ಕಿರುತೆರೆಯಲ್ಲಿ ಹೊಸ ವೈಭವ ಸೃಷ್ಟಿಸಿದ ಕಥೆ ದಾಸಪುರಂದರ. ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಜೀವನ ಚರಿತ್ರೆಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಾಸಪುರಂದರ ಸೀರಿಯಲ್ ವೈಂಡಪ್ ಆಗಿದೆ.
ಇದನ್ನು ಓದಿ: ‘ದಾಸ ಪುರಂದರ’ ಸ್ಟೋರಿಗೆ ಹೊಸ ತಿರುವು.. ಇನ್ಮುಂದೆ ಶ್ರೀನಿಯ ಕಥೆಯೇ ಬೇರೆ..!
ಸುಮಾರು ಎರಡೂವರೆ ವರ್ಷಗಳ ಕಾಲ ರಿಸರ್ಚ್ ಮಾಡಿ ಹಲವು ಸವಾಲುಗಳೊಂದಿಗೆ ಈ ಸೀರಿಯಲ್ ಅನ್ನು ಶುರು ಮಾಡಲಾಗಿತ್ತು. ನವಕೋಟಿ ನಾರಾಯಣ ದಾಸರಾದ ಕಥೆ ಜಯದುರ್ಗಾ ಕ್ರಿಯೇಷನ್ಸ್ ನಿರ್ಮಾಣದ ಐತಿಹಾಸಿಕ ಧಾರಾವಾಹಿ.
ಹತ್ತು ಹಲವು ವಿಶೇಷತೆಗಳನ್ನ ಹೊಂದಿದ್ದ ಸೀರಿಯಲ್ ಮುಕ್ತಾಯಗೊಂಡಿದೆ. ಆದಿ ಇದ್ಮೇಲೆ ಅಂತ್ಯವೂ ಇರ್ಲೇಬೇಕು ಅಲ್ವಾ? ಮೂಲಗಳ ಪ್ರಕಾರ ರೇಟಿಂಗ್ ಕಾರಣದಿಂದ ತಂಡ ಈ ನಿರ್ಧಾರ ತಗೆದುಕೊಂಡಿದೆ ಎಂಬ ಮಾಹಿತಿಯಿದೆ. ಐತಿಹಾಸಿಕ ಹೆಜ್ಜೆ ಗುರುತನ್ನು ದಾಸಪುರಂದರ ಕ್ರಿಯೇಟ್ ಮಾಡಿದ್ದಂತೂ ಸತ್ಯ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post