ಒಡಿಶಾದಲ್ಲಿ ವಾಹನ ಚಾಲಕರ ಪ್ರತಿಭಟನೆ ಜೋರಾಗಿದೆ. ಹತ್ತಾರು ಬೇಡಿಕೆಗಳೊಂದಿಗೆ ಬೀದಿಗಿಳಿದ ವಾಹನ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರ ಪರಿಣಾಮ ಕಳೆದೊಂದು ವಾರದಿಂದ ಪ್ರಯಾಣಿಕರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಅದರಲ್ಲೂ ರಾಯಗಡ ಎಂಬ ಜಿಲ್ಲೆಯಲ್ಲಿ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಡುವಂತಾಗಿದೆ. ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗಲು ಜನಸಾಮಾನ್ಯರಿಗೆ ಸಂಕಷ್ಟು ಶುರುವಾಗಿದೆ. ಹೀಗಿರುವಾಗಲೇ ಈ ಮುಷ್ಕರ ಮದುವೆಯೊಂದಕ್ಕೆ ಸಂಕಷ್ಟ ತಂದೊಡ್ಡಿದೆ.
ಇದನ್ನು ಓದಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಖ್ಯಾತ ಸೀರಿಯಲ್ ನಟಿ ಕಾರುಣ್ಯ ರಾಮ್!
ಮದುವೆ ಅನ್ನೋದು ಅವಿನಭಾವ ಸಂಬಂಧ. ನೂರು ಸುಳ್ಳು ಹೇಳಿಯಾದ್ರೂ ಮಾಡಲೇಬೇಕು ಎನ್ನುತ್ತಾರೆ ಹಿರಿಯರು. ಸಾಲ ಮಾಡಿ, ಮರ್ಯಾದೆ ಉಳಿಸಿಕೊಳ್ಳಲು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಅದಕ್ಕೆ ದೊಡ್ಡ ಕಲ್ಯಾಣ ಮಂಟಪದಲ್ಲೇ ಮದುವೆ ಆಗಬೇಕು, ಮದುವೆಗೆ ಇಷ್ಟೇ ಜನರನ್ನು ಸೇರಿಸಬೇಕು, ಗಣ್ಯರೇ ಬರಬೇಕು, ಯಾವುದಕ್ಕೂ ಕೊರತೆ ಆಗಬಾರದು ಎಂದು ಮೊದಲೇ ಪ್ಲಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಹೆಣ್ಣಿನ ಮನೆಗೆ ಗಂಡಿನ ಕಡೆಯವರು ಹೋಗುವಾಗ ಕಾರಿಗಳ ದಂಡ ಇರುತ್ತದೆ.
ಹೌದು ಮದುವೆ ಎಂಬುವುದು ಎಲ್ಲರ ಜೀವನದಲ್ಲಿ ಬಹು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದೇ ರೀತಿ ತಾನೂ ಮದುವೆಯಾಗೋ ಹುಡುಗಿಯನ್ನು ತಲುಪಲೆಂದು ಹೊರಟ ಗಂಡಿನ ಕಡೆಯವರು ಇದೀಗ ಸುದ್ದಿಯಾಗಿದ್ದಾರೆ. 22 ವರ್ಷದ ನರೇಶ್ ಪ್ರಾಸ್ಕಾ ಎಂಬ ಯುವಕನಿಗೆ ದಿಬಲಪಾಡು ಗ್ರಾಮದ ಹುಡುಗಿಯೊಬ್ಬಳ ಜೊತೆ ಮದುವೆ ನಿಶ್ಚಯವಾಗಿತ್ತು. ಈ ಮದುವೆಯ ಮೆರವಣಿಗೆಗಾಗಿ ನಾಲ್ಕು ಎಸ್‌ಯುವಿ ಕಾರುಗಳನ್ನು ಬುಕ್ ಸಹ ಮಾಡಿದ್ದರು. ಮದುವೆಯ ನಿಮಿತ್ತ ಹೊಟ್ಟಿದ್ದವರಿಗೆ ವಾಹನ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರದ ಕಾರಣದಿಂದ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಗಂಡಿನ ಕಡೆಯವರು ಎದೆಗುಂದದೆ ಹಾಗೂ ಮದುವೆಯನ್ನು ಮುಂದುಡೂಕೆ ಮಾಡದೇ ಅಚ್ಚರಿಯಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು.
ಮದುವೆಗೆ ಬೇಕಾಗಿದ್ದ ಎಲ್ಲ ಲಗೇಜ್ಗಳನ್ನು, ಮತ್ತಿತ್ಯಾದಿ ವಸ್ತುಗಳನ್ನು ಬೈಕ್ನಲ್ಲಿ ದಿಬಲಪಾಡು ಗ್ರಾಮಕ್ಕೆ ಸಾಗಿಸಿದ್ರು. ಬಳಿಕ ಇಡೀ ಊರಿನ ಜನರೊಂದಿಗೆ ಮದು ಮಗ ಗುರುವಾರ ರಾತ್ರಿ ಕಲ್ಯಾಣಸಿಂಗ್‌ಪುರ ಪಾರ್ತಿಗುಡ ಗ್ರಾಮದಿಂದ ಒಟ್ಟು 30 ಮಂದಿ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿಕೊಂಡು ದಿಬಲಪಾಡು ಗ್ರಾಮಕ್ಕೆ ಸುಮಾರು 28 ಕಿಲೋ ಮೀಟರ್ನಷ್ಟು ಕಾಲ್ನಡಿಗೆಯ ಮೂಲಕ ಮರುದಿನ ಅಂದರೆ ಶುಕ್ರವಾರ ಮುಂಜಾನೆ 3 ಗಂಟೆಗೆ ವಧುವಿನ ಊರಿಗೆ ಬಂದು ತಲುಪಿದ್ದಾರೆ. ಇನ್ನು ವರನನ್ನು ಕಂಡು ವಧುವಿನ ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರ ಮದುವೆಯ ಬಹಳ ವಿಜೃಂಭಣೆಯಿಂದ ನೆರವೇರಿತು. ಒಂದು ಮದುವೆಗೋಸ್ಕರ ಯಾರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಇದೀಗ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post