ಕಿರುತೆರೆಯ ಲೋಕದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಕಾಂಪಿಟೇಶನ್ ನಡೀತಾ ಇದೆ. ಇತ್ತೀಚಿನ ಧಾರಾವಾಹಿಗಳು ಸಿನಿಮಾ ರೇಂಜ್ಗೆ ಹೆಸರು ಮಾಡಿ ಮುನ್ನುಗುತ್ತಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಜನ ಮೆಚ್ಚಿಕೊಂಡು ಬರುತ್ತಿರೋ ಸೀರಿಯಲ್ ಎಂದರೆ ಅದು ಲಕ್ಷಣ. ಇದೀಗ ವಿಕ್ಷಕರ ನೆಚ್ಚಿನ ಸೀರಿಯಲ್ ಆಗಿ ಹೊರಹೊಮ್ಮುತ್ತಿದೆ.
ಇದನ್ನು ಓದಿ: ಸಖತ್ ಕಾಸ್ಟ್ಯುಮ್ನಲ್ಲಿ ಮಿಂಚಿದ ಕನ್ಯಾಕುಮಾರಿ ಧಾರಾವಾಹಿಯ ಮುದ್ದಾದ ಜೋಡಿ..
ಇನ್ನು ಲಕ್ಷಣ ಸೀರಿಯಲ್ನಲ್ಲಿ ದಿನಕೊಂದು ತಿರುವನ್ನು ಪಡೆದುಕೊಂಡು, ವೀಕ್ಷಕದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿಕೊಂಡು ಬರುತ್ತಿದೆ. ಇನ್ನು ಪ್ರತಿ ಸಂಚಿಕೆಯಲ್ಲೂ ರೋಚಕ ಟ್ವಿಸ್ಟ್ ಆ್ಯಂಡ್ ಟರ್ನ್ಗಳೊಂದಿಗೆ ರಂಜಿಸುತ್ತಿರೋ ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಮುಖ್ಯವಾದ ಪಾತ್ರ ಎಂಟ್ರಿಕೊಟ್ಟಿದೆ.
ಅದುವೆ ಕನ್ಯಾಕುಮಾರಿ ಧಾರಾವಾಹಿಯ ಕನ್ನಿಕಾ ಪಾತ್ರದ ಮೂಲಕ ವಿಕ್ಷಕರ ಮನಸನ್ನು ಗೆದ್ದಿದ್ದ ನಟಿ ಆಸಿಯಾ ಫಿರ್ದೋಸ್ ಸರ್ಪ್ರೈಸ್ ರೂಪದಲ್ಲಿ ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ಯಾಕುಮಾರಿ ಸೀರಿಯಲ್ ಮುಗಿದ ಬಳಿಕ ನಟಿ ಆಸಿಯಾ ಫಿರ್ದೋಸ್ ಅವರು ಬಹಳ ದಿನಗಳ ನಂತರ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ.
ಭೂಪತಿಯ ಪ್ರೀತಿಯ ತಮ್ಮ ಮೌರ್ಯನ ಗೆಳತಿಯಾಗಿ ಲಕ್ಷಣ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ನಟಿ ಆಸಿಯಾರನ್ನು ಲಕ್ಷಣ ತಂಡದ ಜೊತೆ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಟಿ ಆಸಿಯಾ ಕನ್ಯಾಕುಮಾರಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇದೀಗ ನಟಿ ಆಸಿಯಾ ಕೋಮಲ್ ಕುಮಾರ್ ನಟನೆಯ ಕಾಲಾಯ ತಸ್ಮೈ ನಮಃ ಚಿತ್ರದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post