ನೀರು ಕುಡಿಯೋದಕ್ಕೆ ಬಳಸೋ ವಾಟರ್ ಬಾಟಲ್ಸ್ ಎಷ್ಟು ಡೇಂಜರ್ ಗೊತ್ತಾ. ಟಾಯ್ಲೆಟ್ ಸೀಟ್‌ನಲ್ಲಿರುವ ಬ್ಯಾಕ್ಟೀರಿಯಾಗಿಂತ 40 ಸಾವಿರದಷ್ಟು ಅಧಿಕ ಬ್ಯಾಕ್ಟೀರಿಯಾಗಳು ವಾಟರ್ ಬಾಟಲ್‌ಗಳಲ್ಲಿ ಇರುತ್ತವಂತೆ. ಅಬ್ಬಾ.. ಇದು ನಿಜಕ್ಕೂ ಎಲ್ಲರಿಗೂ ಶಾಕಿಂಗ್ ನ್ಯೂಸ್ ಆದ್ರೂ ಸಂಶೋಧನೆಯಿಂದ ಬಯಲಾಗಿರೋ ಕಟು ಸತ್ಯ.
ಅಮೆರಿಕಾ ಮೂಲದ ವಾಟರ್ ಫಿಲ್ಟರ್‌ಗುರು.ಕಾಮ್ ತಂಡದ ಸದಸ್ಯರು ಇಂತಹದೊಂದು ಸಂಶೋಧನೆ ನಡೆಸಿದ್ದಾರೆ. ಸಂಶೋಧನೆಯಲ್ಲಿ ಹಲವು ಮಾದರಿಯ ವಾಟರ್ ಬಾಟಲ್‌ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ನಿರಂತರ ಅಧ್ಯಯನದ ಬಳಿಕ ಗೊತ್ತಾದ ಅಂಶ ಏನಂದ್ರೆ, ರೀ ಯೂಸ್ ಮಾಡುವ ವಾಟರ್ ಬಾಟಲ್ ಡೇಂಜರ್.. ಡೇಂಜರ್.. ಡೇಂಜರ್ ಎನ್ನಲಾಗಿದೆ.
ರೀ ಯೂಸ್ ಅಂದ್ರೆ ಬಳಸಿದ ವಾಟರ್ ಬಾಟಲ್ ಅನ್ನೇ ಮತ್ತೆ, ಮತ್ತೆ ಬಳಸುವುದು ಅಪಾಯಕಾರಿಯಾದದ್ದು. ಸಾಮಾನ್ಯವಾಗಿ ಟಾಯ್ಲೆಟ್ ಸೀಟ್‌ನಲ್ಲಿರುವ ಬ್ಯಾಕ್ಟೀರಿಯಾಗಿಂತ 40 ಸಾವಿರಕ್ಕೂ ಅಧಿಕ ಬ್ಯಾಕ್ಟೀರಿಯಾಗಳು ವಾಟರ್ ಬಾಟಲ್‌ನಲ್ಲಿ ಇರುತ್ತವೆ ಎನ್ನಲಾಗಿದೆ.
ವಾಟರ್ ಬಾಟಲ್‌ಗಳು ಅತಿ ಹೆಚ್ಚು ಬ್ಯಾಕ್ಟೀರಿಯಾಗಳನ್ನ ಉತ್ಪಾದಿಸುತ್ತವೆ ಅನ್ನೋದು ಬಹಳಷ್ಟು ಚರ್ಚೆಗೀಡಾಗಿದೆ. ಕೆಲವರು ವಾಟರ್ ಬಾಟಲ್‌ಗಳು ಡೇಂಜರ್ ಅಲ್ಲ. ಬರೀ ವಾಟರ್ ಬಾಟಲ್ ಒಂದರಿಂದಲೇ ಅನಾರೋಗ್ಯಕ್ಕೆ ಯಾರು ತುತ್ತಾಗಿಲ್ಲ ಎಂದು ವಾದಿಸಿದ್ದರು. ಆದರೆ ಸದ್ಯ ನಡೆದಿರುವ ಹೊಸ ಸಂಶೋಧನೆಯಲ್ಲಿ ತೊಳೆಯದೆ ಬಳಸುವ ರೀ ಯೂಸ್ ವಾಟರ್ ಬಾಟಲ್ ಡೇಂಜರ್ ಅನ್ನೋದು ಸಾಬೀತಾಗಿದೆ. ವಾಟರ್ ಬಾಟಲ್‌ಗಳನ್ನ ಎರಡು ಬಾರಿ ಬಳಸಿದ್ರೆ ಓಕೆ. ಮೂರನೇ ಬಾರಿ ಬಳಸುವಾಗ ಬ್ಯಾಕ್ಟೀರಿಯಾಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಕಂಪ್ಯೂಟರ್ ಮೌಸ್‌ನಲ್ಲಿರುವ ಬ್ಯಾಕ್ಟೀರಿಯಾಗಳು ನಾಯಿ, ಬೆಕ್ಕಿನ ಊಟಕ್ಕೆ ಬಳಸುವ ಬೌಲ್‌ಗಿಂದ 14 ಪಟ್ಟು ಹೆಚ್ಚು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Watch: ಇವ್ರು ಅಂತಿಂಥ ಫೀಲ್ಡರ್ ಅಲ್ಲವೇ ಅಲ್ಲ, ಈ ವರ್ಷದ ಬೆಸ್ಟ್ ಫೀಲ್ಡರ್ ಅವಾರ್ಡ್ ಇವ್ರಿಗೇ..!
ವಾಟರ್ ಬಾಟಲ್ ಬಗ್ಗೆ ಈ ಸಂಶೋಧನೆ ನಡೆಸಿರೋ ತಂಡದ ಸದಸ್ಯರು 2 ಪ್ರಮುಖ ಸಲಹೆಗಳನ್ನು ನೀಡಿದೆ. ಮರು ಬಳಕೆ ಮಾಡುವ ವಾಟರ್ ಬಾಟಲ್‌ಗಳನ್ನು ದಿನಕ್ಕೆ ಒಂದು ಬಾರಿ ಸೋಪು ಹಾಗೂ ಬಿಸಿ ನೀರಿನಲ್ಲಿ ತೊಳೆಯಬೇಕು. ವಾರಕ್ಕೆ ಒಮ್ಮೆ ಸ್ಯಾನಿಟೈಸ್ ಮಾಡಬೇಕು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post