ಸತತ ಸೋಲಿನಿಂದ ಕೆಂಗೆಟ್ಟ ಆರ್‌ಸಿಬಿ, ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ. ಆ ಮೂಲಕ ಗೆಲುವಿನ ರುಚಿ ಕಂಡಿದೆ. ಆದ್ರೆ ಆರ್‌ಸಿಬಿ ವುಮೆನ್ಸ್ ಗೆಲುವಿಗೆ ಕಾರಣ ಬೇರೆಯವರೇ ಇದ್ದಾರೆ. ಹಾಗಾದ್ರೆ ಆರ್‌ಸಿಬಿ ಜಯದ ಹಿಂದಿರುವ ಆ ಸೂಪರ್ ಮ್ಯಾನ್ ಯಾರು?
ವುಮೆನ್ ಪ್ರೀಮಿಯರ್ ಲೀಗ್ನ ಬಿಡ್ಡಿಂಗ್ ಆಗಿದ್ದೇ ತಡ. ಇಂಟರ್ನೆಟ್ನಲ್ಲಿ ಸೆನ್ಸೇಷನ್ ಹುಟ್ಟಿಹಾಕಿದ್ದು ಆರ್‌ಸಿಬಿ.. ಬಿಡ್ಡಿಂಗ್ನಲ್ಲಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರ್ತಿಯರ ಪಟ್ಟಿ ನೋಡಿದ್ಮೇಲಂತೂ, ಚೊಚ್ಚಲ ಐಪಿಎಲ್ ಕಪ್ ಗೆಲ್ಲೋದು ಗ್ಯಾರಂಟಿ ಎಂಬ ಮಾತು ಸೋಶಿಯಲ್ ಮೀಡಿಯಾ ಟ್ರೆಂಡ್ ಆಗಿತ್ತು. ಯಾಕಂದ್ರೆ ಆರ್‌ಸಿಬಿ ಖರೀದಿಸಿದ ತಂಡ ಅಷ್ಟರ ಮಟ್ಟಿಗೆ ಬಲಿಷ್ಠವಾಗಿತ್ತು. ಇದೇ ಕಾರಣಕ್ಕೆ ಕಪ್ ಗೆಲ್ಲೋ ಕನಸು ಈಡೇರುತ್ತೆಂಬ ನಂಬಿಕೆ ಎವೆರೆಸ್ಟ್ ಶಿಖರವನ್ನೇ ದಾಟಿತ್ತು. ಇದೆಲ್ಲವೂ ಒಮ್ಮೆಲೆ ಹುಸಿಯಾಯ್ತು. ಯಾಕಂದ್ರೆ, ಆರ್‌ಸಿಬಿ ವುಮೆನ್ಸ್ ಸತತ ಸೋತಿದ್ದು ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಮ್ಯಾಚ್..
ಸತತ ಐದು ಹೀನಾಯ ಸೋಲುಗಳು ದುರ್ಬಲ ತಂಡಗಳ ಎದುರು ಕೂಡ ಸೋತಿದ್ದ ಆರ್‌ಸಿಬಿ, ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚ್ ಗೆಲ್ಲೋದೇ ಪವಾಡ ಎಂಬ ರೀತಿಯಾಗಿತ್ತು. ಕಪ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದವರೆ, ಕೊಂಕು ನುಡಿಯುವಂತಾಗಿತ್ತು. ಆದ್ರೆ, ಇದೆಲ್ಲವನ್ನ ಉಲ್ಟಾ ಮಾಡಿದ್ದು ರನ್ ಸಾಮ್ರಾಟ ವಿರಾಟ್ ಕೊಹ್ಲಿ.
ಕುಗ್ಗಿದ್ದ ಆರ್ಸಿಬಿಗೆ ಹೋರಾಟದ ಕಿಚ್ಚೆಬ್ಬಿಸಿದ ಕಿಂಗ್!
ಸತತ ಸೋಲಿನಿಂದ ಮಾನಸಿಕವಾಗಿ ಕುಗ್ಗಿದ್ದ ಆರ್‌ಸಿಬಿ ವುಮೆನ್ಸ್, ಸಹಜವಾಗೇ ಗೆಲುವಿನ ಹೋರಾಟವನ್ನೇ ಮರೆತಿದ್ದರು. ಇನ್ನೇನಿದ್ದರೂ ಪಂದ್ಯಗಳನ್ನಾಡಿ ಮನೆಗೆ ಹೆಜ್ಜೆ ಹಾಕುವ ಲೆಕ್ಕಚಾರದಲ್ಲಿದ್ದರು. ಆದ್ರೆ ಇದೆಲ್ಲವನ್ನೂ ಬದಲಿಸಿದ್ದು ಕಿಂಗ್ ವಿರಾಟ್ ಕೊಹ್ಲಿ ಹೇಳಿದ ಒಂದೇ ಒಂದು ಮಾತು.
