ಭೂಕಂಪನದಿಂದ ತತ್ತರಿಸಿ ಹೋಗಿದ್ದ ಟರ್ಕಿಗೆ ಮತ್ತೊಮ್ಮೆ ಪ್ರಕೃತಿ ಮರ್ಮಾಘಾತವನ್ನೇ ಕೊಟ್ಟಿದೆ. ಭಾರೀ ಮಳೆಯಿಂದ ಟರ್ಕಿ ತತ್ತರಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆರಾಯನ ರೋಷಾವೇಶಕ್ಕೆ ವಾಹನಗಳು ಕೊಚ್ಚಿ ಹೋಗ್ತಿವೆ. ಡಾಂಬರ್ ರಸ್ತೆಗಳೇ ತುಂಡಾಗಿ ಪ್ರವಾಹದಲ್ಲಿ ಮುಳುಗ್ತಿವೆ. ಇತ್ತೀಚೆಗಷ್ಟೇ ಭೂಕಂಪಕ್ಕೆ ನಲುಗಿ ಹೋಗಿದ್ದ ಟರ್ಕಿಗೆ ಮತ್ತೊಮ್ಮೆ ಬರಸಿಡಿಲು ಮಳೆಯ ರೂಪದಲ್ಲಿ ಅಪ್ಪಳಿಸಿದೆ. ಭಾರೀ ಮಳೆಯಿಂದ ಟರ್ಕಿಯಲ್ಲಿ ಪ್ರವಾಹ ಉಂಟಾಗಿದ್ದು ಈಗಷ್ಟೇ ಗಾಯವಾಗಿದ್ದ ಟರ್ಕಿಗೆ ಬರೆ ಎಳೆದಂತಾಗಿದೆ.
ಸತತ ಮಳೆ ಹಾಗೂ ಪ್ರವಾಹಕ್ಕೆ ಟರ್ಕಿ ಅಕ್ಷರಶಃ ತತ್ತರ
ಭೂಕಂಪ ಪೀಡಿತ ಪ್ರದೇಶಗಳಲ್ಲೇ ಪ್ರವಾಹ
ಸತತ ಮಳೆ ಹಾಗೂ ಪ್ರವಾಹಕ್ಕೆ ಟರ್ಕಿ ಅಕ್ಷರಶಃ ತತ್ತರಿಸಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲೇ ಪ್ರವಾಹ ಉಂಟಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ದೇಶಕ್ಕೆ ಮರ್ಮಾಘಾತವಾಗಿದೆ. ಭೂಕಂಪದಿಂದ ಕಂಗಾಲಾಗಿ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದ ಜನರಿಗೆ ಪ್ರವಾಹ ಭಾರಿ ಹೊಡೆತ ಕೊಟ್ಟಿದೆ.
ನದಿಯಂತಾಗಿ ಮಾರ್ಪಟ್ಟ ಟರ್ಕಿಯ ಹಲವು ನಗರಗಳು
ವರುಣನ ಆರ್ಭಟಕ್ಕೆ ಟರ್ಕಿಯ ಹಲವು ನಗರಗಳು ಅಕ್ಷರಶಃ ನದಿಯಂತಾಗಿ ಮಾರ್ಪಟ್ಟಿವೆ. ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಟರ್ಕಿಯ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪಾರ್ಕಿಂಗ್ಗೆ ನೀರು ನುಗ್ಗಿದ್ದು, ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಈ ವೇಳೆ ಕಾರು ಮಾಲೀಕನೊಬ್ಬ ತನ್ನ ಕಾರು ನೀರು ಪಾಲಾಗ್ತಿರೋದನ್ನ ತಲೆ ಮೇಲೆ ಕೈಹೊತ್ತುಕೊಂಡು ನೋಡ್ತಿದ್ದದ್ದು ಎಂಥವರನ್ನೂ ಮರುಗುವಂತೆ ಮಾಡಿತ್ತು.
