ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆ ಮುಕ್ತಾಯಗೊಂಡಿದೆ. ಸಭೆ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಯಾರ ಜತೆಯು ಮೈತ್ರಿ ಮಾಡಿಕೊಳ್ಳಲ್ಲ. ಒಂಟಿಯಾಗೆ ಎಲೆಕ್ಷನ್ ಎದುರಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
ಸಭೆಗೂ ಮೊದಲು ಮಾತನಾಡಿದ್ದ ಡಿ.ಕೆ ಶಿವಕುಮಾರ್, ನನಗೇನು ಒತ್ತಡವಿಲ್ಲ. 3 ವರ್ಷದಿಂದ ಪಾರ್ಟಿ ಕಟ್ಟಿದ್ದೀವಿ. ಯಾಱರು ಕೆಲಸ ಮಾಡಿದ್ದಾರೆಂದು ಗೊತ್ತಿದೆ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆಂದು 1,250 ಅರ್ಜಿಗಳನ್ನ ಹಾಕಿದ್ದಾರೆ ಎಂದು ಹೇಳಿದರು. ಎಲ್ಲರಿಗೂ ಎಂಎಲ್ಎ ಆಗಬೇಕೆಂಬ ಆಸೆ ಇರುತ್ತದೆ. ಇದರಿಂದ ನನಗೇನು ಯಾವುದೇ ಒತ್ತಡ ಇಲ್ಲ. ಕೌನ್ಸಿಲ್ನಲ್ಲಿ ಕೆಲವೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದಕ್ಕೆ ಆಗಲಿಲ್ಲ ಎಂದರೆ, ಅಂತವರಿಗೆ ಬೇರೆ ವ್ಯವಸ್ಥೆ ಮಾಡುತ್ತೀವಿ. ನಮ್ಮದೇ ಸರ್ಕಾರ ಮುಂದೆ ಬರೋದು. ಟಿಕೆಟ್ ಸಿಗದಿದ್ದವರಿಗೆ ಬೇರೆ ಸ್ಥಾನಮಾನ ನೀಡುತ್ತೇವೆ. ಟಿಕೆಟ್ ನೀಡಿಲ್ಲವೆಂದು ಅಂತವರನ್ನ ಕೈಬಿಡೋ ಪ್ರಶ್ನೆನೇ ಇಲ್ಲ. ಬೇರೆ ಅವಕಾಶಗಳು ಇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ನಿಂದ 8 ರಿಂದ 10 ಸರ್ವೇ ಮಾಡಿಸಲಾಗಿದೆ
ಈಗಾಗಲೇ ಟಿಕೆಟ್ ನೀಡುವ ಬಗ್ಗೆ 5-6 ಸಭೆ ಮಾಡಲಾಗಿದೆ. 8 ರಿಂದ 10 ಸರ್ವೇ ಮಾಡಲಾಗಿದೆ. ಕೆಪಿಸಿಸಿಯಿಂದ 4 ಸರ್ವೇ ಮಾಡಿಸಿದ್ದೀನಿ. AICC, ಮಾಧ್ಯಮದವರ ಸರ್ವೇ ಕೂಡ ನೋಡಿದ್ದೇವೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದರು.
AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಮ್ಮ ಕರ್ನಾಟಕದವರು. ಅವರಿಗೆ ಎಲ್ಲ ಗೊತ್ತಿದೆ. ಹೊಸದಾಗಿ ಏನು ಹೇಳುವುದು ಬೇಕಾಗಿಲ್ಲ. ಇದರಲ್ಲಿ ನಾನು ಪೂಜಾರಿಯಷ್ಟೇ, ನನ್ನದು ತೀರ್ಮಾನ ಅಲ್ಲ. ಜನರು ಹೇಳಿರುವುದನ್ನ ದೇವರಿಗೆ ತಲುಪಿಸುವುದು ಅಷ್ಟೇ ನನ್ನ ಕೆಲಸ. ಗೆಲುವೇ ನಮ್ಮ ಮಾನದಂಡ. ಎಲ್ಲೆಲ್ಲಿ ಯುವ ಅಭ್ಯರ್ಥಿ ಗೆಲ್ಲುವ ಅವಕಾಶ ಇರುತ್ತೋ ಅಲ್ಲಿ ಟಿಕೆಟ್ ಕೊಡುತ್ತೀವಿ. ಪರಿಷತ್ನ ಸದಸ್ಯರು ಗೆಲ್ಲುತ್ತಾರೆ ಎಂದರೆ ಟಿಕೆಟ್ ಕೊಟ್ಟರೇ ಏನು ತಪ್ಪಿಲ್ಲ. ಎಲ್ಲರಿಗು ಸಮಾಧಾನ ಮಾಡಕ್ಕಾಗಲ್ಲ. ಕಾಂಗ್ರೆಸ್ ಶಾಸಕರು ಚೆನ್ನಾಗಿ ಕೆಲಸ ಮಾಡಿದ್ದರಿಂದ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸುಳಿವನ್ನು ಡಿ.ಕೆ ಶಿವಕುಮಾರ್ ಬಿಟ್ಟುಕೊಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post