ನಾನು 15 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ. ಆದರೂ ಟ್ರೋಫಿ ಗೆದ್ದಿಲ್ಲ. ಆದ್ರೆ, ಪ್ರತಿ ವರ್ಷ ಐಪಿಎಲ್ ಆಡೋ ಉತ್ಸಾಹ ಮಾತ್ರ ಕಡಿಮೆಯಾಗಲ್ಲ. ನಾನು ಏನು ಮಾಡಬಲ್ಲೆ, ನಾವು ಆಡುವ ಪ್ರತಿಯೊಂದು ಟೂರ್ನಿಯನ್ನ ಗೆಲ್ಲಲು ಆಗಲ್ಲ. ಯಾವಾಗಲೂ ನಿಮಗೆ ಸಿಕ್ಕ ಅವಕಾಶದ ಬಗ್ಗೆ ಯೋಚಿಸಿ. ನಾವು ಈಗಲೂ ಐಪಿಎಲ್ ಅನ್ನ ಗೆದ್ದಿಲ್ಲ ಎಂಬ ಅಂಶವನ್ನೂ ಯೋಚಿಸುತ್ತೇನೆ. ಏಕೆಂದರೆ ನಾವು ವಿಶ್ವದ ಅತ್ಯುತ್ತಮ ಅಭಿಮಾನಿಗಳನ್ನ ಹೊಂದಿದ್ದೇವೆ. ನಾವು ಆರ್ಸಿಬಿಗಾಗಿ ಆಡಿದ ಪ್ರತಿಯೊಂದು ಪಂದ್ಯ ಅಭಿಮಾನಿಗಳಿಗೆ ಅಂತ್ಯತ ವಿಶೇಷವಾದ ವಿಷಯ. ಯಾಕೆಂದರೆ, ಅವರ ಮುಖದ ನಗು ನಮ್ಮ ಬದ್ಧತೆಯನ್ನ ತೋರಿಸುತ್ತದೆ. ಕಪ್ ಗೆಲ್ಲುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಆದರೆ, 100ರಷ್ಟು ಬದ್ಧತೆ ನೀಡುವುದು ಮಾತ್ರ ನಮ್ಮ ಕೈಯಲ್ಲಿದೆ.
ವಿರಾಟ್ ಕೊಹ್ಲಿ, ಆರ್‌ಸಿಬಿ ಮಾಜಿ ನಾಯಕ
ಈ ಒಂದು ಪ್ರೇರಾಣಾತ್ಮಕ ಮಾತೇ, ಸ್ಮೃತಿ ಮಂಧಾನ ಪಡೆ ಯಪಿ ವಾರಿಯರ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆದ್ದೂ, ಪ್ಲೇ-ಆಫ್ ಆಸೆಯನ್ನ ವಂತವಾಗಿರಿಕೊಳ್ಳುವಂತಾಗಿದೆ. ಅಷ್ಟೇ ಅಲ್ಲ.! ಕುಗ್ಗಿದ್ದ ನಮ್ಮ ಆರ್‌ಸಿಬಿ ವುಮೆನ್ಸ್ ಪುಟಿದೇಳುವಂತೆ ಮಾಡಿದೆ. ಇದನ್ನ ಸ್ವತಃ ಆರ್‌ಸಿಬಿ ತಂಡದ ಪ್ರಮುಖ ಆಟಗಾರ್ತಿ ಹೀದರ್ ನೈಟ್ ಹೇಳಿಕೊಂಡಿದ್ದಾರೆ.
ಕೊಹ್ಲಿ ಉತ್ಸಾಹ ತುಂಬಿದರು..!
ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ತಮ್ಮ ತಂಡದೊಂದಿಗೆ ಮಾತನಾಡಿದ್ದರು. ಆತ ನಮ್ಮನ್ನ ಸಾಕಷ್ಟು ಪ್ರೇರೇಪಿಸಿದರು.
