16ನೇ ಐಪಿಎಲ್ ಅಖಾಡಕ್ಕೆ ವೇದಿಕ್ಕೆ ಸಜ್ಜಾಗಿದೆ. ಆರ್ಸಿಬಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಯಾಕಂದ್ರೆ ರೆಡ್ ಆರ್ಮಿ ಸೈನ್ಯಕ್ಕೆ ಇಬ್ಬರೂ ತೂಫಾನ್ಸ್ ಎಂಟ್ರಿಕೊಡ್ತಿದ್ದಾರೆ. ಇವರ ಎಂಟ್ರಿ ಆರ್ಸಿಬಿಯಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ.
ಬಹುನಿರೀಕ್ಷಿತ ಐಪಿಎಲ್ ಮಹಾಹಬ್ಬ ಬಂದೇ ಬಿಡ್ತು. ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಮಾರ್ಚ್ 31 ರಿಂದ ಮಿಲಿಯನ್ ಡಾಲರ್ ಟೂರ್ನಿಗೆ ಗ್ರ್ಯಾಂಡ್ ಕಿಕ್ ಸಿಗಲಿದೆ. ಈಗಾಗ್ಲೇ ಎಲ್ಲಾ ಟೀಮ್ಸ್ ಭರದ ಸಿದ್ಧತೆ ನಡೆಸಿವೆ. ಇದೇ ಹೊತ್ತಲ್ಲಿ ಆರ್ಸಿಬಿಗೆ ಇಬ್ಬರು ಸ್ಪೆಷಲ್ ಪರ್ಸನ್ ಎಂಟ್ರಿಕೊಡೋದಕ್ಕೆ ವೇದಿಕ್ಕೆ ಸಜ್ಜಾಗಿದೆ. ಸದ್ಯ ಈ ಮಾಸ್ ಮಹಾರಾಜರ ಎಂಟ್ರಿಯಿಂದ ಐಪಿಎಲ್ ಮತ್ತಷ್ಟು ಕಾವೇರಿದೆ.
ಅಂದಹಾಗೇ ಆರ್ಸಿಬಿಗೆ ಎಂಟ್ರಿಕೊಡ್ತಿರೋ ಈ ಇಬ್ಬರು ವ್ಯಕ್ತಿಗಳು ಸಾಮಾನ್ಯದವರಲ್ಲ. ಆರ್ಸಿಬಿ ಚರಿಷ್ಮಾ ಬದಲಿಸಿದ ಖ್ಯಾತನಾಮರು. ಐಪಿಎಲ್ ಅನ್ನೋ ರಂಗಿನ್ ಆಟಕ್ಕೆ ಹೊಸ ದಿಕ್ಕು ತೋರಿಸಿದವರು. ಐಪಿಎಲ್ ಆಡಿದ್ರೆ ಹೀಗೆನೇ ಆಡ್ಬೇಕು ಅಂತ ತೋರಿಸಿಕೊಟ್ಟವರು. ಓರ್ವ ಪವರ್ಫುಲ್ ಹಿಟ್ಟರ್. ಮತ್ತೋರ್ವ ಮೋಸ್ಟ್ ಡೇಂಜರಸ್ ಬ್ಯಾಟರ್. ಈಗ ಈ ಇಬ್ಬರು ಸೂಪರ್ಸ್ಟಾರ್ಸ್ ಆರ್ಸಿಬಿ ಸೇರಿಕೊಳ್ಳುವ ಕಾಲ ಸನ್ನಿಹಿತವಾಗಿದೆ.
ಆರ್ಸಿಬಿ ಸೇರಿಕೊಳ್ಳಲಿದ್ದಾರೆ ದಿ ಲೆಜೆಂಡ್ಸ್ ..!
ಹೊಸ ಸಂಚಲನ ಸೃಷ್ಟಿಸಿದ ಟಿ20 ಸ್ಪೆಶಲಿಸ್ಟ್ಸ್..!
ಆರ್ಸಿಬಿ ತಂಡವೆಂದ್ರೇನೆ ಹಾಗೇ. ಕಪ್ ಗೆಲ್ಲೋದು ಬಿಡೋದು ಸೆಕೆಂಡರಿ. ಬಟ್ ರೆಡ್ ಆರ್ಮಿಯಲ್ಲಿ ಜೋಶ್ಗೆ ಬರವಿರಲ್ಲ. ಈ ಸಲವೂ ಆ ಜೋಶನ್ನ ದುಪ್ಪಟ್ಟಾಗಿಸಲು ಇಬ್ಬರು ಪಾಪ್ಯುಲರ್ ಕ್ರಿಕೆಟರ್ಸ್ ಆರ್ಸಿಬಿಗೆ ಎಂಟ್ರಿಕೊಡ್ತಿದ್ದಾರೆ. ಅಷ್ಟಕ್ಕೂ ರೆಡ್ ಆರ್ಮಿಗೆ ಎಂಟ್ರಿಕೊಡ್ತಿರೋ ಆ ಇಬ್ಬರು ಕಿಲಾಡಿ ಕ್ರಿಕೆಟರ್ಸ್ ಬೇರಾರು ಅಲ್ಲ, ಅವರೇ ಎಬಿ ಡಿವಿಲಿಯರ್ಸ್ ಮತ್ತು ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್.
