ಮದುವೆಯಾದ ಮಹಿಳೆಯರಿಗೆ ತಾಯಿಯಾಗೋದು ಅಂದ್ರೆ ಸಂತಸದ ಕ್ಷಣ. ಹಾಗಾಗಿ ಕೆಲವು ದಂಪತಿಗಳು ಒಂದು ಅಥವಾ ಎರಡು ಮಕ್ಕಳನ್ನು ಮಾಡಿ ಕುಟುಂಬ ನಿರ್ವಹಣೆಯತ್ತ ಮುಖ ಮಾಡುತ್ತಾರೆ. ಆದರೆ ಇನ್ನು ಕೆಲವರು ಮಕ್ಕಳಿರಲವ್ವಾ ಮನೆ ತುಂಬಾ ಎಂದು ಮಕ್ಕಳು ಮಾಡುತ್ತಾ ಕೂರುತ್ತಾರೆ. ಅಂತಹದೇ ಸುದ್ದಿಯೊಂದು ಇಲ್ಲಿದೆ. ಅಂದಹಾಗೆಯೇ ಈ ಮಹಿಳೆ 12 ವರ್ಷ ನಿರಂತರ ತಾಯ್ತನ ಪಡೆಯುತ್ತಲೇ ಬಂದಿದ್ದಾಳೆ. ಆದರೀಗ ಈ ದಂಪತಿಗೆ ಮಕ್ಕಳೆಷ್ಟು ಗೊತ್ತಾ? ಈ ಸ್ಟೋರಿ ಓದಿ.
ಈಕೆಯ ಹೆಸರು ಡೂಕ್. ಲಾಸ್ ವೇಗಸ್ ಮೂಲದ ಈಕೆಗೆ 39 ವರ್ಷ. ಡೂಕ್ 17 ವರ್ಷದವಳಾಗಿದ್ದಾಗ ಮೊದಲ ಬಾರಿಗೆ ತಾಯಿಯಾಗಿದ್ದಳು. 2001ರಿಂದ ಪ್ರಾರಂಭಿಸಿ 2012ರವರೆಗೆ ನಿರಂತರವಾಗಿ ಗರ್ಭವತಿಯಾಗುವ ಮೂಲಕ ಡೂಕ್ ಮಕ್ಕಳನ್ನು ಪಡೆಯುತ್ತಾ ಬಂದಿದ್ದಾಳೆ. ಸದ್ಯ ಡೂಕ್ 23 ವರ್ಷದಿಂದ ತನ್ನ ಮಕ್ಕಳು ಮತ್ತು ಗಂಡನೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾಳೆ.
View this post on Instagram
ಡೂಕ್ ಈ ವಿಚಾರವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದು, 9 ಮಕ್ಕಳನ್ನು ಹೊಂದಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಅಂದಹಾಗೆಯೇ ಡೂಕ್ಗೆ 10 ವರ್ಷದ ಮಗುವಿನಂದ ಹಿಡಿದು 21 ವರ್ಷ ದವರೆಗಿನ ಮಕ್ಕಳನ್ನು ಹೊಂದಿದ್ದಾಳೆ.
View this post on Instagram
ಆದರೆ ಸದ್ಯ ಡೂಕ್ 8 ಮಕ್ಕಳನ್ನು ಹೊಂದಿದ್ದು, ಅದರಲ್ಲಿ 3ನೇ ಮಗು ಯುಮ ಹುಟ್ಟಿದ 7 ದಿನಕ್ಕೆ ಕಾಯಿಲೆಯೊಂದಕ್ಕೆ ತುತ್ತಾಗಿ ಸಾವನ್ನಪ್ಪಿದಳು. ಹಾಗಾಗಿ ಉಳಿದ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ಡೂಕ್. ಇನ್ಸ್ಟಾಗ್ರಾಂನಲ್ಲೂ ಡೂಕ್ ಈ ವಿಚಾರವನ್ನು ಹಂಚಿಕೊಳ್ಳುವ ಮೂಲಕ ತನ್ನ ಪತಿ ಮತ್ತು ಮಕ್ಕಳೊಂದಿಗೆ ಫೋಟೋ ಹಂಚಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post