ಹೀದರ್ ನೈಟ್, ಆರ್‌ಸಿಬಿ ಆಟಗಾರ್ತಿ
ಆರ್‌ಸಿಬಿ ವುಮೆನ್ಸ್ಗೆ ಉತ್ಸಾಹ ತುಂಬಿರುವ ವಿರಾಟ್ ಕೊಹ್ಲಿ, ಮಂದಾನ ಪಡೆ ಗೆಲುವಿಗೆ ಪರೋಕ್ಷ ಕಾರಣರಾಗಿದ್ದಾರೆ. ಅಷ್ಟೇ ಅಲ್ಲ.! ತಾನೋರ್ವ ಲೀಡರ್, ಮೆಂಟರ್, ಮೋಟಿವೇಟರ್ ಅನ್ನೋದನ್ನೂ ಫ್ರೂವ್ ಮಾಡಿದ್ದಾರೆ.
ಕಿಂಗ್ ಕೊಹ್ಲಿಗಿದೆ ಆತ್ಮಸ್ಥೈರ್ಯ ತುಂಬುವ ಕಲೆ
ಕೊಹ್ಲಿ ಅಂದ್ರೆನೇ ಅಲ್ಲಿ ಕಾಣೋದು ಕೆಚ್ಚೆದೆಯ ಹೋರಾಟ.. ಸೋಲಿನಲ್ಲೂ ಗೆಲುವಿಗಾಗಿ ಹೋರಾಡುವ ಛಲ. ಇದೇ ಛಲವೇ ಈಗ ವಿರಾಟ್ ಕೊಹ್ಲಿಯನ್ನ ಛಲದಂಕ ಮಲ್ಲನಾಗಿ ನಿಲ್ಲಿಸಿದೆ. ಇನ್ಫ್ಯಾಕ್ಟ್.. ನಾಯಕನಾಗಿದ್ದಾಗ ಏಟಿಗೆ ಏಟು, ತಿರುಗೇಟು ನೀಡುವ ಗುಣ. ಸಹ ಆಟಗಾರರಲ್ಲೂ ಬೆಳೆಯುವಂತೆ ಮಾಡಿ ಟಕ್ಕರ್ ನೀಡುವಂತೆ ಮಾಡಿತ್ತು. ಇದೇ ಪ್ರೇರಣಾತ್ಮಕ ಮಾತುಗಳೇ ಈಗ ಆರ್‌ಸಿಬಿ ವುಮೆನ್ಸ್ ತಂಡದ ಆಕ್ರಮಣಕಾರಿ ಆಟ ಆಡುವಂತೆ ಮಾಡಿದೆ. ಇದೇ ಮೆಂಟರ್ ಕೊಹ್ಲಿ ಮಾತುಗಳೇ ದುರ್ಬಲ ತಂಡದ ಎದುರು ಸೋಲುತ್ತಿದ್ದ ಆರ್ಸಿಬಿಯನ್ನ ಪುಟಿದೇಳುವಂತೆ ಮಾಡಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.
UPW v RCB, Game Day Dressing Room Chat
Virat’s key insights, the Perry and Kanika show, tactical changes with the bowling and overcoming the negative mind space – we cover everything that helped RCB turn it around against UPW last night.#PlayBold #ನಮ್ಮRCB #SheIsBold #WPL2023 pic.twitter.com/IiHpoLqsVM
— Royal Challengers Bangalore (@RCBTweets) March 16, 2023
ಒಟ್ನಲ್ಲಿ.! ಅದೇನೇ ಆಗಲಿ.! ಸೋಲಿನ ಸುಳಿಯಲ್ಲಿದ್ದ ಸ್ಮೃತಿ ಮಂದಾನ ಪಡೆಯನ್ನ ವಿರಾಟ್ ಬಡಿದೆಬ್ಬಿಸಿದ್ದು. ಇದೇ ಧಮ್ ಧಾರ್ ಪರ್ಫಾಮೆನ್ಸ್ ಮುಂದುವರಿಸಿದ್ರೆ. ಪ್ಲೇ-ಆಫ್ ಆಸೆ ಕೈಬಿಟ್ಟಿದ್ದ ಫ್ಯಾನ್ಸ್ಗೆ ಮತ್ತೆ ಕಪ್ ಗೆಲ್ಲೋ ಆಸೆಗೆ ಮತ್ತೆ ಜೀವ ಸಿಗೋದರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post