ನನಗೆ ಕಬ್ಜ ಸಿನಿಮಾ ಟಿಕೆಟ್ ಸಿಗಲಿಲ್ಲ ಎಂದು ಸ್ಟಾರ್ ಡೈರೆಕ್ಟರ್ ಆರ್. ಚಂದ್ರು ಹೇಳಿದ್ದಾರೆ. ಕಬ್ಜ ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲಾಡುತ್ತಿರೋ ಆರ್. ಚಂದ್ರು, ನನಗೆ ಬಹಳ ಸಂತೋಷ ಆಗುತ್ತಿದೆ. ನನ್ನ ಕರಿಯರ್ನಲ್ಲೇ ಮೊದಲ ಮೂರು ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವುದು ಕಬ್ಜ ಸಿನಿಮಾದ್ದು ಮಾತ್ರ. ಇದು ಮೂರು ಸ್ಟಾರ್ಗಳ ಗೆಲುವು ಎಂದರು.
ಶ್ರೀಕಾಂತ್ ಸಾರ್ ನನಗೆ 15 ಟಿಕೆಟ್ ಬೇಕು ಎಂದು ಕೇಳಿದ್ದರು. ಅದಕ್ಕೆ ನಾನು ಊರ್ವಶಿ ಥಿಯೇಟರ್ ಡಿಸ್ಟ್ರಿಬ್ಯೂಟರ್ಗೆ ಕಾಲ್ ಮಾಡಿ ಟಿಕೆಟ್ ಕೇಳಿದೆ. ಆಗ ನನಗೆ 15 ಟಿಕೆಟ್ ಸಿಗಲಿಲ್ಲ. ಬಳಿಕ ಹೇಗೋ ಕಷ್ಟಪಟ್ಟು ಟಿಕೆಟ್ ತೆಗೆದುಕೊಂಡೆವು ಎಂದು ಹೇಳಿದರು.
ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವದ ಎಲ್ಲಾ ಕಡೆಯಿಂದಲೂ ಫೋನ್ ಮಾಡಿ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದು ನನ್ನ ಗೆಲುವು ಅಲ್ಲ, ನನ್ನ ಸ್ಟಾರ್ಗಳ ಗೆಲುವು. ಜನ ಈಗಾಗಲೇ ಕಬ್ಜ ಪಾರ್ಟ್ 2 ಯಾವಾಗ? ಎಂದು ಕೇಳುತ್ತಿದ್ದಾರೆ. ಇದಕ್ಕಿಂತ ಖುಷಿ ಮತ್ತೇನಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಎಂದು ಹೇಳುತ್ತೇವೆ. ನಮ್ಮ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಶಿವಣ್ಣನ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಉಪ್ಪಿ, ಕಿಚ್ಚ ಸಾರ್ ಅಂತೂ ಸೂಪರ್. ಶ್ರೆಯಾ ಡ್ಯಾನ್ಸ್ಗೆ ಜನ ಕೇಕೆ ಶಿಳ್ಳೆ ಹೊಡೆದಿದ್ದಾರೆ. ಒಂದೊಂದು ಸೀನ್ ಅದ್ಭುತ ಎಂದು ಹೊಗಳುತ್ತಿದ್ದಾರೆ ಜನ ಎಂದರು ಚಂದ್ರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post