿ ಇಟ್ಟಿದ್ದಾರೆ. ಸಿಗ್ನೇಚರ್ ಬ್ಯಾಂಕ್‌ನ ಆಸ್ತಿ 110 ಬಿಲಿಯನ್ ಡಾಲರ್‌ನಷ್ಟಿದೆ. ಸಾಲು, ಸಾಲು ಬ್ಯಾಂಕ್‌ಗಳ ಪತನದ ಹಿನ್ನೆಲೆಯಲ್ಲಿ ಫೆಡರಲ್ ಡಿಫಾಸಿಟ್ ಇನ್ಸೂರೆನ್ಸ್ ಕಾರ್ಪೋರೇಷನ್ ಮಧ್ಯ ಪ್ರವೇಶಿಸಿದೆ. ಫೆಡರಲ್ ಡಿಫಾಸಿಟ್ ಇನ್ಸೂರೆನ್ಸ್, ಸಿಗ್ನೇಚರ್ ಬ್ಯಾಂಕ್, ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗಳನ್ನು ನಿಯಂತ್ರಣಕ್ಕೆ ಪಡೆದಿದೆ. ಇದರ ಜೊತೆಗೆ ಎಲ್ಲಾ ಠೇವಣಿದಾರರಿಗೆ ಠೇವಣಿ ಹಣ ಹಿಂತಿರುಗಿಸುವ ಭರವಸೆ ನೀಡಿದೆ. ಆದರೆ ಜನರ ತೆರಿಗೆ ಹಣದಿಂದ ಠೇವಣಿ ಹಣ ವಾಪಸ್ ಕೊಡಲ್ಲ ಎಂದಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಈ ಪರಿಸ್ಥಿತಿಯಿಂದ ಅಮೆರಿಕಾದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
A statement from @thebankoflondon regarding @SVB_UK (Silicon Valley Bank UK Limited) – 7:08AM London, March 13 2023. pic.twitter.com/c6gFHucWSI
— The Bank of London (@thebankoflondon) March 13, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post