ನೀರಿನ ಹೊಡೆತಕ್ಕೆ ಕೊಚ್ಚಿ ಹೋದ ಡಾಂಬರ್ ರಸ್ತೆ
ಇನ್ನು ಪ್ರವಾಹದ ಹೊಡೆತಕ್ಕೆ ಕೇವಲ ವಾಹನಗಳು, ಮನೆಗಳು ಮಾತ್ರ ಕೊಚ್ಚಿ ಹೋಗಿಲ್ಲ. ಡಾಂಬರ್ ರಸ್ತೆಗಳೂ ಕೂಡ ಕೊಚ್ಚಿ ಹೋಗಿವೆ. ನೋಡ ನೋಡ್ತಿದ್ದಂತೆ ರಸ್ತೆಯೊಂದು ತುಂಡಾಗಿ ಮುಳುಗಿದೆ. ಅಲ್ಲದೇ ಎಲ್ಲ ರಸ್ತೆಗಳಲ್ಲಿ ನೀರು ರಭಸದಿಂದ ಹರಿಯುತ್ತಿದೆ. ಇನ್ನು ಟರ್ಕಿಯಲ್ಲಿ ಪ್ರವಾಹದ ರಭಸ ಎಷ್ಟರಮಟ್ಟಿಗೆ ಇದೆ ಅಂದ್ರೆ ಜನರು ಕೂಡ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದಾರೆ. ಹೀಗೆ ಕೊಚ್ಚಿ ಹೋಗ್ತಿದ್ದವರನ್ನ ಸ್ಥಳೀಯರು ರಕ್ಷಿಸಿದ್ದಾರೆ.
ನೆರೆ ಹಾವಳಿಯಿಂದ 12 ಜನರು ಸಾವು.. ಹಲವರು ನಾಪತ್ತೆ
ಟರ್ಕಿಯ ಆದಿಯಾಮನ್, ಸ್ಯಾನ್ಲಿಯುರ್ಫಾ ಪ್ರಾಂತ್ಯದಲ್ಲಿ ಕಳೆದ 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಟುಟ್ ಪಟ್ಟಣದಲ್ಲಿ ಭೂಕಂಪದಿಂದ ಬದುಕುಳಿದಿದ್ದವರು ಕಂಟೇನರ್‌ನಲ್ಲಿ ವಾಸವಾಗಿದ್ದರು. ಪ್ರವಾಹಕ್ಕೆ ಕಂಟೇನರ್ ಕೊಚ್ಚಿ ಹೋಗಿದ್ದು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದಿಯಾಮನ್‌ನಲ್ಲಿ ಪ್ರವಾಹದಿಂದ ಇಬ್ಬರು ಮೃತಪಟ್ಟಿದ್ದಾರೆ. ಮಾತ್ರವಲ್ಲದೇ ಹಲವು ಜನರು ನಾಪತ್ತೆಯಾಗಿದ್ದು ಶೋಧಕಾರ್ಯ ನಡೆಸಲಾಗ್ತಿದೆ ಎಂದು ಟರ್ಕಿಯ ಗೃಹ ಇಲಾಖೆ ತಿಸಿಸಿದೆ. ಭೂಕಂಪದಿಂದ ಚೇತರಿಸಿಕೊಳ್ಳುತ್ತಿದ್ದ ಟರ್ಕಿಗೆ ಈ ಪ್ರವಾಹ ಸಹ ಭಾರೀ ಪೆಟ್ಟು ಕೊಡ್ತಿದೆ. ಭಾರಿ ಮಳೆಯಿಂದ ಜನಜೀವನ ಆಸ್ತವ್ಯಸ್ತಗೊಂಡಿದ್ದು ಹಲವು ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಸಂಕಷ್ಟದಲ್ಲಿರುವ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
This is how they saved the mother and her baby who were caught in the flood waters..
After the earthquake, Turkey was hit by a flood this time..🥲🇹🇷🙏#selfelaketi #floodDisaster #earthquake #inundaciones #CreditSuisse #洪水 pic.twitter.com/TPpuXCSQW4
— Mohd Ahtisham Ahsan (@MohdAhtishamAh1) March 16, 2023
JUST IN 🚨 Massive floods hit Sanliurfa, Turkey – Streets turned into lake. pic.twitter.com/QrokodB1wn
— Truthseeker (@Xx17965797N) March 15, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post