ವಿಕೇಂಡ್ ಬಂತು ಅಂದ್ರೆ ಸಾಕು ರಿಯಾಲಿಟಿ ಶೋಗಳ ಮನರಂಜನೆ ಹಬ್ಬ ಶುರುವಾಗಿ ಬಿಡುತ್ತದೆ. ಸಂಜೆ 6ರಿಂದ ಹಿಡಿದು ರಾತ್ರಿ 10ರ ವರೆಗೆ ರಿಯಾಲಿಟಿ ಶೋಗಳದ್ದೆ ಹವಾ. ಸದ್ಯ ಯೂನಿಕ್ ರಿಯಾಲಿಟಿ ಶೋ ಆದ ಸೂಪರ್ ಕ್ವೀನ್ಸ್ ತನ್ನದೇ ಆದ ವಿಭಿನ್ನ ಫಾರ್ಮೇಟ್ನಲ್ಲಿ ಎಲ್ಲರ ಮನಸ್ಸನ್ನ ಗೆದಿದ್ದೆ. ಹೆಣ್ಣು ಮಕ್ಕಳನ್ನ ಗೌರವಿಸುವ ವೇದಿಕೆ ಸೂಪರ್ ಕ್ವೀನ್ಸ್.
ಇದನ್ನು ಓದಿ: ಬಿಜೆಪಿಯಿಂದ ಒಕ್ಕಲಿಗರ ಟಾರ್ಗೆಟ್; ಟಿಪ್ಪು ಕೊಲೆ; ಉರಿಗೌಡ, ನಂಜೇಗೌಡ ಬಗ್ಗೆ ಸಿನಿಮಾ; HDK ಏನಂದ್ರು?
ಈ ವೇದಿಕೆಯಲ್ಲಿ ಹರಟೆ ಮೋಜು ಮಸ್ತಿ ಸುಖ ದುಖ: ಎಲ್ಲವು ಮಿಶ್ರಣವಾಗಿರುತ್ತದೆ. ಇನ್ನು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ವೊಂದನ್ನ ಕೊಟ್ಟಿದೆ. ಸದ್ಯದಲ್ಲೇ ಸೂಪರ್ ಕ್ವೀನ್ಸ್ ವೈಂಡ್ ಅಪ್ ಆಗಲಿದೆ. ಹೆಣ್ಣು ಮಕ್ಕಳ ನೆಚ್ಚಿನ ಶೋ ಆಗಿದ್ದ ಸೂಪರ್ ಕ್ವೀನ್ಸ್ ತನ್ನ ಅಭಿಮಾನಿಗಳಿಗೆ ಸದ್ಯದಲ್ಲೇ ಅಂತಿಮ ವಿದಾಯ ಹೇಳಿಲಿದೆ. ಇನ್ನು ಕೆಲವೇ ವಾರಗಳಲ್ಲಿ ಸೂಪರ್ ಕ್ವೀನ್ಸ್ ಗ್ರ್ಯಾಂಡ್ ಫಿನಾಲೆ ಇದ್ದು, ಅದು ಮುಗಿದ ನಂತರ ಶೋ ಮುಕ್ತಾಯ ಆಗಲಿದೆ.
ಕುರಿ ಪ್ರತಾಪ್ ಅವರ ತರ್ಲೆ ತುಂಟಾಟಗಳು, ಶ್ವೇತಾ ಚೆಂಗಪ್ಪ ಅವರ ಸ್ವಚ್ಛಂದವಾದ ಮಾತುಗಳು, ಡಿಂಪಲ್ ಕ್ವೀನ್ ಸ್ಮೈಲ್, ರಾಘು ಅವರ ಮಾತಿನ ಕಚಗುಳಿ, ಇವೆಲ್ಲವೂ ಇನ್ನೇನು ಕೆಲವೇ ವಾರಗಳಷ್ಟೇ ಸೂಪರ್ ಕ್ವೀನ್ ಸೀಸನ್ 01ರ ವಿನ್ನರ್ ಪಟ್ಟವನ್ನ ಅನೌನ್ಸ್ ಮಾಡಿದ ನಂತ ಶೋ ಕಂಪ್ಲೀಟ್ ಆಗಿ ಮುಕ್ತಾಯವಾಗಲಿದೆ. ಇದಾದ ನಂತರ ಆ ಜಾಗಕ್ಕೆ ಚೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೊಸ ಸೀಸನ್ ಬರಲಿದೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post