ಮೂರು ಕಾಲಿನ ‘ವುಟೊಮಿ’ ಎಂಬ ಆನೆಯೊಂದು ಕಳೆದ ಮೂರ್ನಾಲ್ಕು ದಿನಗಳಿಂದ ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಒಂದು ಕಾಲನ್ನು ಕಳೆದುಕೊಂಡರೂ ಸ್ಫೂರ್ತಿಯಾಗಿ ಬದುಕುತ್ತಿರುವ ಆನೆಯ ಈ ಕಥೆಗೆ ಎಲ್ಲರೂ ಫಿದಾ ಆಗಿದ್ದಾರೆ. ಮಾತ್ರವಲ್ಲ ಕಂಟೆಂಟ್ ಕ್ರಿಯೇಟರ್ ಡ್ಯಾಲನ್ ಪೊನ್ಸ್ ಅವರಿಗೆ ನೆಟ್ಟಿಗರು ಧನ್ಯವಾದ ತಿಳಿಸುತ್ತಿದ್ದಾರೆ.
ಸೌಥ್ ಆಫ್ರಿಕಾದ ಸತರಾದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಆನೆ ಕಣ್ಣಿಗೆ ಬಿದ್ದ ಪ್ರಸಂಗವನ್ನು ಡ್ಯಾಲನ್ ನೆನಪಿಸಿಕೊಂಡಿದ್ದಾರೆ. ನ್ಸೇಮಿನಿ ಡ್ಯಾಂಗೆ ಭೇಟಿ ನೀಡಿದಾಗ ಆನೆಯು ನಮ್ಮ ಕಣ್ಣಿಗೆ ಬಿತ್ತು. ಆನೆ ಮರಿಗೆ ಒಂದು ಕಾಲು ಇರಲಿಲ್ಲ. ಆದರೆ ಅದು ತನ್ನ ಹಿಂಡಿನೊಂದಿಗೆ ಎಲ್ಲರಂತೆ ಹೆಜ್ಜೆಯನ್ನು ಹಾಕುತ್ತಿತ್ತು.
ಸ್ಫೂರ್ತಿಯ ಆನೆ ಈ ವುಟೊಮಿ
ಆಕೆ ನೀರಿನಲ್ಲಿ ಆಟವಾಡುವುದನ್ನೂ ನೋಡಿದೆ. ಆಕೆಯು ಒಂದು ಕಾಲನ್ನು ಹೇಗೆ ಕಳೆದುಕೊಂಡಿದ್ದಾಳೆ ಎಂದು ನನಗೆ ಗೊತ್ತಿಲ್ಲ. ಕಾಲಿಲ್ಲದಿದ್ದರೂ ಇತರೆ ಆನೆಗಳೊಂದಿಗೆ ಆಕೆ ತುಂಬಾ ಜಾಲಿ ಮೂಡ್ನಲ್ಲಿ ಇದ್ದಳು. ಮಾತ್ರವಲ್ಲ, ಇತರೆ ಆನೆಗಳು ಕೂಡ ಆಕೆಯನ್ನು ಹುರಿದುಂಬಿಸುತ್ತಿದ್ದವು ಅಂತಾ ಅವರು ತಿಳಿಸಿದ್ದಾರೆ.
ಸಣ್ಣ ಪೊದೆಯೊಳಗೆ ಆಕೆ ಹೋಗುವ ಮೂಲಕ ಆಕೆ ನಮ್ಮ ಜರ್ನಿಯಲ್ಲಿ ಕಣ್ಮರೆಯಾದಳು ಎಂದು 31 ವರ್ಷದ ಈ ಕಂಟೆಂಟ್ ರೈಟರ್ ತಿಳಿಸಿದ್ದಾರೆ. ಅದೆಷ್ಟೋ ಪ್ರಾಣಿಗಳು ಊಹಿಸಲಾಗ ಗಾಯಗಳಿಂದ ಬದುಕುಳಿಯುತ್ತವೆ. ಇಂತಹ ಪ್ರಾಣಿಗಳು ಕೂಡ ನಮಗೆ ಸ್ಫೂರ್ತಿಯಾಗಬಲ್ಲದು. ಪ್ರಾಣಿಗಳು ಓಡಾಡು ಜಾಗದಲ್ಲಿ ರಸ್ತೆಗಳ ನಿರ್ಮಾಣದಿಂದ ದುರ್ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತವೆ. ಹೀಗಾಗಿ ರಸ್ತೆಗಳನ್ನು ನಿರ್ಮಾಣ ಮಾಡುವಾಗ ಅವುಗಳಿಗಾಗಿಯೇ ಜಾಗ ಇಟ್ಟಿರಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post