ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಪುರುಷರ ಡ್ರೆಸ್ಗಳನ್ನು ಧರಿಸುತ್ತಾರೆ. ಆದರೆ ಪುರುಷರು ಮಾತ್ರ ಮಹಿಳೆಯರ ಬಟ್ಟೆಗಳನ್ನು ಸುತರಾಂ ಧರಿಸುವುದಿಲ್ಲ. ಮಾತ್ರವಲ್ಲ, ಅದನ್ನು ಒಪ್ಪುವುದು ಇಲ್ಲ. ಆದ್ರೆ ಇಲ್ಲೊಂದು ಸ್ಟೋರಿ ಮಾತ್ರ ತುಂಬಾ ಮಜವಾಗಿದೆ. ಯಾಕಂದ್ರೆ ಈ ವ್ಯಕ್ತಿ ಸ್ಕರ್ಟ್, ಹೀಲ್ಸ್ ಧರಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿದಿನ ಮಹಿಳೆಯರ ಉಡುಪನ್ನೇ ಧರಿಸುತ್ತಾ ಆಫೀಸಿಗೆ ತೆರಳುತ್ತಾರೆ. ಅಂದಹಾಗೆಯೇ, ಈತನ ಬಗ್ಗೆ ತಿಳಿದುಕೊಳ್ಳಬೇಕಾ? ಈ ಸ್ಟೋರಿ ಓದಿ.
ಅಮೆರಿಕಾದ ಟೆಕ್ಸಾಸ್ ಮೂಲದ ಮಾರ್ಕ್ ಬ್ರಿಯಾನ್ಗೆ ಮಹಿಳೆಯ ಉಡುಪೆಂದರೆ ಬಲು ಇಷ್ಟವಂತೆ. ಹಾಗಾಗಿ ಪ್ರತಿದಿನ ಸ್ಕರ್ಟ್, ಹೀಲ್ಸ್ ಧರಿಸಿ ಆಫೀಸಿಗೆ ಹೋಗುತ್ತಾರೆ. ಮಾರ್ಕ್ ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾರೆ. ರೊಬೊಟಿಕ್ಸ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಮದುವೆ, ಪಾರ್ಟಿ ಏನೇ ಇದ್ದರು ಮಾರ್ಕ್ ಮಾತ್ರ ಮಹಿಳೆಯರ ಉಡುಪನ್ನೇ ಧರಿಸಿ ಹಾಜರಾಗುತ್ತಾರೆ.
ಮಾರ್ಕ್ ಬ್ರಿಯಾನ್ಗೆ ಸದ್ಯ 63 ವರ್ಷ. ಆದರೂ ಈ ವಯಸ್ಸಿನಲ್ಲೂ ಮಹಿಳೆಯರ ಬಟ್ಟೆ ಧರಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಹೆಚ್ಚೆಂದರೆ ಹೆಂಡತಿಯ ಬಟ್ಟೆಯನ್ನು ಮಾರ್ಕ್ ಧರಿಸುತ್ತಾರಂತೆ. ಆಕೆಯೊಂದಿಗೆ ಶಾಪಿಂಗ್, ಪಾರ್ಟಿಗೆ ತೆರಳುವಾಗಲೂ ಸ್ಕರ್ಟ್, ಹೀಲ್ಸ್ ಧರಿಸುತ್ತಾರೆ.
ಮಹಿಳೆಯರು ಪರುಷರ ಬಟ್ಟೆಯನ್ನು ತೊಡುತ್ತಾರೆ. ಆದ್ರೆ ಪುರುಷರು ಯಾಕೆ ಮಹಿಳೆಯ ಬಟ್ಟೆ ಧರಿಸಬಾರದು ಎಂಬುದು ಮಾರ್ಕ್ ಬ್ರಿಯಾನ್ ಪ್ರಶ್ನೆ. ಹಾಗಾಗಿ ತನ್ನೊಳಗಿನ ಪ್ರಶ್ನೆಗೆ ತಾನೇ ಉತ್ತರಿಸುವ ಮೂಲಕ ಮಹಿಳೆಯರ ಬಟ್ಟೆಯನ್ನು ಮಾರ್ಕ್ ಬ್ರಿಯಾನ್ ಧರಿಸುತ್ತಿದ್ದಾರೆ. 20 ವರ್ಷದಿಂದ ಪುರುಷರ ಡ್ರೆಸ್ ಹಾಕಿ ಬೇಸರಗೊಂಡಿದ್ದ ಬ್ರಿಯಾನ್ ಕೊಂಚ ಬದಲಾವಣೆ ಇರಲಿ ಎಂದು ಲೆಟೀಸ್ ಬಟ್ಟೆಗಳನ್ನ ಧರಿಸಲು ಶುರು ಮಾಡುತ್ತಾರೆ. 2015ರಲ್ಲಿ ಪ್ರಾರಂಭವಾಗಿ ಇಂದಿಗೂ ಕೂಡ ಸ್ಕರ್ಟ್ ಮತ್ತು ಹೀಲ್ಸ್ ಹಾಕಿ ಆಫೀಸಿಗೆ ತೆರಳುತ್ತಾರೆ.
ಸದ್ಯ ಮಾರ್ಕ್ ಬ್ರಿಯಾನ್ ಮಹಿಳೆಯರ ಬಟ್ಟೆ ಧರಿಸುವ ಮೂಲಕ ಟ್ರೆಂಡಿಂಗ್ನಲ್ಲಿದ್ದಾರೆ. ಜೊತೆಗೆ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳು ಹರಿದಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post