ದಶಪಥ. 2 ದಿನಗಳ ಹಿಂದಷ್ಟೇ ಇಡೀ ಇಂಡಿಯಾ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದ ಹೆದ್ದಾರಿ. ಆದ್ರೀಗ ಅದೇ ಹೆದ್ದಾರಿಯಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು. ಆಕ್ರೋಶದ ಕೂಗು ಆರ್ಭಟಿಸಿತ್ತು. ನಿನ್ನೆ ಬೆಳ್ಳಂ ಬೆಳ್ಳಗ್ಗೆಯೇ ಹೈವೇ ಹೈಡ್ರಾಮಾಗೆ ಸಾಕ್ಷಿಯಾಗಿದೆ.
ಕಾಮಗಾರಿ ಪೂರ್ಣಮಾಡದೇ ಟೋಲ್ ವಸೂಲಿಗೆ ಆಕ್ರೋಶ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದಶಪಥ ಹೆದ್ದಾರಿಗೆ ಚಾಲನೆ ಸಿಗ್ತಿದ್ದಂತೆ ರಸ್ತೆಯಲ್ಲಿ ವಾಹನಗಳ ಸಂಚಾರ ಮುಕ್ತವಾಗಿತ್ತು. ಈ ಮಧ್ಯೆ ಸರ್ವೀಸ್ ರೋಡ್ ಆಗದೆಯೇ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತವಾಗಿತ್ತು.. ಆದ್ರೂ ನಿನ್ನೆ ಬೆಳಗ್ಗೆಯಿಂದ ಸಿಬ್ಬಂದಿ ಟೋಲ್ ವಸೂಲಿಗಿಳಿದಿದ್ರು. ಟೋಲ್ ಸಂಗ್ರಹ ಖಂಡಿಸಿ ಕನ್ನಡ ಪರ ಹೋರಾಟಗಾರರು, ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದರು.
ಪ್ರಯಾಣಿಕರ ಹೆಗಲಿಗೆ ಶುಲ್ಕದ ಹೊರೆ ಹೊರಿಸಿದ ಕೆಎಸ್ಆರ್ಟಿಸಿ
ಸದ್ಯ ಬೆಂಗಳೂರು-ಮೈಸೂರು ನಡುವೆ ಕರ್ನಾಟಕ ಸಾರಿಗೆಯ 20, ರಾಜಹಂಸ 17, ವೋಲ್ವೋ 15, ಆ್ಯಕ್ಸೆಲ್ ವೋಲ್ವೋ 55 ಬಸ್ಗಳು ನಿತ್ಯ ಸಂಚರಿಸ್ತಿವೆ.. ಈ ಮಧ್ಯೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಭಾರವನ್ನ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಮೂಲಕ ಪ್ರಯಾಣಿಕರಿಗೆ ವರ್ಗಾಯಿಸಲು ನಿರ್ಧರಿಸಿದೆ.
ಬಸ್ ಪ್ರಯಾಣ ದರ ಎಷ್ಟು ಹೆಚ್ಚಳ?
- ಸಾಮಾನ್ಯ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರಿಗೆ ₹15
- ರಾಜಹಂಸ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ₹18
- ಹೈಟೆಕ್ ಮಲ್ಟಿ ಆ್ಯಕ್ಸೆಲ್ ಬಸ್ಗಳ ಪ್ರಯಾಣಿಕರಿಗೂ ₹20
- ದಶಪಥ ಹೆದ್ದಾರಿಯಲ್ಲಿ ಸಂಚರಿಸೋ ಬಸ್ಗೆ ಮಾತ್ರ ಅನ್ವಯ
ಇದನ್ನು ಓದಿ: ಕಬ್ಜ ಚಿತ್ರತಂಡಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಸಾಥ್; ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು
ಈ ಮೊದಲು ಸಾಮಾನ್ಯ ಬಸ್ನ ದರ 150 ರೂಪಾಯಿ ಇತ್ತು. 15 ರೂಪಾಯಿ ಹೆಚ್ಚಳದಿಂದ 165 ರೂಪಾಯಿ ದರ ತೆರಬೇಕಿದೆ. ರಾಜಹಂಸದಲ್ಲಿ ಈ ಮೊದಲು 180 ಇತ್ತು. ಈಗ 18 ರೂಪಾಯಿ ಹೆಚ್ಚಳದಿಂದ 198 ರೂಪಾಯಿ ನೀಡಬೇಕಿದೆ. ಇನ್ನು, ಮಲ್ಟಿ ಆ್ಯಕ್ಸೆಲ್ನ ದರ 330 ರೂಪಾಯಿ ಇದ್ದು, 20 ರೂಪಾಯಿ ಏರಿಕೆ ಆಗಿದೆ. ಹೀಗಾಗಿ 340 ರೂಪಾಯಿ ಟಿಕೆಟ್ ನಿಗದಿ ಆಗಿದೆ.
ಇಂಟ್ರಸ್ಟಿಂಗ್ ವಿಚಾರ ಏನಂದ್ರೆ, ಒಬ್ಬ ವ್ಯಕ್ತಿ ಮೇಲೆ ಬೀಳುವ ಟೋಲ್ ಹೊರೆಯ ದುಪ್ಪಟ್ಟು ದರವನ್ನ ಪ್ರಯಾಣಿಕರ ಮೇಲೆ ಹೇರಲಾಗ್ತಿದೆ. 800ಕ್ಕೂ ಅಧಿಕ ಹಣ ಪ್ರಯಾಣಿಕರಿಂದ ಸಂಗ್ರಹವಾಗಲಿದ್ದು, ಅರ್ಧ ಟೋಲ್ ಕಟ್ಟಿ ಉಳಿದ ಹಣ KSRTC ತನ್ನ ಜೇಬಿಗೆ ಇಳಿಸಿಕೊಳ್ತಿದೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಆರಂಭ ಆದಾಗಿನಿಂದಲು ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗ್ತಿದೆ. ಇದ್ರ ನಡುವೆ ಬೆಂಗಳೂರು ಮೈಸೂರು ದಶಪಥದಲ್ಲಿ ಸಂಚರಿಸುವ ಬಸ್ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಿರುವುದು ಬೆಂಕಿಗೆ ತುಪ್ಪ ಸವರಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post