ಮೊದಲ ದಿನದಿಂದ ಯಶಸ್ಸಿನ ದಾರಿಯಲ್ಲಿ ನಡೆದುಕೊಂಡು ಬರ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಸೀರಿಯಲ್ ತಂಡದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡರೂ ಸೀರಿಯಲ್ನ ಯಶಸ್ಸು, ಜನಪ್ರೀಯತೆ ಮಾತ್ರ ಕಮ್ಮಿಯಾಗಿಲ್ಲ. ಇಂದಿಗೂ ಟಾಪ್ ಸೀರಿಯಲ್ ಲಿಸ್ಟ್ನಲ್ಲಿ ಜೊತೆ ಜೊತೆಯಲಿ ಸ್ಪೆಷಲ್ ಸ್ಥಾನ ಪಡೆದುಕೊಂಡಿದೆ.
ಇದನ್ನು ಓದಿ: ಸರ್ಪ್ರೈಸ್ ರೂಪದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಕನ್ಯಾಕುಮಾರಿ ಖ್ಯಾತಿಯ ನಟಿ ಆಸಿಯಾ; ಯಾವ ಸೀರಿಯಲ್ ಗೊತ್ತಾ?
ಸದ್ಯ ಧಾರಾವಾಹಿ ತಂಡ ಸೆಲೆಬ್ರೇಷನ್ ಮೂಡ್ನಲ್ಲಿದೆ. ಈ ಸಂಭ್ರಮ, ಸಡಗರಕ್ಕೆ ಕಾರಣ 900ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ ಜೊತೆ ಜೊತೆಯಲಿ. ಹೊಸ ಹೊಸ ಪಾತ್ರಗಳನ್ನ ಪರಿಚಯ ಮಾಡಿಸುವುದರ ಮೂಲಕ ವೀಕ್ಷಕರ ಕುತೂಹಲವನ್ನು ಕಾಯ್ದುಕೊಂಡಿದೆ. ಸದ್ಯ ಸೀರಿಯಲ್ಗೆ ಕನ್ನಡತಿ ಖ್ಯಾತಿಯ ಸುಚಿ ಅಲಿಯಾಸ್ ನಟಿ ಅಮ್ರತಾ ಎಂಟ್ರಿಕೊಟ್ಟಿದ್ದಾರೆ. ಇವರ ಜೊತೆಗೆ ಮತ್ತೊಂದು ಸ್ಟ್ರಾಂಗ್ ಪಾತ್ರ ಎಂಟಿಯಾಗಿದ್ದು, ಕತೆಯನ್ನ ಬೇರೆಯದ್ದೇ ಸ್ಟೈಲ್ನಲ್ಲಿ ತೆಗೆದುಕೊಂಡು ಹೋಗಲಿವೆ ಈ ಪಾತ್ರಗಳು.
ಅನು ಹಾಗೂ ಆರ್ಯ ಬದುಕಿನ ಚಿತ್ರಣ ಹೇಗೆ ಬದಲಾಗುತ್ತದೆ? ಅನು ಮತ್ತೆ ತನ್ನ ಸಂಸಾರವನ್ನ ಕಟ್ಟಿಕೊಳ್ತಾ ಅನ್ನೋ ಕೌತುಕವನ್ನ ಕಾಯ್ದುಕೊಂಡಿದ್ದಾರೆ ನಿರ್ದೇಶಕರು. ಅವರ ಲೈಫ್ ಜರ್ನಿಯ ಗತಕಾಲ ಅಂದ್ರೆ ಹಿಂದೆಯೇ ಕತೆಗೆ ಮರುಜೀವ ಬರಲಿದೆ. ಈ ಸಂಭ್ರಮಕ್ಕೆ ಇಡೀ ತಂಡ ಸಾಕ್ಷಿಯಾಗಿದ್ದು, ಯಶಸ್ವಿ ಜರ್ನಿಯನ್ನ ಎಂಜಾಯ್ ಮಾಡ್ತಿದೆ. ಒಟ್ಟಿನಲ್ಲಿ ಮತ್ತಷ್ಟು ಮನರಂಜನೆಯ ಸಂಚಿಕೆಗಳು ಹೊರಬರಲಿ, ವೀಕ್ಷಕರನ್ನ ರಂಜಿಸಲಿ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post