ಬೆಂಗಳೂರು ಟ್ರಾಫಿಕ್ ಕಿರಿಕಿರಿಯಲ್ಲಿ ಬಳಲುತ್ತಿರುವ ವಾಹನ ಸವಾರರಿಗೆ ಇದು ಗುಡ್‌ನ್ಯೂಸ್. ಬಹಳ ದಿನಗಳಿಂದ ಐಟಿ, ಬಿಟಿ ಉದ್ಯೋಗಿಗಳು ನಿರೀಕ್ಷಿಸುತ್ತಿರುವ ವೈಟ್‌ಫೀಲ್ಡ್ – ಕೆ.ಆರ್ ಪುರಂ ಮೆಟ್ರೋ ಮಾರ್ಗ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ.
ಬೆಂಗಳೂರಿನ ಐಟಿ, ಬಿಟಿಗಳ ಕೇಂದ್ರ ಸ್ಥಾನವಾದ ವೈಟ್‌ಫೀಲ್ಡ್‌ಗೆ ಮೆಟ್ರೋ ರೈಲು ವಿಸ್ತರಿಸುವ ಬೇಡಿಕೆ ಇತ್ತು. ಸದ್ಯ ವೈಟ್‌ಫೀಲ್ಡ್ – ಕೆ.ಆರ್ ಪುರಂ ನಡುವೆ 13.2 ಕಿಲೋ ಮೀಟರ್ ಮೆಟ್ರೋ ಮಾರ್ಗ ಪ್ರಯಾಣಕ್ಕೆ ರೆಡಿಯಾಗಿದೆ. ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ವೈಟ್‌ಫೀಲ್ಡ್ – ಕೆ.ಆರ್ ಪುರಂ ನಡುವಿನ ಮೆಟ್ರೋ ಮಾರ್ಗವನ್ನ ಉದ್ಘಾಟನೆ ಮಾಡಲಿದ್ದಾರೆ.
ಸದ್ಯ ನೇರಳೆ ಬಣ್ಣದ ನಮ್ಮ ಮೆಟ್ರೋ ಬೈಯಪ್ಪನಹಳ್ಳಿವರೆಗೂ ಸಂಚಾರಿಸುತ್ತಿತ್ತು. ಇದೀಗ ನೇರಳೆ ಬಣ್ಣದ ಮೆಟ್ರೋ ಸಂಚಾರವನ್ನ ವೈಟ್‌ಫೀಲ್ಡ್‌ವರೆಗೂ ವಿಸ್ತರಿಸಲಾಗಿದೆ. ಹೊಸ ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರು 35 ರೂಪಾಯಿ ಖರ್ಚು ಮಾಡಿ 22 ಕಿಲೋ ಮೀಟರ್ ಸಂಚರಿಸಬಹುದಾಗಿದೆ.
* PM @narendramodi to inaugurate Whitefield-KR Puram Metro section on March 25
* Whitefield- KR Puram fare: Rs 35 (travel time: 22 minutes )
* Metro frequency: 10-12 minutes
* Dedicated shuttle bus services between KR Puram & SV Road Metro stations 👇https://t.co/hRkUvDmbVJ pic.twitter.com/J2LK9LMGVV— ChristinMathewPhilip (@ChristinMP_) March 17, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post