ಮರಳಿ ಗೂಡಿಗೆ ಎಬಿಡಿ-ಕ್ರಿಸ್ ಗೇಲ್..!
ಮಾರ್ಚ್ 26ಕ್ಕೆ ಇಬ್ಬರು ಬೆಂಗಳೂರಿಗೆ ಆಗಮನ
ಕ್ರಿಸ್ ಗೇಲ್ ಹಾಗೂ ಎಬಿಡಿ ವಿಲಿಯರ್ಸ್.. ಆರ್ಸಿಬಿ ಕಂಡ ದಿ ಗ್ರೇಟ್ ಬ್ಯಾಟರ್ಸ್. ಈ ಜೋಡೆತ್ತಿಲ್ಲದ ಆರ್ಸಿಬಿ ಇತಿಹಾಸ ಅಪೂರ್ಣ. ಇವರಿಗೂ ಆರ್ಸಿಬಿ ತಂಡಕ್ಕೆ ವಿಶೇಷ ನಂಟಿದೆ. 2011 ರಿಂದ ತಂಡದ ಭಾಗವಾಗಿದ್ರು. ಲೆಕ್ಕವಿಲ್ಲದಷ್ಟು ಪಂದ್ಯ ಗೆಲ್ಲಿಸಿಕೊಟ್ಟಿದ್ರು. ಆರ್ಸಿಬಿ ಜನಪ್ರಿಯ ತಂಡವಾಗಲು ಇಬ್ಬರ ಕೊಡುಗೆ ಅಪಾರ. ಈಗ ಈ ಲೆಜೆಂಡ್ಸ್ ಮರಳಿ ಗೂಡಿಗೆ ಸೇರುವ ಸಮಯ ಬಂದಿದೆ.
ಅಪಾರ ಕೊಡುಗೆ ನೀಡಿದ ಈ ಇಬ್ಬರನ್ನ ಗೌರವಿಸಲು ಆರ್ಸಿಬಿ ನಿರ್ಧರಿಸಿದೆ. ಇದಕ್ಕಾಗಿ ಮಾರ್ಚ್ 26 ರಂದು ಗೇಲ್ ಹಾಗೂ ಎಬಿಡಿಗೆ ಆಲ್ ಆಫ್ ಫೇಮ್ ನೀಡಿ ಗೌರವಿಸಲು ಮುಂದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರೋ ಅದ್ಧೂರಿ ಸಮಾರಂಭದಲ್ಲಿ ಅಭಿಮಾನಿಗಳ ಮುಂದೆ ಈ ಇಬ್ಬರು ದಿಗ್ಗಜರನ್ನ ಸನ್ಮಾನಿಸಲಾಗುತ್ತದೆ.
ಕೊಟ್ಟ ಮಾತಿನಂತೆ ನಡೆದುಕೊಂಡ ಆರ್ಸಿಬಿ ಮಾಲೀಕರು..!
ಕಳೆದ ವರ್ಷ ದಿಗ್ಗಜರಾದ ಕ್ರಿಸ್ ಗೇಲ್ ಹಾಗೂ ಎಬಿಡಿಯನ್ನ ಕರೆಸೋದಾಗಿ ಹೇಳಿತ್ತು. ಅದೇಗೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿತ್ತು. ಕೊನೆಗೂ ಅದಕ್ಕೆ ಆನ್ಸರ್ ಸಿಕ್ಕಿದೆ. ಆಲ್ ಆಫ್ ಫೇಮ್ ನೀಡುವ ಮೂಲಕ ಇಬ್ಬರನ್ನ ಮರಳಿಗೆ ಗೂಡಿಗೆ ಕರೆಸಿಕೊಂಡಿದೆ. ಆ ಮೂಲಕ ಕೊಟ್ಟ ಮಾತನ್ನ ರಾಯಲ್ ಆರ್ಸಿಬಿ ಫ್ರಾಂಚೈಸಿ ಉಳಿಸಿಕೊಂಡಿದೆ.
ಒಟ್ಟಿನಲ್ಲಿ ಗೇಲ್-ಎಬಿಡಿ ಹಳೇ ತಂಡವನ್ನ ಸೇರಿಕೊಳ್ತಿರೋದಂತೂ ನಿಜ. ಬಟ್, ಆಡಲು ಅಲ್ಲ. ಬದಲಿಗೆ ಆಲ್ ಆಫ್ ಫೇಮ್ ಗೌರವ ಸ್ವೀಕರಿಸಲು. ಆದ್ರೆ ಇವರು ಬಂದು ಹಾಗೇ ಹೋಗಲ್ಲ. ಇಡೀ ತಂಡಕ್ಕೆ ಮೋಟಿವೇಶನ್ ಮಾಡ್ತಾರೆ. ಈ ಮೋಟಿವೇಶನ್ 16ನೇ ಐಪಿಎಲ್ನಲ್ಲಿ ಕಪ್ ಗೆಲುವಿಗೆ ರಹದಾರಿ ಆಗಲಿದೆ ಅನ್ನೋದನ್ನೂ ಮರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post