‘ಕಲರ್ಸ್ ಕನ್ನಡ’ದಲ್ಲಿ ಸೂಪರ್ ಹಿಟ್ ಕಂಡ ‘ಕನ್ನಡತಿ’ ಧಾರಾವಾಹಿ ಜನಮಾನಸದಲ್ಲಿ ಅಚ್ಚಳಿಯಾಗಿಯೇ ಉಳಿದಿದೆ. ಭುವಿ, ಹರ್ಷ, ಅಮ್ಮಮ್ಮನ ಜೊತೆಗೆ ನೆನಪಿನಲ್ಲಿಯೇ ಉಳಿಯುವ ಇನ್ನೊಂದು ಪಾತ್ರ ಅಂದ್ರೆ ಅದು ಸಾನ್ಯ. ಭಯಂಕರ ಕೋಪಿಷ್ಠ ವಿಲನ್ ಆಗಿ ಕಾಣಿಸಿಕೊಂಡಿದ್ದ ಸಾನ್ಯ ಪಾತ್ರಕ್ಕೆ ಜೀವ ತುಂಬಿದವರಲ್ಲಿ ಆರೋಹಿ ನೈನಾ ಕೂಡ ಒಬ್ಬರು.
ಆರೋಹಿ ಅಪರೂಪಕ್ಕೆ ನ್ಯೂಸ್ಫಸ್ಟ್ಗೆ ಸಿಕ್ಕಾಗ ಅವರ ಬಳಿ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ಆ ಪ್ರಶ್ನೆಗಳಿಗೆ ಸಾನ್ಯ ಖಡಕ್ ಆಗಿ ಉತ್ತರಿಸಿದರು. ನಾನು ಮೊದಲು ಬಳಸಿದ ಫೋನ್ ಸ್ಯಾಮ್ಸಂಗ್. ಅದು ನನ್ನದಲ್ಲ, ಅಕ್ಕ ಕೊಟ್ಟಿದ್ದರು, ಆ ಫೋನ್ ನನ್ನ ಬಳಿ ಈಗಲೂ ಇದೆ.
ನಾನಿನ್ನೂ ಯಾವುದೇ ವಾಹನವನ್ನು ಖರೀದಿ ಮಾಡಿಲ್ಲ. ಆ ನಿರೀಕ್ಷೆಯಲ್ಲಿದ್ದೇನೆ. ಯಾವ ವಾಹನ ಖರೀದಿ ಮಾಡುತ್ತೇನೆ ಎಂದು ಗೊತ್ತಿಲ್ಲ. ನಾನು ತುಂಬಾ ಲಾಂಗ್ ಡ್ರೈ ಅಂತಾ ಎಲ್ಲಿಗೂ ಹೋಗಿಲ್ಲ. ಫ್ರೆಂಡ್ ಜೊತೆ ಒಮ್ಮೆ ಕುಣಿಗಲ್ನ ಎಂಪಾಯರ್ ರೆಸ್ಟೋರೆಂಟ್ಗೆ ಹೋಗಿದ್ದೆ ಅಷ್ಟೇ.
ಇದೇ ವೇಳೆ ಭಾಯ್ಫ್ರೆಂಡ್ ಬಗ್ಗೆ ಪ್ರತಿಕ್ರಿಯಿಸಿ, ಫಸ್ಟ್ ಬಾಯ್ ಫ್ರೆಂಡ್ ಅಂತಾ ನನಗೆ ಯಾರೂ ಇಲ್ಲ. ನಾನು ಕನಸು ಕಂಡಿದ್ದ ಬೆಸ್ಟ್ ಫ್ರೆಂಡ್ ನನಗೆ ಸಿಕ್ಕಿದ್ದಾನೆ. ಡೇಟಿಂಗ್ ಇನ್ನೂ ಹೋಗಿಲ್ಲ. ಅದಕ್ಕಾಗಿ ಎಕ್ಸೈಟ್ ಆಗಿದ್ದೇನೆ ಅಂತಾ ನಕ್ಕರು. ಆಗ ನಿಮ್ಮ ಕ್ರಶ್ ಬಗ್ಗೆ ಹೇಳಿ ಅಂದಾಗ ಮತ್ತೆ ನಕ್ಕು ಮಾತನಾಡಲು ಶುರುಮಾಡಿದ ಅವರು, ಹೌದು ನನಗೆ ಕ್ರಶ್ ಆಗಿತ್ತು. ಅದು ಕಾಲೇಜಿಗೆ ಹೋಗುವಾಗ. ಬಸ್ಸಿನಲ್ಲಿ ಒಬ್ಬ ಹುಡುಗನನ್ನು ನೋಡುತ್ತಿದ್ದೆ. ಅವನೇ ನನ್ನ ಫಸ್ಟ್ ಕ್ರಶ್. ಅವನ ಬಗ್ಗೆ ಎಷ್ಟು ಬಿಲ್ಡಪ್ ಕೊಟ್ಟಿದ್ದೆ ಅಂದರೆ ಹೀರೋ ಲೇವೆಲ್ಗೆ ಬಿಲ್ಡಪ್ ಕೊಟ್ಟಿದ್ದೆ ಅಂತಾ ಹೇಳಿದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post