‘ಮನೆಯಲಿ ಇದ್ದರೆ ಚಿನ್ನ ಚಿಂತೆಯೂ ಏತಕೆ ಇನ್ನಾ‘.. ಎಂಬ ಜಾಹೀರಾತು ನೊಡಿರಬಹುದು. ಚಿನ್ನ ಆಪತ್ಕಾಲದಲ್ಲಿ ಕೈಹಿಡಿಯುವ ವಸ್ತುವಾಗಿದೆ. ಹಾಗಾಗಿ ಪ್ರತಿಯೊಬ್ಬರು ಚಿನ್ನ ಖರೀದಿಸಲು ಮುಗಿಬೀಳುತ್ತಾರೆ. ಅದರಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡರಂತೂ ನೇರವಾಗಿ ಮಳಿಗೆಯತ್ತ ಮುಖಮಾಡಿ ಚಿನ್ನ ಖರೀದಿಸುತ್ತಾರೆ. ಅದರಂತೆಯೇ ಇಂದಿನ ಚಿನ್ನದ ಬೆಲೆ ಹೇಗಿದೆ? ಎಂದು ತಿಳಿಯೋಣ.
ಮುಂದಿನ ತಿಂಗಳು ಅಕ್ಷಯ ತೃತೀಯ ಚಿನ್ನ ಖರೀದಿಸುವವರಿಗೆ ಶುಭದಿನ. ಆದರೆ ಇಂದು ಕೂಡ ಚಿನ್ನದ ಖರೀದಿಸುವವರಿಗೆ ತೊಂದರೆ ಏನಿಲ್ಲ. ಏಕೆಂದರೆ ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ..
- ಬೆಂಗೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ 53,100 ರೂಪಾಯಿ.
- ಮುಂಬೈ ಮತ್ತು ಕೋಲ್ಕತ್ತಾ ನಗರದಲ್ಲಿ 22 ಕ್ಯಾರಟ್ ಬೆಲೆ 53,800 ರೂ ಮತ್ತು 53,050 ರೂಪಾಯಿ.
- ದೆಹಲಿಯಲ್ಲಿ ಚಿನ್ನದ ಬೆಲೆ 53,200 ರೂಪಾಯಿ.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಗಮನಿಸುವುದಾದರೆ ಒಂದು ಗ್ರಾಂ22 ಕ್ಯಾರಟ್ ಚಿನ್ನದ ಬೆಲೆ -5305, 24 ಕ್ಯಾರಟ್ ಬೆಲೆ 5,787. ಅಂತೆಯೇ 8 ಗ್ರಾಂ 22 ಕ್ಯಾರಟ್ ಬೆಲೆ 42,440 ಆಗಿದೆ.
ಇನ್ನು ಬೆಂಗಳೂರು ನಗರದಲ್ಲಿ ಬೆಳ್ಳಿಯ ಬೆಲೆ ಗಮನಿಸುವುದಾದರೆ 10 ಗ್ರಾಂ ಬೆಲೆ 725 ರೂ, 100 ಗ್ರಾಂ ಬೆಲೆ 7,250 ರೂ ಮತ್ತು 1000 ಕೆಜಿ ಬೆಲೆ 72,500 ರೂಪಾಯಿ ಆಗಿದೆ.
ವಿ.ಸೂ: ಇಲ್ಲಿ ಕೊಡಲಾದ ಚಿನ್ನ ಮತ್ತು ಬೆಳ್ಳಿಯ ದರವು ಮಾರುಕಟ್ಟೆಯ ಬೆಲೆಯನ್ನು ಪ್ರತಿನಿಧಿಸುತ್ತದೆ. ಹೆಚ್ಚಿನ ಮತ್ತು ನಿಖರ ಬೆಲೆಗಾಗಿ ಹತ್ತಿರದ ಚಿನ್ನದ ಮಳಿಗೆಗೆ ಸಂಪರ್ಕಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post