ಸ್ಯಾಂಡಲ್ವುಡ್ ಖ್ಯಾತ ನಟಿ ಕಾರುಣ್ಯ ರಾಮ್ ಸದ್ಯ ಜಾಲಿ ಟ್ರಿಪ್ನಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಖುಷಿಯಿಂದ, ಉತ್ಸಾಹದಿಂದ ಎಲ್ಲ ಕೆಲಸವನ್ನು ಮಾಡುವ ನಟಿ ಕಾರುಣ್ಯ ರಾಮ್ ಅವರು ತಮ್ಮ ಪ್ರೀತಿಯ ಅಕ್ಕನ ಜೊತೆ ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ಜೋರ್ಡನ್ ಪೆಟ್ರಾದಲ್ಲಿ ಎಂಜಾಯ್ ಮಾಡ್ತಾ ಇದ್ದಾರೆ.
ಇದನ್ನು ಓದಿ: ಕನಸಿನಿಂದ ಗುರಿ..ಗುರಿಯಿಂದ ಸಾಧನೆ; ಹೊಸ ಕಾರು ಕೊಂಡ ಖುಷಿಯಲ್ಲಿ ನಟಿ ಕಾರುಣ್ಯ ರಾಮ್
ಇನ್ನು ನಟಿ ಕಾರುಣ್ಯ ರಾಮ್ ವಿಶ್ವದ ಅದ್ಭುತಗಳಲ್ಲಿ ಒಂದಾದ ಜೋರ್ಡನ್ ಪೆಟ್ರಾಕ್ಕೆ ಭೇಟಿ ಕೊಟ್ಟಿದ್ದಾರೆ. ಜೋರ್ಡಾನ್ ಪೆಟ್ರಾದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಕಾರುಣ್ಯ ಅವರು ಆಗಾಗ ಹೊಸ ಹೊಸ ಸ್ಥಳಕ್ಕೆ ಭೇಟಿ ನೀಡುತ್ತಾ ಇರುತ್ತಾರೆ.
ಬಿಳಿ ಬಣ್ಣದ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ನಟಿ ಕಾರುಣ್ಯ ರಾಮ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಜ್ರಕಾಯ ಮತ್ತು ಕಿರಿಗೂರಿನ ಗಯ್ಯಾಳಿಗಳು ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post