ಲಾಹೋರ್: ಪಾಕಿಸ್ತಾನದ ಜನರಿಗೆ ಪ್ರತಿ ದಿನ ಹೊಟ್ಟೆ, ಬಟ್ಟೆಗೂ ಪರದಾಡೋ ಪರಿಸ್ಥಿತಿ ಇದೆ. ದೇಶದ ಆರ್ಥಿಕತೆಯಂತೂ ಪಾತಾಳಕ್ಕೆ ಬಿದ್ದಿದೆ. ಶತಮಾನದ ಸಂಕಷ್ಟ, ತೀವ್ರ ಬಿಕ್ಕಟ್ಟಿನ ಸಮಯದಲ್ಲೂ ಈ ದೇಶದಲ್ಲಿ ರಾಜಕೀಯದ ಕೆಸರೆರಚಾಟ ನಿಂತಿಲ್ಲ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕಾಗಿ ಪಾಕಿಸ್ತಾನದ ಹಲವೆಡೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭಾರೀ ಹೈಡ್ರಾಮಾಗಳು ನಡೆದಿದೆ.
ತೋಷಖಾನ ಹಗರಣ, ಮಹಿಳಾ ನ್ಯಾಯಮೂರ್ತಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಹೀಗಾಗಿ ಇಸ್ಲಾಮಾಬಾದ್ ಪೊಲೀಸರು ಲಾಹೋರ್‌ನಲ್ಲಿರುವ ಇಮ್ರಾನ್ ಖಾನ್ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಇಮ್ರಾನ್ ಖಾನ್ ಬೆಂಬಲಿಗರು ಪೊಲೀಸರ ನಡುವೆ ಬೀದಿ ಕಾಳಗವೇ ನಡೆದಿದೆ.
ಇಮ್ರಾನ್ ಖಾನ್ ಬಂಧನಕ್ಕೆ ಅಡ್ಡಿಯಾಗಿರೋ ನೂರಾರು ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಜಲಫಿರಂಗಿ, ಟಿಯರ್ ಗ್ಯಾಸ್ ಬಳಸಿ ಬೆಂಬಲಿಗರನ್ನು ಚದುರಿಸೋ ಪ್ರಯತ್ನ ನಡೆಸಿದ್ರು. ಲಾಠಿ ಚಾರ್ಜ್ ಕೂಡ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಮ್ರಾನ್ ಖಾನ್ ಮನೆಯನ್ನು ಸುತ್ತುವರಿದಿರುವ ನೂರಾರು ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯ ಹೊರಗೆ ಬೆಂಬಲಿಗರು ಹೋರಾಟ ನಡೆಸುತ್ತಿದ್ರೆ ಇಮ್ರಾನ್ ಖಾನ್ ಮನೆ ಒಳಗಿಂದಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ಪೊಲೀಸರು ನನ್ನನ್ನು ಬಂಧಿಸಲು ಮನೆ ಬಾಗಿಲಿಗೆ ಬಂದಿದ್ದಾರೆ. ಈ ಮೂಲಕ ನಿಮ್ಮನ್ನು ನಿಯಂತ್ರಣದಲ್ಲಿಡುವ ಹುನ್ನಾರ ನಡೆದಿದೆ. ನೀವು ಸುಮ್ಮನಾಗಬೇಡಿ, ಬೀದಿಗೆ ಇಳಿದು ಹೋರಾಡಿ. ನನ್ನನ್ನು ಸಾಯಿಸಿದರು ಹೋರಾಟ ಕೈ ಬಿಡುವುದಿಲ್ಲ ಎಂದು ಕರೆ ನೀಡಿದ್ದಾರೆ.
My message to the nation to stand resolute and fight for Haqeeqi Azadi & rule of law. pic.twitter.com/bgVuOjsmHG
— Imran Khan (@ImranKhanPTI) March 14, 2023
ಇಮ್ರಾನ್ ಖಾನ್ ಬಂಧಿಸುವ ಈ ಕಾರ್ಯಾಚರಣೆಗೆ ಪಾಕಿಸ್ತಾನದ ಮಿಲಿಟರಿ ಕೂಡ ಸಾಥ್ ನೀಡಿದೆ. ಒಂದು ವೇಳೆ ಇಮ್ರಾನ್ ಖಾನ್ ಬಂಧನ ಆಗದಿದ್ರೆ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಪಾಕಿಸ್ತಾನದ ಸೇನೆಯು ಕಾರ್ಯಾಚರಣೆಗಿಳಿದು ಮತ್ತಷ್ಟು ಹೈಡ್ರಾಮಾಗಳು ನಡೆಯುವ ಸಾಧ್ಯತೆಯಿದೆ.
Our people are our strength & people have come out once again to show they stand with our struggle for Haqeeqi Azadi & rule of law. We strongly condemn the raid on Bol TV which again shows the growing fascism in Pak. pic.twitter.com/2xGP95i6iv
— Imran Khan (@ImranKhanPTI) March 13, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post